PM Modi: ಜಾಗತಿಕ ನಾಯಕತ್ವಕ್ಕಾಗಿ ಪ್ರಧಾನಿ ಮೋದಿಗೆ ಫಿಜಿಯಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

|

Updated on: May 22, 2023 | 11:26 AM

ಪ್ರಧಾನಿ ಮೋದಿಯವರ ಜಾಗತಿಕ ನಾಯಕತ್ವಕ್ಕಾಗಿ "ದಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ" ಪ್ರಶಸ್ತಿಯನ್ನು ನೀಡಲಾಯಿತು. ಪ್ರಧಾನಿ ಮೋದಿ ಅವರು ತಮ್ಮ ಫಿಜಿ ಕೌಂಟರ್‌ ಸಿಟಿವೇನಿ ರಬುಕಾ ಅವರಿಂದ ಪದಕವನ್ನು ಸ್ವೀಕರಿಸಿದರು.

ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಪಪುವಾ ನ್ಯೂ ಗಿನಿಯಾಗೆ (Papua New Guinea) ಭೇಟಿ ನೀಡಿದ್ದಾರೆ. ಪೋರ್ಟ್ ಮೊರೆಸ್ಬಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಪಪುವಾ ನ್ಯೂಗಿನಿಯಾ ಪ್ರಧಾನಿ ಜೇಮ್ಸ್ ಮರಾಪೆ (James Marape) ಅವರು ಆತ್ಮೀಯವಾಗಿ ಸ್ವಾಗತಿಸಿದರು. ಅಚ್ಚರಿ ಎಂಬಂತೆ, ಜೇಮ್ಸ್ ಮರಾಪೆ ಅವರು ಪ್ರಧಾನಿ ಮೋದಿಯವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫಿಜಿಯ ಅತ್ಯುನ್ನತ ಗೌರವವನ್ನು ನೀಡಲಾಗಿದೆ.

ಪ್ರಧಾನಿ ಮೋದಿಯವರ ಜಾಗತಿಕ ನಾಯಕತ್ವಕ್ಕಾಗಿ “ದಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ” ಪ್ರಶಸ್ತಿಯನ್ನು ನೀಡಲಾಯಿತು. ಪ್ರಧಾನಿ ಮೋದಿ ಅವರು ತಮ್ಮ ಫಿಜಿ ಕೌಂಟರ್‌ ಸಿಟಿವೇನಿ ರಬುಕಾ ಅವರಿಂದ ಪದಕವನ್ನು ಸ್ವೀಕರಿಸಿದರು.

Published On - 11:09 am, Mon, 22 May 23