ನಿರಾಯುಧನಾಗಿ ಉಗ್ರನನ್ನು ಹಿಡಿದು ಆಸ್ಟ್ರೇಲಿಯಾದ ಹೀರೋ ಆದ ಹಣ್ಣು ಮಾರಾಟಗಾರ ಅಹ್ಮದ್
ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ನಡೆದ ಭಯಾನಕ ದಾಳಿಯ ವೇಳೆ, ಹಣ್ಣಿನ ವ್ಯಾಪಾರಿ ಅಹ್ಮದ್ ಅಲ್ ಅಹ್ಮದ್ ತಮ್ಮ ಪ್ರಾಣದ ಹಂಗು ತೊರೆದು ನಿರಾಯುಧರಾಗಿ ಉಗ್ರನೊಬ್ಬನನ್ನು ಹಿಡಿದು ಜನರ ಪ್ರಾಣ ಉಳಿಸಿದರು. ಗುಂಡು ತಗುಲಿದ್ದರೂ, ಅವರು ಧೈರ್ಯದಿಂದ ಬಂದೂಕನ್ನು ಕಸಿದುಕೊಂಡರು. ಅವರ ಈ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ ಮತ್ತು ಅವರಿಗೆ $2 ಮಿಲಿಯನ್ ಸಂಗ್ರಹವಾಗಿದೆ. ಅಹ್ಮದ್ ಆಸ್ಟ್ರೇಲಿಯಾದ ನಿಜವಾದ ಹೀರೋ.

ಸಿಡ್ನಿ, ಡಿಸೆಂಬರ್ 16: ಆಸ್ಟ್ರೇಲಿಯಾದ ಸಿಡ್ನಿ(Sydney)ಯ ಬೊಂಡಿ ಬೀಚ್‌ನಲ್ಲಿ ಪಾಕಿಸ್ತಾನ ಮೂಲದ ಇಬ್ಬರು ಗುಂಡಿನ ಸುರಿಮಳೆಗೈದ ಪರಿಣಾಮ 12ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಭಯಪಡದೆ ನಿರಾಯುಧನಾಗಿ ಉಗ್ರನ ವಿರುದ್ಧ ಹೋರಾಡಿದ್ದು, ಓರ್ವ ಹಣ್ಣುಗಳ ಮಾರಾಟಗಾರ. ಅವರ ಹೆಸರು ಅಹ್ಮದ್ ಅಲ್ ಅಹ್ಮದ್. ಯಾವುದೇ ಹಿಂಜರಿಕೆಯಿಲ್ಲದೆ ತನ್ನ ಪ್ರಾಣ ಒತ್ತೆ ಇಟ್ಟು ಜನರನ್ನು ರಕ್ಷಣೆ ಮಾಡಿದ್ದಾರೆ. ಉಗ್ರನ ಮೇಲೆ ಹಾರಿ ಬಂದೂಕನ್ನು ಕಸಿದುಕೊಳ್ಳುವಲ್ಲಿ ಇವರು ಯಶಸ್ವಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಇವರದ್ದೇ ವಿಡಿಯೋ ಹರಿದಾಡಿತ್ತು. ಈ ಸಂದರ್ಭದಲ್ಲಿ ಅವರಿಗೂ ಕೂಡ ಗಾಯಗಳಾಗಿತ್ತು.
ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.GoFundMe ಅಭಿಯಾನವು ಅಹ್ಮದ್‌ಗಾಗಿ ಸುಮಾರು 2 ಮಿಲಿಯನ್ ಡಾಲರ್ ಸಂಗ್ರಹಿಸಿದೆ. 33,000 ಕ್ಕೂ ಹೆಚ್ಚು ಜನರು ಕೊಡುಗೆ ನೀಡಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ದಾಳಿಕೋರರನ್ನು ಸಾಜಿದ್ ಅಕ್ರಮ್ (50) ಮತ್ತು ಅವರ ಮಗ ನವೀದ್ (24) ಎಂದು ಗುರುತಿಸಲಾಗಿದೆ. ಇಬ್ಬರೂ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದ್ದರು.ನಿಲ್ಲಿಸಿದ್ದ ಕಾರಿನ ಹಿಂದೆ ಅಡಗಿಕೊಂಡಿದ್ದ ಅಹ್ಮದ್, ಗುಂಡು ಹಾರಿಸಿದವರಲ್ಲಿ ಒಬ್ಬನ ಮೇಲೆ ದಾಳಿ ಮಾಡಿ, ಅವನ ಕೈಯಿಂದ ರೈಫಲ್ ಅನ್ನು ಕಸಿದುಕೊಂಡಿದ್ದರು. ಅಹ್ಮದ್ ಅವರ ಧೈರ್ಯಶಾಲಿ ಕಾರ್ಯಕ್ಕಾಗಿ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗಿತ್ತು.
Ahmed, you are an Australian hero.
You put yourself at risk to save others, running towards danger on Bondi Beach and disarming a terrorist.
In the worst of times, we see the best of Australians. And that’s exactly what we saw on Sunday night.
On behalf of every Australian, I… pic.twitter.com/mAoObU3TZD
— Anthony Albanese (@AlboMP) December 16, 2025
43 ವರ್ಷದ ಅಹ್ಮದ್ ಅಲ್ ಅಹ್ಮದ್ ಸಿಡ್ನಿಯ ಸದರ್ಲ್ಯಾಂಡ್ ಪ್ರದೇಶದಲ್ಲಿ ಹಣ್ಣಿನ ಅಂಗಡಿ ನಡೆಸುತ್ತಿದ್ದಾರೆ.ದಾಳಿಯ ಸಮಯದಲ್ಲಿ ಅವರು ಆಕಸ್ಮಿಕವಾಗಿ ಬೋಂಡಿ ಬೀಚ್ ಬಳಿ ಇದ್ದರು. ಹಠಾತ್ ಗುಂಡಿನ ಸದ್ದು ಕೇಳಿ ಜನರು ಓಡಿಹೋಗಲು ಪ್ರಾರಂಭಿಸಿದರು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಅಹ್ಮದ್, ಯಾವುದೇ ಆಯುಧವಿಲ್ಲದೆ ದಾಳಿಕೋರನನ್ನು ನೇರವಾಗಿ ಎದುರಿಸಲು ನಿರ್ಧರಿಸಿದರು. ಅವರಿಗೆ ಎರಡು ಬಾರಿ ಗುಂಡು ಹಾರಿಸಲಾಯಿತು, ಆದರೆ ಭಯ ಪಡುವ ಬದಲು ಅವರು ದಾಳಿಕೋರನನ್ನು ಎದುರಿಸಿ ಅವನ ಆಯುಧವನ್ನು ಕಸಿದುಕೊಂಡರು.
ಮತ್ತಷ್ಟು ಓದಿ: ಹೆತ್ತವರಿಗೆ ಹೆಗ್ಗಣ ಮುದ್ದು, ಸಿಡ್ನಿ ಬೀಚ್‌ನಲ್ಲಿ ಗುಂಡಿನ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ರೂ ಮಗ ಒಳ್ಳೇವ್ನು ಎಂದ ತಾಯಿ
ಅಹ್ಮದ್ಗೆ ಬಂದೂಕಿನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಘಟನೆಯ ವೀಡಿಯೊವೊಂದು ಬೆಳಕಿಗೆ ಬಂದಿದ್ದು, ಅದರಲ್ಲಿ ಅವರು ಬಿಳಿ ಶರ್ಟ್ ಧರಿಸಿ ಕಾರುಗಳ ಹಿಂದೆ ಅಡಗಿಕೊಂಡಿರುವುದು ಕಂಡುಬಂದಿದೆ.ಪೊಲೀಸರು ಪ್ರದೇಶವನ್ನು ಸಂಪೂರ್ಣವಾಗಿ ಸೀಲ್ ಮಾಡಿದ್ದಾರೆ ಮತ್ತು ಯಾವುದೇ ಅನುಮಾನಾಸ್ಪದ ವಸ್ತುಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಿಡ್ನಿಯಲ್ಲಿ ಈ ಸಮಯದಲ್ಲಿ ಬೇರೆ ಯಾವುದೇ ಬೆದರಿಕೆಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




