
ಹವಾಯಿ, ಅಕ್ಟೋಬರ್ 3: ಯುಎಸ್ಎಯ ಹವಾಯಿಯ ಅತ್ಯಂತ ಪ್ರಸಿದ್ಧ ಹಾಗೂ ಸುಮಾರು 550 ವರ್ಷಗಳ ಹಿಂದೆ ಲಾವಾರಸದ ಕಲ್ಲುಗಳಿಂದ ರೂಪುಗೊಂಡಿತ್ತು ಎನ್ನಲಾದ ‘ಹೋಲೆ ಸೀ ಆರ್ಚ್’ ನೈಸರ್ಗಿಕ ಕಮಾನು ಪೆಸಿಫಿಕ್ ಸಾಗರಕ್ಕೆ ಕುಸಿದು ಬಿದ್ದಿದೆ. ಇದರೊಂದಿಗೆ ದ್ವೀಪದ ಕರಾವಳಿ ತೀರದ ಅತ್ಯಂತ ಹೆಚ್ಚು ಫೋಟೋ ತೆಗೆಸಿಕೊಳ್ಳಲ್ಪಡುತ್ತಿದ್ದ ಸುಂದರ ನೈಸರ್ಗಿಕ ತಾಣವೊಂದು ಅಂತ್ಯಗೊಂಡಂತಾಗಿದೆ. ಸುಮಾರು 90 ಅಡಿ ಎತ್ತರವಿದ್ದ ಈ ನೈಸರ್ಗಿಕ ಕಮಾನು ಬಿಗ್ ಐಲ್ಯಾಂಡ್‌ನಲ್ಲಿರುವ ‘ಹವಾಯಿ ಜ್ವಾಲಾಮುಖಿ ರಾಷ್ಟ್ರೀಯ ಉದ್ಯಾನವನ’ದ ‘ಚೇನ್ ಆಫ್ ಕ್ರೇಟರ್ಸ್ ರೋಡ್’ ತುದಿಯಲ್ಲಿ ರೂಪ ತಳೆದಿತ್ತು. ಯುಎಸ್ ನ್ಯಾಷನಲ್ ಪಾರ್ಕ್ ಸರ್ವಿಸ್ (NPS) ಪ್ರಕಾರ, ಈ ಕಮಾನು ಸೆಪ್ಟೆಂಬರ್ 23ರವರೆಗೆ ಕರಾವಳಿಯಿಂದ ಗೋಚರಿಸುತ್ತಿತ್ತು. ಆದರೆ ಸೆಪ್ಟೆಂಬರ್ 27ರ ವೇಳೆಗೆ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಈ ಕಮಾನು ಕುಸಿದ ನಿಖರ ಸಮಯ ತಿಳಿದುಬಂದಿಲ್ಲ.
‘ನೋಲೋ’ ಉಷ್ಣವಲಯದ ಚಂಡಮಾರುತದ ಕಾರಣದಿಂದಾಗಿ ಈ ಉದ್ಯಾನವನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಅದೇ ಅವಧಿಯಲ್ಲಿ ಬೃಹತ್ ಅಲೆಗಳ ಹೊಡೆತಕ್ಕೆ ಈ ನೈಸರ್ಗಿಕ ಕಮಾನು ಕುಸಿದಿರಬಹುದು ಎಂದು ಶಂಕಿಸಲಾಗಿದೆ. ಹೋಲೆ ಸೀ ಆರ್ಚ್ ಕಮಾನು ಕಳೆದ ಕೆಲವು ವರ್ಷಗಳಿಂದಲೇ ಶಿಥಿಲಗೊಳ್ಳುವ ಲಕ್ಷಣಗಳನ್ನು ತೋರಿಸುತ್ತಿತ್ತು. ನಿರಂತರ ಸಮುದ್ರದ ಅಲೆಗಳು ಮತ್ತು ಮಣ್ಣಿನ ಸವೆತದಿಂದಾಗಿ ಕರಾವಳಿಯ ಈ ಭಾಗವು ಕ್ರಮೇಣ ದುರ್ಬಲಗೊಳ್ಳುತ್ತಿದ್ದು, ಇದು ಎಂದಾದರೂ ಒಂದು ದಿನ ಸಮುದ್ರಕ್ಕೆ ಕುಸಿಯುತ್ತದೆ ಎಂದು 2021ರಲ್ಲೇ ಎನ್‌ಪಿಎಸ್ ಎಚ್ಚರಿಸಿತ್ತು.
ಇದನ್ನೂ ಓದಿ: ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿದು ವಾಹನ ಸವಾರರ ಪರದಾಟ
ಹೋಲೆ ಸೀ ಆರ್ಚ್ ಕುಸಿಯಲು ಕಾರಣಗಳೇನು?:
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ