Indonesia Earthquake: ಇಂಡೋನೇಷ್ಯಾದಲ್ಲಿ ಮತ್ತೆ ಪ್ರಬಲ ಭೂಕಂಪ; ರಿಕ್ಟರ್​ ಮಾಪಕದಲ್ಲಿ 6ರಷ್ಟು ತೀವ್ರತೆ ದಾಖಲು

| Updated By: Lakshmi Hegde

Updated on: Feb 02, 2022 | 10:50 AM

ಇಂಡೋನೇಷ್ಯಾದಲ್ಲಿ ಭೂಕಂಪ, ಸುನಾಮಿಯಂಥ ನೈಸರ್ಗಿಕ ವಿಪತ್ತು ಪದೇಪದೆ ನಡೆಯುತ್ತಿರುತ್ತದೆ. 2004ರಲ್ಲಿ ಸುಮಾತ್ರ ಕರಾವಳಿಯಲ್ಲಿ ಉಂಟಾಗಿದ್ದ 9.1 ತೀವ್ರತೆಯ ಭೂಕಂಪನವುಂಟಾಗಿ,  ಭೀಕರ ಸುನಾಮಿ ಎದ್ದ ಪರಿಣಾಮ 2,20,000 ಮಂದಿ ಪ್ರಾಣಕಳೆದುಕೊಂಡಿದ್ದರು.

Indonesia Earthquake: ಇಂಡೋನೇಷ್ಯಾದಲ್ಲಿ ಮತ್ತೆ ಪ್ರಬಲ ಭೂಕಂಪ; ರಿಕ್ಟರ್​ ಮಾಪಕದಲ್ಲಿ 6ರಷ್ಟು ತೀವ್ರತೆ ದಾಖಲು
ಪ್ರಾತಿನಿಧಿಕ ಚಿತ್ರ
Follow us on

ಇಂಡೋನೇಷ್ಯಾದಲ್ಲಿ ಮತ್ತೊಂದು ಪ್ರಬಲ ಭೂಕಂಪ (Indonesia Earthquake) ಸಂಭವಿಸಿದೆ. ಈ ಬಾರಿ ಕೇಪುಲೌನ್ ಬರತ್ ದಯಾ ಎಂಬಲ್ಲಿ ಭೂಮಿ ನಡುಗಿದ್ದು, ರಿಕ್ಟರ್​ ಮಾಪಕದಲ್ಲಿ ಸುಮಾರು 6 ಮೆಗ್ನಿಟ್ಯೂಡ್​​ಗಳಷ್ಟು ತೀವ್ರತೆ ದಾಖಲಾಗಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್​ಸಿ) ಮಾಹಿತಿ ನೀಡಿದೆ. ಭೂಕಂಪನ ಭೂಮಿಯಿಂದ 127 ಕಿಮೀ (78.91 ಮೈಲು) ಆಳದಲ್ಲಿ ಆಗಿದೆ ಎಂದು ತಿಳಿಸಿದ್ದೆ. ಭೂಕಂಪದ ತೀವ್ರತೆ 6.4ರಷ್ಟಿತ್ತು ಎಂದು ಮೊದಲು ವರದಿಯಾಗಿತ್ತು. ಆದರೆ ಅದನ್ನು ಇಎಂಎಸ್​ಸಿ ಮತ್ತೊಮ್ಮೆ ಪರಿಷ್ಕರಿಸಿದ ಬಳಿಕ 6ರಷ್ಟು ತೀವ್ರತೆ ಎಂದು ಹೇಳಲಾಗಿದೆ. 

ಇಂಡೋನೇಷ್ಯಾದಲ್ಲಿ ಭೂಕಂಪ ಹೊಸದಲ್ಲ. ಪದೇಪದೆ ಅಲ್ಲಿ ಪ್ರಬಲವಾಗಿಯೇ ಭೂಮಿ ನಡುಗುತ್ತಿರುತ್ತದೆ. 2021ರ ಜನವರಿಯಲ್ಲಿ ಸುಲವೇಸಿ ದ್ವೀಪದಲ್ಲಿ ಭೂಕಂಪನವಾಗಿತ್ತು. ಅದರಲ್ಲಿ 42 ಮಂದಿ ಮೃತಪಟ್ಟಿದ್ದು, 600ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆಗ ಕೂಡ ರಿಕ್ಟರ್​ ಮಾಪಕದಲ್ಲಿ 6ರಷ್ಟು ತೀವ್ರತೆಯಲ್ಲಿ ಭೂಕಂಪವಾದ ಪರಿಣಾಮ ಅದೆಷ್ಟೋ ಕಟ್ಟಡಗಳು, ಆಸ್ಪತ್ರೆಗಳು ನೆಲಸಮವಾಗಿದ್ದವರು. ಅದು ಬಿಟ್ಟರೆ ಇತ್ತೀಚೆಗೆ ಅಂದರೆ 2021ರ ಡಿಸೆಂಬರ್​​ನಲ್ಲಿ ಫ್ಲೋರೆಸ್​ ದ್ವೀಪದ ಸಮೀಪ 7.3ರಷ್ಟು ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಆಗ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿತ್ತು.

ಇಂಡೋನೇಷ್ಯಾದಲ್ಲಿ ಭೂಕಂಪ, ಸುನಾಮಿಯಂಥ ನೈಸರ್ಗಿಕ ವಿಪತ್ತು ಪದೇಪದೆ ನಡೆಯುತ್ತಿರುತ್ತದೆ. 2004ರಲ್ಲಿ ಸುಮಾತ್ರ ಕರಾವಳಿಯಲ್ಲಿ ಉಂಟಾಗಿದ್ದ 9.1 ತೀವ್ರತೆಯ ಭೂಕಂಪನವುಂಟಾಗಿ,  ಭೀಕರ ಸುನಾಮಿ ಎದ್ದ ಪರಿಣಾಮ 2,20,000 ಮಂದಿ ಪ್ರಾಣಕಳೆದುಕೊಂಡಿದ್ದರು. 2018ರಲ್ಲಿ ಲಾಂಬೋಕ್ ದ್ವೀಪದಲ್ಲಿ ಹಲವು ದಿನಗಳ ಕಾಲ ನಿರಂತರವಾಗಿ ಭೂಮಿಕಂಪಿಸಿದ ಕಾರಣ ಲಾಂಬೋಕ್​ ಮತ್ತು ಸುಂಬಾವಾದ 550ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು.  ಇದನ್ನೆಲ್ಲ ಹೊರತು ಪಡಿಸಿ ಕೂಡ ಅನೇಕ ಬಾರಿ ವಿವಿಧ ದ್ವೀಪಗಳಲ್ಲಿ ಆಗಾಗ ಭೂಕಂಪನವಾಗುತ್ತಿರುತ್ತದೆ.

ಇದನ್ನೂ ಓದಿ: Parliament Budget Session ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ: ಲೋಕಸಭೆಯಲ್ಲಿ ಮೊದಲು ಮಾತನಾಡಲಿದ್ದಾರೆ ರಾಹುಲ್ ಗಾಂಧಿ

Published On - 9:53 am, Wed, 2 February 22