ಬ್ರಿಟಿಷ್ ಏರ್ವೇಸ್ ಸಂಸ್ಥೆಯ ಪೈಲಟ್ಗಳ ಮುಷ್ಕರದಿಂದಾಗಿ ಲಂಡನ್ನಲ್ಲಿ ಸುಮಾರು 1,500ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದೆ.
ವೇತನ ವಿಚಾರವಾಗಿ ಬ್ರಿಟಿಷ್ ಏರ್ಲೈನ್ ಪೈಲಟ್ಸ್ ಅಸೋಸಿಯೇಷನ್(BALPA) ಪೈಲಟ್ಗಳು ಮುಷ್ಕರ ನಡೆಸುತ್ತಿದ್ದರು. ಇದರಿಂದ ಸೋಮವಾರ ಮತ್ತು ಮಂಗಳವಾರ ನಿಗದಿಯಾಗಿದ್ದ ಎಲ್ಲಾ ವಿಮಾನಗಳ ಸಂಚಾರವನ್ನು ರದ್ದು ಪಡಿಸಲಾಗಿದ್ದು, ಇದರ ಪರಿಣಾಮ ಸುಮಾರು 2,80,000 ಪ್ರಯಾಣಿಕರ ಮೇಲೆ ಬೀರಿದೆ.
ಕಳೆದ ತಿಂಗಳೇ ಬ್ರಿಟಿಷ್ ಏರ್ಲೈನ್ ಸಂಸ್ಥೆಗೆ ಪೈಲಟ್ಗಳ ಒಕ್ಕೂಟ ನೋಟಿಸ್ ಜಾರಿ ಮಾಡಿತ್ತು. ತಿಂಗಳೊಳಗೆ ವೇತನ ಸಮಸ್ಯೆ ಪರಿಹರಿಸದಿದ್ದರೆ, ಸೆಪ್ಟೆಂಬರ್ 9 ರಿಂದ 11ರವರೆಗೂ ಮುಷ್ಕರ ನಡೆಸುವುದಾಗಿ ಹೇಳಿತ್ತು. ಈ ಸಂಬಂಧ ನಿಗದಿಯಾಗಿದ್ದ ಸಭೆಯನ್ನು ಕಾರಣಾಂತರಗಳಿಂದ ಸಂಸ್ಥೆ ಮುಂದೂಡಿತ್ತು. ಇದರಿಂದ ಆಕ್ರೋಶಗೊಂಡ ಪೈಲಟ್ಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Published On - 1:21 pm, Mon, 9 September 19