‘ಭಾರತದ ಆಪ್ತ’ ನೆತನ್ಯಾಹು ಅಧಿಕಾರದಿಂದ ದೂರ, ಹಂಗಿನರಮನೆಯಲ್ಲಿ ಚುಕ್ಕಾಣಿ ಯಾರ ಕೈಗೆ?

|

Updated on: Sep 19, 2019 | 3:36 PM

ಭಾರತ ದೇಶಕ್ಕೆ ಆಪ್ತರೆನಿಸಿರುವ, ಇಸ್ರೇಲ್​ನ ಬಲಾಢ್ಯ ಪ್ರಧಾನಿ ಬೆಂಜಮಿನ್​ ನೆತನ್ಯಾಹು ರಾಜಕೀಯ ಭವಿಷ್ಯ ತೂಗುಯ್ಯಾಲೆಯಲ್ಲಿದೆ. 6 ತಿಂಗಳ ಅವಧಿಯಲ್ಲಿ ಇಸ್ರೇಲ್​ನಲ್ಲಿ ಮೊನ್ನೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಎಣಿಕೆ ಬಹುತೇಕ ಮುಗಿದಿದ್ದು, ನೆತನ್ಯಾಹು ನಾಯಕತ್ವದ ಕನ್ಸರ್ವೆಟೀವ್​ ಲುಕಿಡ್​ ಪಕ್ಷ 32 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಲು ಸಾಧ್ಯವಾಗಿದೆ. ಇನ್ನು, ಎದುರಾಳಿ ಮಾಜಿ ಸೇನಾ ದಂಡನಾಯಕ ಬೆನ್ನಿ ಗಾಂಟ್ಜ್​ ನೇತೃತ್ವದ ಬ್ಲ್ಯೂ ಅಂಡ್​ ವೈಟ್​ ಪಕ್ಷ 33 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಇಸ್ರೇಲ್​ ಸಂಸತ್ತಿನಲ್ಲಿ ಒಟ್ಟು 120 ಸದಸ್ಯರ ಬಲಾಬಲ […]

ಭಾರತದ ಆಪ್ತ ನೆತನ್ಯಾಹು ಅಧಿಕಾರದಿಂದ ದೂರ, ಹಂಗಿನರಮನೆಯಲ್ಲಿ ಚುಕ್ಕಾಣಿ ಯಾರ ಕೈಗೆ?
Follow us on

ಭಾರತ ದೇಶಕ್ಕೆ ಆಪ್ತರೆನಿಸಿರುವ, ಇಸ್ರೇಲ್​ನ ಬಲಾಢ್ಯ ಪ್ರಧಾನಿ ಬೆಂಜಮಿನ್​ ನೆತನ್ಯಾಹು ರಾಜಕೀಯ ಭವಿಷ್ಯ ತೂಗುಯ್ಯಾಲೆಯಲ್ಲಿದೆ. 6 ತಿಂಗಳ ಅವಧಿಯಲ್ಲಿ ಇಸ್ರೇಲ್​ನಲ್ಲಿ ಮೊನ್ನೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಎಣಿಕೆ ಬಹುತೇಕ ಮುಗಿದಿದ್ದು, ನೆತನ್ಯಾಹು ನಾಯಕತ್ವದ ಕನ್ಸರ್ವೆಟೀವ್​ ಲುಕಿಡ್​ ಪಕ್ಷ 32 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಲು ಸಾಧ್ಯವಾಗಿದೆ. ಇನ್ನು, ಎದುರಾಳಿ ಮಾಜಿ ಸೇನಾ ದಂಡನಾಯಕ ಬೆನ್ನಿ ಗಾಂಟ್ಜ್​ ನೇತೃತ್ವದ ಬ್ಲ್ಯೂ ಅಂಡ್​ ವೈಟ್​ ಪಕ್ಷ 33 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಇಸ್ರೇಲ್​ ಸಂಸತ್ತಿನಲ್ಲಿ ಒಟ್ಟು 120 ಸದಸ್ಯರ ಬಲಾಬಲ ಇದೆ.

ಎರಡೂ ಪಕ್ಷಗಳು ಹಂಗಿನರಮನೆಯ ಹೊಸಿಲು ತುಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಆದಾಗ್ಯೂ ಬ್ಲ್ಯೂ ಅಂಡ್​ ವೈಟ್​ ಪಕ್ಷ ಅಧಿಕಾರದತ್ತ ದಾಪುಗಾಲು ಹಾಕಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಹಿಂದೆ ತನ್ನ ಇಡೀ ಕುಟುಂಬದ ಸದಸ್ಯರು ಇಸ್ರೇಲ್​ ದೇಶಕ್ಕೆ ಅದರಲ್ಲೂ ಯಹೂದಿಗಳ ಏಳ್ಗೆಗೆ ಸಲ್ಲಿಸಿದ್ದ ನಿಷ್ಕಳಂಕ ಸೇವೆಯಿಂದಾಗಿ ಜನಾನುರಾಗಿಯಾಗಿ ಬೆಂಜಮಿನ್​ ನೆತನ್ಯಾಹು ದೀರ್ಘ ಕಾಲ ದೇಶದ ಚುಕ್ಕಾಣಿ ಹಿಡಿದಿದ್ದರು. ಈ ಮಧ್ಯೆ ಅಮೆರಿಕ ಮತ್ತು ಭಾರತದಂತಹ ಬಲಾಢ್ಯ ರಾಷ್ಟ್ರಗಳ ಸ್ನೇಹ ಸಂಪಾದಿಸಿ ತಮ್ಮ ಪ್ರಭುತ್ವ ಸ್ಥಾಪಿಸಿದ್ದರು. ಆದ್ರೆ ಇತ್ತೀಚೆಗೆ ಭ್ರಷ್ಟಾಚಾರ, ವಂಚನೆ ಮತ್ತು ವಿಶ್ವಾಸದ್ರೋಹ ಆರೋಪಗಳ ಸುಳಿಯಲ್ಲಿ ಸಿಲುಕಿ ಪತರಗುಟ್ಟುತ್ತಿದ್ದರು.

ಅದು ಚುನಾವಣೆಯ ಮೇಲೂ ಪರಿಣಾಮ ಬೀರಿದ್ದು, ಅವರ ಜನಪ್ರಿಯತೆ ಕುಗ್ಗಿರುವುದು ಚುನಾವಣಾ ಫಲಿತಾಂಶಗಳನ್ನು ಗಮನಿಸಿದಾಗ ಸಾಬೀತಾಗಿದೆ. ಕಳೆದ ಏಪ್ರಿಲ್​​ ನಲ್ಲಿ ನಡೆದ ಚುನಾವಣೆಗಿಂತಲೂ ಈ ಬಾರಿಯ ಚುನಾವಣೆಯಲ್ಲಿ ನೆತನ್ಯಾಹು ಪಕ್ಷ ಕಡಿಮೆ ಮತ ಗಳಿಸಿದೆ. ಗಮನಾರ್ಹವೆಂದ್ರೆ ಅರಬ್​ ಮತದಾರರ ಕೆಂಗಣ್ಣಿಗೆ ಗುರಿಯಾಗಿರುವ ಬೆಂಜಮಿನ್​ ನೆತನ್ಯಾಹು ಚುನಾವಣೆಯಲ್ಲಿ ಅಪಜಯ ಹೊಂದುವ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ.

ಇತರೆ ಪಕ್ಷಗಳ ಬೆಂಬಲ ಪಡೆದು ಸದ್ಯಕ್ಕೆ ಮತ್ತೆ ಅಧಿಕಾರಕ್ಕೆ ಬಂದು, ತಮ್ಮ ಜನಪ್ರಿಯತೆ ಮತ್ತು ಜನವಿಶ್ವಾಸ ಮತ್ತೆ ಗಳಿಸುತ್ತಾರಾ? ಅಥವಾ ಅರಬ್​ ಮತದಾರರ ಒಲವು ಸಂಪಾದಿಸಿರುವ ಬೆನ್ನಿ ಗಾಂಟ್ಜ್​ ಅಧಿಕಾರ ಹಿಡಿಯುತ್ತಾರಾ? ಎಂಬುದು ಸದ್ಯದಲ್ಲೇ ಸ್ಪಷ್ಟವಾಗಲಿದೆ.

Published On - 3:34 pm, Thu, 19 September 19