
ಮಿನ್ನಿಪೊಲೀಸ್: ಜಾರ್ಜ್ ಪ್ಲೋಯ್ಡಾ ಹತ್ಯೆಯ ಬಳಿಕ ಅಮೆರಿಕದ ಮಿನ್ನಿಪೊಲೀಸ್ ನಗರದಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಭಾರಿ ಪ್ರತಿಭಟನೆ, ಹಿಂಸೆ, ದಾಂದಲೆ, ಲೂಟಿ, ಸಾರ್ವಜನಿಕ ಆಸ್ತಿಗೆ ಬೆಂಕಿ ಹಚ್ಚಲಾಗುತ್ತಿದೆ.
ಆಮೆರಿಕಾದಲ್ಲಿ ಬಿಳಿ ವರ್ಣದ ವ್ಯಕ್ತಿಗಳನ್ನು ಪೊಲೀಸರು ಗೌರವದಿಂದ ನಡೆಸಿಕೊಳ್ಳುತ್ತಾರೆ. ಆದರೆ ಕಪ್ಪು ವರ್ಣದವರನ್ನು ಸಾಯಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಜಾರ್ಜ್ ಪ್ಲೋಯ್ಡಾ ಹತ್ಯೆ ಬಳಿಕ ಮಿನ್ನಿಪೊಲೀಸ್ ನಗರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹೌಸಿಂಗ್ ಕಾಂಪ್ಲೆಕ್ಸ್ಗೂ ಬೆಂಕಿ ಹಚ್ಚಿದ್ದಾರೆ. ಸೂಪರ್ ಮಾರ್ಕೆಟ್ಗಳನ್ನು ಲೂಟಿ ಮಾಡಿದ್ದಾರೆ.
Published On - 7:52 am, Fri, 29 May 20