Elon Musk: ಕಚೇರಿ ಐಚ್ಛಿಕವಲ್ಲ: ತಡರಾತ್ರಿ 2.30ಕ್ಕೆ ಟ್ವಿಟ್ಟರ್ ಉದ್ಯೋಗಿಗಳಿಗೆ ಹೀಗೊಂದು ಇ-ಮೇಲ್ ಕಳುಹಿಸಿದ ಎಲಾನ್ ಮಸ್ಕ್

ಎಲಾನ್​ ಮಸ್ಕ್ ಟ್ವಿಟ್ಟರ್​ನ ಅಧಿಕಾರವಹಿಸಿಕೊಂಡ ಬಳಿಕ ಹಲವು ಬದಲಾವಣೆಗಳಾಗಿವೆ, ಸಾಕಷ್ಟು ಉದ್ಯೋಗಿಗಳ ವಜಾಗೊಳಿಸಲಾಗಿದೆ.

Elon Musk: ಕಚೇರಿ ಐಚ್ಛಿಕವಲ್ಲ: ತಡರಾತ್ರಿ 2.30ಕ್ಕೆ ಟ್ವಿಟ್ಟರ್ ಉದ್ಯೋಗಿಗಳಿಗೆ ಹೀಗೊಂದು ಇ-ಮೇಲ್ ಕಳುಹಿಸಿದ ಎಲಾನ್ ಮಸ್ಕ್
ಎಲಾನ್ ಮಸ್ಕ್​

Updated on: Mar 26, 2023 | 9:03 AM

ಎಲಾನ್​ ಮಸ್ಕ್ ಟ್ವಿಟ್ಟರ್​ನ ಅಧಿಕಾರವಹಿಸಿಕೊಂಡ ಬಳಿಕ ಹಲವು ಬದಲಾವಣೆಗಳಾಗಿವೆ, ಸಾಕಷ್ಟು ಉದ್ಯೋಗಿಗಳ ವಜಾಗೊಳಿಸಲಾಗಿದೆ. ವರ್ಕ್​ ಫ್ರಂ ಹೋಂ ನಿಲ್ಲಿಸಿ ಎಲ್ಲರನ್ನೂ ಕಚೇರಿಗೆ ಬರುವಂತೆ ನೋಟಿಸ್ ನೀಡಲಾಯಿತು, ಹೀಗೆ ಹಲವು ಬದಲಾವಣೆಗಳು ನಡೆಯುತ್ತಿವೆ. ಇದೀಗ ತಡರಾತ್ರಿ 2.30ಕ್ಕೆ ತನ್ನ ಉದ್ಯೋಗಿಗಳಿಗೆ ಎಲಾನ್ ಮಸ್ಕ್ ಇ-ಮೇಲ್ ಮಾಡಿದ್ದು, ಅದರಲ್ಲಿ ಕಚೇರಿ ಐಚ್ಛಿಕವಲ್ಲ ಎಂದು ಬರೆಯಲಾಗಿದೆ.

ಸ್ಯಾನ್​ಫ್ರಾನ್ಸಿಸ್ಕೋದ ಕಚೇರಿ ಅರ್ಧಕ್ಕರ್ಧ ಖಾಲಿ ಇದ್ದಿದ್ದನ್ನು ಗಮನಿಸಿ ಎಲಾನ್ ಮಸ್ಕ್ ತಡರಾತ್ರಿ ಇ-ಮೇಲ್ ಕಳುಹಿಸಿದ್ದಾರೆ.
ಟ್ವಿಟರ್ ಅನ್ನು 44 ಶತಕೋಟ ಡಾಲರ್​ಗೆ ಖರೀದಿಸಿದ ನಂತರ, ಅದು ತನ್ನ ಮುಕ್ಕಾಲು ಭಾಗದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಅದೇ ಸಮಯದಲ್ಲಿ, ಈ ಹಿಂಬಡ್ತಿ ಇನ್ನಷ್ಟು ಹೆಚ್ಚಾಗಬಹುದು ಎಂದು ವರದಿಯೊಂದು ಹೇಳುತ್ತದೆ.

ಮತ್ತಷ್ಟು ಓದಿ: Twitter: ಶೀಘ್ರದಲ್ಲೇ ದೀರ್ಘ ರೂಪದ ಟ್ವೀಟ್‌ಗಳ ಅಕ್ಷರ ಮಿತಿ 10,000ಕ್ಕೆ ಹೆಚ್ಚಿಸಲಿದೆ ಟ್ವಿಟರ್: ಸಿಇಒ ಎಲಾನ್ ಮಸ್ಕ್

ಇದಲ್ಲದೇ ಈಗ ಬ್ಲೂ ಬ್ಯಾಡ್ಜ್ ಪರಿಶೀಲನೆಗೆ ಜನರಿಂದ ಹಣ ವಸೂಲಿ ಮಾಡಲಾಗುತ್ತಿದೆ . ಎಲಾನ್​ ಮಸ್ಕ್ ಬ್ಯುಸಿನೆಸ್ ಗೋಲ್ಡ್ ಬ್ಯಾಡ್ಜ್‌ಗೆ 1000 ರೂ.ವರೆಗೆ ಶುಲ್ಕ ವಿಧಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಬ್ಲೂ ಬ್ಯಾಡ್ಜ್ನಲ್ಲಿ ಶುಲ್ಕವನ್ನು ನೀಡದಿದ್ದರೆ, ಅದನ್ನು ಏಪ್ರಿಲ್ 1 ರಿಂದ ತೆಗೆದುಹಾಕಲಾಗುತ್ತದೆ ಎಂದು ಹೇಳಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us