ಕೊರೊನಾ ಬಗ್ಗೆ ಸುಳ್ಳು ಮಾಹಿತಿ, WHO ಜೊತೆಗಿನ ಸಂಬಂಧಕ್ಕೆ ಅಮೆರಿಕ ಗುಡ್ಬೈ
ವಾಷಿಂಗ್ಟನ್: ಕಿಲ್ಲರ್ ಕೊರೊನಾ ವೈರಸ್ಗೆ ಇಡೀ ವಿಶ್ವವೇ ಪತರಗುಟ್ಟಿ ಹೋಗಿದೆ. ವಿಶ್ವದ ದೊಡ್ಡಣ್ಣ ಅಮೆರಿಕವಂತೂ ಕೊರೊನಾ ಕ್ರಿಮಿಯಿಂದ ನಲುಗಿ ಹೋಗಿದೆ. ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆಯೊಂದಿಗಿನ ಸಂಬಂಧವನ್ನ ಅಮೆರಿಕ ಕಡಿತಗೊಳಿಸಿದೆ. WHO ಜೊತೆಗಿನ ಸಂಬಂಧಕ್ಕೆ ಅಮೆರಿಕ ಗುಡ್ಬೈ ಹೇಳಿದ್ದು, ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ. ಅಲ್ಲದೆ, WHOಗೆ ಅಮೆರಿಕ ನೀಡುತ್ತಿದ್ದ ಎಲ್ಲಾ ಅನುದಾನವನ್ನೂ ಕಡಿತ ಮಾಡಿದ್ದಾರೆ. ಚೀನಾದ ಏಜೆಂಟ್ ರೀತಿ WHO ವರ್ತನೆ ಮಾಡುತ್ತಿದೆ. ಕೊರೊನಾ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ […]
ವಾಷಿಂಗ್ಟನ್: ಕಿಲ್ಲರ್ ಕೊರೊನಾ ವೈರಸ್ಗೆ ಇಡೀ ವಿಶ್ವವೇ ಪತರಗುಟ್ಟಿ ಹೋಗಿದೆ. ವಿಶ್ವದ ದೊಡ್ಡಣ್ಣ ಅಮೆರಿಕವಂತೂ ಕೊರೊನಾ ಕ್ರಿಮಿಯಿಂದ ನಲುಗಿ ಹೋಗಿದೆ. ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆಯೊಂದಿಗಿನ ಸಂಬಂಧವನ್ನ ಅಮೆರಿಕ ಕಡಿತಗೊಳಿಸಿದೆ.
WHO ಜೊತೆಗಿನ ಸಂಬಂಧಕ್ಕೆ ಅಮೆರಿಕ ಗುಡ್ಬೈ ಹೇಳಿದ್ದು, ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ. ಅಲ್ಲದೆ, WHOಗೆ ಅಮೆರಿಕ ನೀಡುತ್ತಿದ್ದ ಎಲ್ಲಾ ಅನುದಾನವನ್ನೂ ಕಡಿತ ಮಾಡಿದ್ದಾರೆ.
ಚೀನಾದ ಏಜೆಂಟ್ ರೀತಿ WHO ವರ್ತನೆ ಮಾಡುತ್ತಿದೆ. ಕೊರೊನಾ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸುಳ್ಳು ಮಾಹಿತಿ ನೀಡಿದೆ. ಕೊವಿಡ್-19 ವಿಚಾರದಲ್ಲಿ ಜಗತ್ತಿನ ದಾರಿ ತಪ್ಪಿಸಿದೆ. ಈ ಹಿಂದೆ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ ಎಂದಿತ್ತು. ಸುಧಾರಣೆಗೆ ವಿಫಲವಾದ ಕಾರಣ WHO ಜತೆಗಿನ ಸಂಬಂಧ ಕೊನೆಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಸ್ಪಷ್ಟನೆ ಕೊಟ್ಟಿದ್ದಾರೆ.