ಸ್ವಚ್ಛ ಭಾರತ: ಪ್ರಧಾನಿ ಮೋದಿಗೆ ಗ್ಲೋಬಲ್ ಅವಾರ್ಡ್​ ಕೊಟ್ಟ ಬಿಲ್ ಗೇಟ್ಸ್​

|

Updated on: Sep 25, 2019 | 11:38 AM

ನ್ಯೂಯಾರ್ಕ್​: ‘ಸ್ವಚ್ಛ ಭಾರತ ಅಭಿಯಾನ’ ಮೂಲಕ ದೇಶಾದ್ಯಂತ ಸ್ವಚ್ಛತೆಗೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ಬಿಲ್ ಅಂಡ್ ಮೆಲಿಂಡ​ ಗೇಟ್ಸ್​ ಫೌಂಡೇಷನ್ ಸಂಸ್ಥೆ ‘ಗ್ಲೋಬಲ್ ಗೋಲ್ ಕೀಪರ್’ ಪ್ರಶಸ್ತಿ ನೀಡಿ ಗೌರವಿಸಿದೆ. ‘ಗ್ಲೋಬಲ್ ಗೋಲ್ ಕೀಪರ್’ ಪ್ರಶಸ್ತಿಯನ್ನು ಭಾರತ ದೇಶದ 130 ಕೋಟಿ ಜನರಿಗೆ ಸಮರ್ಪಿಸಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೆ ದೇಶದಲ್ಲಿ ಸ್ವಚ್ಛಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗೆ ಮಹಿಳೆಯರು ಮತ್ತು ಮಕ್ಕಳು ಕೈಜೋಡಿಸಿದ್ದಾರೆ. ಇದರಿಂದ ನನಗೆ ಹೆಚ್ಚು […]

ಸ್ವಚ್ಛ ಭಾರತ: ಪ್ರಧಾನಿ ಮೋದಿಗೆ ಗ್ಲೋಬಲ್ ಅವಾರ್ಡ್​ ಕೊಟ್ಟ ಬಿಲ್ ಗೇಟ್ಸ್​
Follow us on

ನ್ಯೂಯಾರ್ಕ್​: ‘ಸ್ವಚ್ಛ ಭಾರತ ಅಭಿಯಾನ’ ಮೂಲಕ ದೇಶಾದ್ಯಂತ ಸ್ವಚ್ಛತೆಗೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ಬಿಲ್ ಅಂಡ್ ಮೆಲಿಂಡ​ ಗೇಟ್ಸ್​ ಫೌಂಡೇಷನ್ ಸಂಸ್ಥೆ ‘ಗ್ಲೋಬಲ್ ಗೋಲ್ ಕೀಪರ್’ ಪ್ರಶಸ್ತಿ ನೀಡಿ ಗೌರವಿಸಿದೆ.

‘ಗ್ಲೋಬಲ್ ಗೋಲ್ ಕೀಪರ್’ ಪ್ರಶಸ್ತಿಯನ್ನು ಭಾರತ ದೇಶದ 130 ಕೋಟಿ ಜನರಿಗೆ ಸಮರ್ಪಿಸಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೆ ದೇಶದಲ್ಲಿ ಸ್ವಚ್ಛಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗೆ ಮಹಿಳೆಯರು ಮತ್ತು ಮಕ್ಕಳು ಕೈಜೋಡಿಸಿದ್ದಾರೆ. ಇದರಿಂದ ನನಗೆ ಹೆಚ್ಚು ಸಂತೋಷವಾಗಿದೆ ಎಂದು ನ್ಯೂಯಾರ್ಕ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಎಂ ಮೋದಿ ಹೇಳಿದ್ದಾರೆ.

2014ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಪ್ರಧಾನಿ ಮೋದಿ ‘ಸ್ವಚ್ಛ ಭಾರತ ಅಭಿಯಾನ’ವನ್ನು ಆರಂಭಿಸಿದ್ದರು.

Published On - 11:28 am, Wed, 25 September 19