- Kannada News Photo gallery Rashmika Mandanna bachelor party with girl gang in Sri Lanka here is the pics
ಮದುವೆಗೆ ಮುನ್ನ ಗೆಳತಿಯರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಿದ ರಶ್ಮಿಕಾ: ಚಿತ್ರಗಳು ಇಲ್ಲಿವೆ
Rashmika Mandanna: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರುಗಳು ಫೆಬ್ರವರಿ ತಿಂಗಳಲ್ಲಿ ವಿವಾಹ ಸಹ ಆಗಲಿದ್ದು, ಇಬ್ಬರ ವಿವಾಹ ಜೈಪುರದಲ್ಲಿ ಅದ್ಧೂರಿಯಾಗಿ ನಡೆಯಲಿದೆಯಂತೆ. ಮದುವೆಗೆ ಮುನ್ನ ಬ್ಯಾಚುಲರ್ ಪಾರ್ಟಿ ಮಾಡುವುದು ಇತ್ತೀಚೆಗೆ ಮಾಮೂಲು. ಅದರಂತೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಗೆಳತಿಯರನ್ನು ಕರೆದುಕೊಂಡು ಶ್ರೀಲಂಕಾಗೆ ಹೋಗಿದ್ದಾರೆ ಪಾರ್ಟಿ ಮಾಡಲು. ರಶ್ಮಿಕಾ ಮಂದಣ್ಣ ಬ್ಯಾಚುಲರ್ ಪಾರ್ಟಿಯ ಚಿತ್ರಗಳು ಇಲ್ಲಿವೆ ನೋಡಿ...
Updated on:Dec 17, 2025 | 10:58 AM

ನಟಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಅವರೊಟ್ಟಿಗೆ ಪ್ರೀತಿಯಲ್ಲಿರುವುದು ಗುಟ್ಟೇನೂ ಅಲ್ಲ. ಈ ಇಬ್ಬರೂ ಸಹ ಕೆಲ ತಿಂಗಳ ಹಿಂದಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರುಗಳು ಫೆಬ್ರವರಿ ತಿಂಗಳಲ್ಲಿ ವಿವಾಹ ಸಹ ಆಗಲಿದ್ದು, ಇಬ್ಬರ ವಿವಾಹ ಜೈಪುರದಲ್ಲಿ ಅದ್ಧೂರಿಯಾಗಿ ನಡೆಯಲಿದೆಯಂತೆ.

ಮದುವೆಗೆ ಮುನ್ನ ಬ್ಯಾಚುಲರ್ ಪಾರ್ಟಿ ಮಾಡುವುದು ಇತ್ತೀಚೆಗೆ ಮಾಮೂಲು. ಅದರಂತೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಗೆಳತಿಯರನ್ನು ಕರೆದುಕೊಂಡು ಶ್ರೀಲಂಕಾಗೆ ಹೋಗಿದ್ದಾರೆ ಪಾರ್ಟಿ ಮಾಡಲು.

ರಶ್ಮಿಕಾ ಮಂದಣ್ಣ ತಮ್ಮ ಆತ್ಮೀಯರಾದ ಕೆಲವು ಗೆಳತಿಯರೊಟ್ಟಿಗೆ ಶ್ರೀಲಂಕಾನಲ್ಲಿ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಭಾರಿ ಅದ್ಧೂರಿಯಾಗಿಯೇ ಈ ಪಾರ್ಟಿ ಮಾಡಿದ್ದಾರೆ ರಶ್ಮಿಕಾ ಮಂದಣ್ಣ ಮತ್ತು ಗೆಳತಿಯರು.

ಶ್ರೀಲಂಕಾದ ಬೀಚುಗಳಲ್ಲಿ ಸುತ್ತಾಡಿದ್ದಾರೆ. ಐಶಾರಾಮಿ ರೆಸಾರ್ಟ್ಗಳಲ್ಲಿ ಉಳಿದುಕೊಂಡು ಪಾರ್ಟಿ ಮಾಡಿದ್ದಾರೆ. ಸಾಕಷ್ಟು ಟ್ರಾವೆಲ್ ಮಾಡಿದ್ದಾರೆ. ಒಟ್ಟಾರೆ ಗೆಳತಿಯರೊಟ್ಟಿಗೆ ಮಜಾ ಮಾಡಿದ್ದಾರೆ ರಶ್ಮಿಕಾ ಮಂದಣ್ಣ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದಾರೆ. ಇಬ್ಬರೂ ಶೀಘ್ರವೇ ಮದುವೆ ಆಗುತ್ತಿದ್ದು, ಈ ಬಗ್ಗೆ ರಶ್ಮಿಕಾ ಸಹ ಪರೋಕ್ಷವಾಗಿ ಮಾತನಾಡಿದ್ದಾರೆ.

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಶೂಟಿಂಗ್ ಮುಗಿದ ಕೂಡಲೇ ಮದುವೆ ಕಾರ್ಯಕ್ರಮದ ಕಡೆಗೆ ಗಮನ ಹರಿಸಲಿದ್ದಾರೆ.
Published On - 10:56 am, Wed, 17 December 25




