ಫ್ರಾನ್ಸ್ (France) ಪ್ರಧಾನಿ ಎಲಿಜಬೆತ್ ಬೋರ್ನ್ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದು, ನೂತನ ಪ್ರಧಾನಿಯಾಗಿ ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಗೇಬ್ರಿಯಲ್ ಅಟಲ್ (Gabriel Attal) ಅವರನ್ನು ನೇಮಕ ಮಾಡಲಾಗಿದೆ. ಇಂದು ಬೆಳಿಗ್ಗೆ ಎಲಿಜಬೆತ್ ಬೋರ್ನ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಇವರ ಸ್ಥಾನಕ್ಕೆ ಗೇಬ್ರಿಯಲ್ ಅಟಲ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಫ್ರಾನ್ಸ್‌ನ ಅಧ್ಯಕ್ಷರ ಸಚಿವಾಲಯವು ತಿಳಿಸಿದೆ. ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಗೇಬ್ರಿಯಲ್ ಅಟಲ್ ಅವರನ್ನು ಪ್ರಧಾನಿ ಸ್ಥಾನಕ್ಕೆ ಸೂಚಿಸಿದರು. ಅದರಂತೆ ಅವರನ್ನು ನೇಮಕ ಮಾಡಲಾಗಿದೆ.
34 ವರ್ಷದ ಗೇಬ್ರಿಯಲ್ ಅಟಲ್ ಕಿರಿಯ ಹಾಗೂ ಮೊದಲ ಬಾರಿಗೆ ಸಲಿಂಗಕಾಮಿಯೊಬ್ಬರು ದೇಶದ ಪ್ರಧಾನಿಯಾಗಿದ್ದಾರೆ. ಈ ಬದಲಾವಣೆ ಚುನಾವಣೆಗೆ 3 ವರ್ಷ ಇರುವಾಗಲೇ ನಡೆದಿರುವುದು ಫ್ರಾನ್ಸ್ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇನ್ನು ಫ್ರಾನ್ಸ್ ಸಚಿವ ಸಂಪುಟ ಪುನರ್ರಚನೆಗೂ ಮುನ್ನ ಪ್ರಧಾನಿ ಮಂತ್ರಿ ಬದಲಾವಣೆ ಅಚ್ಚರಿಯನ್ನು ಮೂಡಿಸಿದೆ. ಹಾಗೂ ಎಲಿಜಬೆತ್ ಬೋರ್ನ್ ಅವರು ಫ್ರಾನ್ಸ್ ಪ್ರಧಾನಿ ಮಂತ್ರಿಯಾಗಿ ಎರಡು ವರ್ಷ ಕಳೆದಿದೆ. ಇದೀಗ ಅವರ ಬದಲಾವಣೆ ಹಿಂದೆ ರಾಜಕೀಯ ಲೆಕ್ಕಚಾರ ಇದೆ ಎಂದು ಹೇಳಲಾಗಿದೆ.
ಗೇಬ್ರಿಯಲ್ ಅಟ್ಟಲ್ ಅವರು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರದ ವಕ್ತಾರರಾಗಿದ್ದರು. ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ನಿಕಟವರ್ತಿಯು ಹೌದು. ಗೇಬ್ರಿಯಲ್ ದೇಶದ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರು. ಹಾಗೂ ಒಬ್ಬ ಬುದ್ಧಿವಂತ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಒಬ್ಬ ಸ್ಪಷ್ಟ ಆಡಳಿತವನ್ನು ನೀಡುವ ವ್ಯಕ್ತಿ ಎಂಬ ಹೆಗ್ಗಳಿಕೆಯು ಇವರಿಗಿದೆ.
ಇದನ್ನೂ ಓದಿ: ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ಗೆ ಆಹ್ವಾನ
2022ರಲ್ಲಿ ಸಂಪೂರ್ಣ ಬಹುಮತವನ್ನು ಕಳೆದುಕೊಂಡ ನಂತರ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಸರ್ಕಾರ ರಚಿಸಲು ತುಂಬಾ ಒದಾಡಿದ್ದಾರೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಹುಮತ ಪಡೆದು ನಮ್ಮದೆ ಸರ್ಕಾರ ಬರಬೇಕು ಎಂಬ ಕಾರಣಕ್ಕೆ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಗೇಬ್ರಿಯಲ್ ಅಟಲ್ ಒಟ್ಟಾಗಿ ಸರ್ಕಾರಕ್ಕೆ ಹೊಸ ಜೀವವನ್ನು ತುಂಬಲು ಮುಂದಾಗಿದ್ದಾರೆ. ಇನ್ನು ಈ ಆಯ್ಕೆಯನ್ನು ಫ್ರಾನ್ಸ್‌ನ ವಿರೋಧ ಪಕ್ಷ ಟೀಕಿಸಿದೆ. ನಾವು ಇಂತಹ ಯಾವುದೇ ಬದಲಾವಣೆಗೂ ಭಯಪಡುವುದಿಲ್ಲ ಎಂದು ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Tue, 9 January 24