AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಳಿಯಲ್ಲಿ ಬಾಯಿಗೆ ಹಾರಿಬಂದ ಎಲೆಯನ್ನು ಉಗುಳಿದ್ದಕ್ಕೆ ವ್ಯಕ್ತಿಗೆ ಬಿತ್ತು ಬರೋಬ್ಬರಿ 30 ಸಾವಿರ ರೂ. ದಂಡ

ಬಾಯಿಗೆ ಬಿದ್ದಿದ್ದ ಎಲೆಯನ್ನು ಉಗುಳಿದ್ದಕ್ಕೆ ವೃದ್ಧರೊಬ್ಬರಿಗೆ 30 ಸಾವಿರ ರೂ. ದಂಡ ವಿಧಿಸಿರುವ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಬಲವಾದ ಗಾಳಿ ಬೀಸುತ್ತಿತ್ತು, ಅಲ್ಲೇ ವಾಕಿಂಗ್​​ಗೆಂದು ಬಂದಿದ್ದ ಬ್ರಿಟಿಷ್ ವ್ಯಕ್ತಿಯೊಬ್ಬರ ಬಾಯಿಗೆ ಎಲೆ ಹಾರಿತ್ತು, ಅದನ್ನು ಕೆಳಗೆ ಉಗುಳಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಾಳಿಯಲ್ಲಿ ಬಾಯಿಗೆ ಹಾರಿಬಂದ ಎಲೆಯನ್ನು ಉಗುಳಿದ್ದಕ್ಕೆ ವ್ಯಕ್ತಿಗೆ ಬಿತ್ತು ಬರೋಬ್ಬರಿ 30 ಸಾವಿರ ರೂ. ದಂಡ
ದಂಡ ಕಟ್ಟಿದ ವ್ಯಕ್ತಿImage Credit source: NDTV
ನಯನಾ ರಾಜೀವ್
|

Updated on: Dec 17, 2025 | 9:22 AM

Share

ಲಂಡನ್, ಡಿಸೆಂಬರ್ 17: ಬಾಯಿಗೆ ಬಿದ್ದಿದ್ದ ಎಲೆಯನ್ನು ಉಗುಳಿದ್ದಕ್ಕೆ ವೃದ್ಧರೊಬ್ಬರಿಗೆ 30 ಸಾವಿರ ರೂ. ದಂಡ(Panalty) ವಿಧಿಸಿರುವ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಬಲವಾದ ಗಾಳಿ ಬೀಸುತ್ತಿತ್ತು, ಅಲ್ಲೇ ವಾಕಿಂಗ್​​ಗೆಂದು ಬಂದಿದ್ದ ಬ್ರಿಟಿಷ್ ವ್ಯಕ್ತಿಯೊಬ್ಬರ ಬಾಯಿಗೆ ಎಲೆ ಹಾರಿತ್ತು, ಅದನ್ನು ಕೆಳಗೆ ಉಗುಳಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಂಕನ್‌ಶೈರ್‌ನ ಸ್ಕೆಗ್ನೆಸ್‌ನಲ್ಲಿ ರಾಯ್ ಮಾರ್ಷ್‌ಗೆ ದಂಡ ವಿಧಿಸಲಾಯಿತು. ಅವರು ಬೋಯಿಟಿಂಗ್ ಸರೋವರದ ಬಳಿ ಜಾಗಿಂಗ್ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ಇದ್ದಕ್ಕಿದ್ದಂತೆ, ಬಲವಾದ ಗಾಳಿ ಬೀಸಿತು ಮತ್ತು ಒಂದು ದೊಡ್ಡ ಎಲೆ ಅವರ ಬಾಯಿಗೆ ಹಾರಿಹೋಯಿತು. ಅವರು ತಕ್ಷಣ ಅದನ್ನು ಉಗುಳಿದ್ದರು. ಇಬ್ಬರು ಅಧಿಕಾರಿಗಳು ಕೂಡಲೇ ಅವರ ಬಳಿ ಓಡಿಬಂದರು. ಒಬ್ಬ ಅಧಿಕಾರಿ ಅವರು ನೆಲದ ಮೇಲೆ ಉಗುಳುವುದನ್ನು ನೋಡಿದೆ ಎಂದು ಹೇಳಿ ತನ್ನನ್ನು ಮೂರ್ಖ ಎಂದು ಕರೆದಿದ್ದಾಗಿ ರಾಯ್ ಹೇಳಿದ್ದಾರೆ.

250 ಪೌಂಡ್‌ಗಳ (ಸುಮಾರು 30,000 ರೂಪಾಯಿಗಳು) ದಂಡವನ್ನು ವಿಧಿಸಿದ್ದಾರೆ. ನಂತರ ಮೇಲ್ಮನವಿ ಸಲ್ಲಿಸಿದ ನಂತರ ದಂಡವನ್ನು 150 ಪೌಂಡ್ (ಸುಮಾರು 18,000 ರೂಪಾಯಿಗಳು) ಗೆ ಇಳಿಸಲಾಯಿತು, ಅದನ್ನು ರಾಯ್ ಪಾವತಿಸಿದರು. ರಾಯ್ ಅವರ ಮಗಳು ಜೇನ್ ಮಾರ್ಷ್ ಫಿಟ್ಜ್‌ಪ್ಯಾಟ್ರಿಕ್ ಫೇಸ್‌ಬುಕ್‌ನಲ್ಲಿ ಪೂರ್ಣ ಘಟನೆಯನ್ನು ಬರೆದಿದ್ದಾರೆ.

ಮತ್ತಷ್ಟು ಓದಿ: Video: ದಾಖಲೆಗಳ ನೋಡದೆ ಆರ್​ಟಿಒ 4,500 ರೂ. ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ

ತನ್ನ ತಂದೆಗೆ ಸರಿಯಾಗಿ ನಡೆಯಲು ಆಗುವುದಿಲ್ಲ, ತೀವ್ರ ಆಸ್ತಮಾ ಮತ್ತು ಹೃದ್ರೋಗದ ಸಮಸ್ಯೆಯೂ ಇದೆ ಎಂದು ಅವರು ವಿವರಿಸಿದ್ದಾರೆ. ಆದರೂ, ಅವರು ಇನ್ನೂ ಬೋಯಿಟಿಂಗ್ ಸರೋವರದ ಸುತ್ತಲೂ ಪ್ರತಿದಿನ ನಡೆಯುತ್ತಾರೆ. ಅಧಿಕಾರಿಗಳು ಕಾರಣವಿಲ್ಲದೆ ವೃದ್ಧರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಜೆನ್ ಹೇಳಿದ್ದಾರೆ. ನಗರವನ್ನು ಸ್ವಚ್ಛವಾಗಿಡುವುದು ಮುಖ್ಯ, ಅದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಹೇಳಿದರು.

ಆದರೆ ಈ ಅಧಿಕಾರಿಗಳು ಅನಗತ್ಯವಾಗಿ ವೃದ್ಧರನ್ನು ಬೆದರಿಸುತ್ತಿದ್ದಾರೆ ಮತ್ತು ಕಿರುಕುಳ ನೀಡುತ್ತಿದ್ದಾರೆ. ಇದು ತಪ್ಪು, ನಿಜವಾಗಿಯೂ ಅವರು ಉಗಿದಿದ್ದರೇ ಇಲ್ಲವೇ ಎಂಬುದರ ಬಗ್ಗೆ ಒಂದೇ ಒಂದು ಮಾತನ್ನೂ ಅಧಿಕಾರಿಗಳು ಕೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈಗ ತನ್ನ ತಂದೆ ಮನೆಯಿಂದ ಹೊರ ಹೋಗಲು ಕೂಡ ಭಯ ಪಡುತ್ತಿದ್ದಾರೆ ಎಂದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ