ಕ್ಯಾಪಿಟಲ್ ಬಿಲ್ಡಿಂಗ್‌ನಲ್ಲಿ ಘರ್ಷಣೆ: ಡೊನಾಲ್ಡ್​ ಟ್ರಂಪ್​ ಇನ್‌ಸ್ಟಾಗ್ರಾಂ, ಫೇಸ್​ಬುಕ್ ಖಾತೆ 2 ವಾರ ಬ್ಲಾಕ್​

|

Updated on: Jan 07, 2021 | 10:47 PM

ಅಮೆರಿಕದ ಕ್ಯಾಪಿಟಲ್ ಬಿಲ್ಡಿಂಗ್‌ನಲ್ಲಿ ಟ್ರಂಪ್​ ಬೆಂಬಲಿಗರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ಉಂಟಾದ ಹಿನ್ನೆಲೆಯಲ್ಲಿ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಇನ್‌ಸ್ಟಾಗ್ರಾಂ ಮತ್ತು ಫೇಸ್​ಬುಕ್ ಖಾತೆಯನ್ನು ಎರಡು ವಾರಗಳ ಅವಧಿಗೆ ಬ್ಲಾಕ್​ ಮಾಡಲಾಗಿದೆ.

ಕ್ಯಾಪಿಟಲ್ ಬಿಲ್ಡಿಂಗ್‌ನಲ್ಲಿ ಘರ್ಷಣೆ: ಡೊನಾಲ್ಡ್​ ಟ್ರಂಪ್​ ಇನ್‌ಸ್ಟಾಗ್ರಾಂ, ಫೇಸ್​ಬುಕ್ ಖಾತೆ 2 ವಾರ ಬ್ಲಾಕ್​
ಡೊನಾಲ್ಡ್​ ಟ್ರಂಪ್​
Follow us on

ಅಮೆರಿಕದ ಕ್ಯಾಪಿಟಲ್ ಬಿಲ್ಡಿಂಗ್‌ನಲ್ಲಿ ಟ್ರಂಪ್​ ಬೆಂಬಲಿಗರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ಉಂಟಾದ ಹಿನ್ನೆಲೆಯಲ್ಲಿ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಇನ್‌ಸ್ಟಾಗ್ರಾಂ ಮತ್ತು ಫೇಸ್​ಬುಕ್ ಖಾತೆಯನ್ನು ಎರಡು ವಾರಗಳ ಅವಧಿಗೆ ಬ್ಲಾಕ್​ ಮಾಡಲಾಗಿದೆ. ಘರ್ಷಣೆಯ ಬೆನ್ನಲ್ಲೇ ಟ್ರಂಪ್​ ಖಾತೆಗಳನ್ನು 12 ಗಂಟೆಗಳ ಕಾಲ ಬ್ಲಾಕ್ ಮಾಡಲಾಗಿತ್ತು.

ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಫೇಸ್​ಬುಕ್ ಸಂಸ್ಥೆ 2 ವಾರಗಳ ಕಾಲ ಟ್ರಂಪ್​ ಅವರ ಖಾತೆಗಳನ್ನ ಬ್ಲಾಕ್​ ಮಾಡಲಾಗುವುದು ಎಂದು ತಿಳಿಸಿದೆ. ನಿರ್ಗಮಿತ ಅಧ್ಯಕ್ಷ ಟ್ರಂಪ್​ ತಮ್ಮ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಖಾತೆಯ ಮೂಲಕ ಮತ್ತಷ್ಟು ಸಮಸ್ಯೆ ಉಂಟುಮಾಡುವ ಸಾಧ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ, ಅವರ ಖಾತೆಗಳನ್ನು ಬ್ಲಾಕ್​ ಮಾಡಲಾಗುತ್ತಿದೆ ಎಂದು ಫೇಸ್​ಬುಕ್​ ಸಂಸ್ಥೆ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಕ್ಯಾಪಿಟಲ್ ಬಿಲ್ಡಿಂಗ್‌ಗೆ ಟ್ರಂಪ್ ಬೆಂಬಲಿಗರು ಮುತ್ತಿಗೆ ಹಾಕಿದ್ದ ವೇಳೆ ನಿರ್ಗಮಿತ ಅಧ್ಯಕ್ಷ
ತನ್ನ ಬೆಂಬಲಿಗರನ್ನ ಉದ್ದೇಶಿಸಿ ಪ್ರಚೋದನಕಾರಿ ಪೋಸ್ಟ್​ ಮಾಡಿದ್ದರು ಎಂದು ಹೇಳಲಾಗಿದೆ.

ಡೊನಾಲ್ಡ್ ಟ್ರಂಪ್ ಪರ ಪ್ರತಿಭಟನೆ ವೇಳೆ ಹಿಂಸಾಚಾರ: ಮಹಿಳೆ ಸೇರಿ ನಾಲ್ವರು ಸಾವು

ಕ್ಯಾಪಿಟಲ್ ಬಿಲ್ಡಿಂಗ್‌ ಘರ್ಷಣೆ: ಟ್ರಂಪ್ ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಗಳು ಬಂದ್

Published On - 10:33 pm, Thu, 7 January 21