ಹೆತ್ತವರಿಗೆ ಹೆಗ್ಗಣ ಮುದ್ದು, ಸಿಡ್ನಿ ಬೀಚ್ನಲ್ಲಿ ಗುಂಡಿನ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ರೂ ಮಗ ಒಳ್ಳೇವ್ನು ಎಂದ ತಾಯಿ
ಆಸ್ಟ್ರೇಲಿಯಾದ ಸಿಡ್ನಿ(Sydney)ಯ ಬೊಂಡಿ ಬೀಚ್ನಲ್ಲಿ ಭಾನುವಾರ ಪಾಕಿಸ್ತಾನದ ಮೂಲದ ತಂದೆ, ಮಗ ಸಾರ್ವಜನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರ ಗುಂಡೇಟಿಗೆ ಆರೋಪಿ ತಂದೆ ಬಲಿಯಾದರೆ ಮಗ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ. ಆರೋಪಿಗಳನ್ನು ಸಾಜಿದ್ ಅಕ್ರಮ್ ಆತನ ಮಗ ನವೀದ್ ಅಕ್ರಮ್ ಎಂಬುದು ಗೊತ್ತಾಗಿದೆ. ಈ ಕುರಿತು ನವೀದ್ ಅಕ್ರಮ್ ತಾಯಿ ವೆರೆನಾರನ್ನು ಪ್ರಶ್ನಿಸಿದಾಗ, ತನ್ನ ಮಗ ಅಂಥವನಲ್ಲ, ಆತ ಒಳ್ಳೆಯವನು ಎಂದಿದ್ದಾರೆ. ನವೀದ್ ವಾರಂತ್ಯದಲ್ಲಿ ಫಿಶಿಂಗ್ ಟೂರ್ ಮಾಡುವುದಾಗಿ ಹೇಳಿ ತಂದೆ ಜತೆ ಹೋಗಿದ್ದ

ಸಿಡ್ನಿ, ಡಿಸೆಂಬರ್ 15: ಆಸ್ಟ್ರೇಲಿಯಾದ ಸಿಡ್ನಿ(Sydney)ಯ ಬೊಂಡಿ ಬೀಚ್ನಲ್ಲಿ ಭಾನುವಾರ ಪಾಕಿಸ್ತಾನದ ಮೂಲದ ತಂದೆ, ಮಗ ಸಾರ್ವಜನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬಳಿಕ ಪೊಲೀಸರು ಆರೋಪಿಗಳ ಮೇಲೆ ಪ್ರತಿದಾಳಿ ನಡೆಸಿದ್ದು, ಘಟನೆಯಲ್ಲಿ ಆರೋಪಿ ತಂದೆ ಸಾವನ್ನಪ್ಪಿದ್ದು, ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ. ಆರೋಪಿಗಳನ್ನು ಸಾಜಿದ್ ಅಕ್ರಮ್ ಆತನ ಮಗ ನವೀದ್ ಅಕ್ರಮ್ ಎಂಬುದು ಗೊತ್ತಾಗಿದೆ. ಈ ಕುರಿತು ನವೀದ್ ಅಕ್ರಮ್ ತಾಯಿ ವೆರೆನಾರನ್ನು ಪ್ರಶ್ನಿಸಿದಾಗ, ತನ್ನ ಮಗ ಅಂಥವನಲ್ಲ, ಆತ ಒಳ್ಳೆಯವನು ಎಂದಿದ್ದಾರೆ. ನವೀದ್ ವಾರಂತ್ಯದಲ್ಲಿ ಫಿಶಿಂಗ್ ಟೂರ್ ಮಾಡುವುದಾಗಿ ಹೇಳಿ ತಂದೆ ಜತೆ ಹೋಗಿದ್ದ. ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ಮಗ ತಪ್ಪು ಮಾಡಿದ್ದರೂ ಆತನಿಗೆ ಒಳ್ಳಯವನು ಎಂಬ ಬಿರುದು ಕೊಟ್ಟಿದ್ದಾರೆ.
ಭಾನುವಾರ ತನಗೆ ಕರೆ ಮಾಡಿ ಅಮ್ಮಾ ನಾನು ಈಜಲು ಹೋಗಿದ್ದೆ, ಸ್ಕೂಬಾ ಡೈವಿಂಗ್ ಮಾಡಿದೆ, ಈಗ ಊಟಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದ. ಹಾಗೆಯೇ ಈಗ ತುಂಬಾ ಸೆಕೆಯಿರುವುದರಿಂದ ಮನೆಯಲ್ಲೇ ಇರುತ್ತೇವೆ ಎಂದಿದ್ದ. ದಾಳಿಯ ನಂತರದ ಗಂಟೆಗಳಲ್ಲಿ, ದಾಳಿ ನಡೆದ ಸ್ಥಳದಲ್ಲಿ ನವೀದ್ ಬಂದೂಕನ್ನು ಹಿಡಿದಿರುವ ಚಿತ್ರಗಳು ವೈರಲ್ ಆಗಿವೆ. ಆದಾಗ್ಯೂ, ವೆರೆನಾ ತನ್ನ ಮಗ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿರಬಹುದು ಎಂಬುದನ್ನು ನಂಬುತ್ತಿಲ್ಲ.
ಅವನ ಬಳಿ ಬಂದೂಕು ಇಲ್ಲ. ಅವನು ಹೊರಗೆ ಹೋಗುವುದಿಲ್ಲ. ಅವನು ಸ್ನೇಹಿತರೊಂದಿಗೆ ಬೆರೆಯುವುದಿಲ್ಲ. ಅವನು ಕುಡಿಯುವುದಿಲ್ಲ, ಧೂಮಪಾನ ಮಾಡುವುದಿಲ್ಲ, ಕೆಟ್ಟ ಸ್ಥಳಗಳಿಗೆ ಹೋಗುವುದಿಲ್ಲ, ಅವನು ಕೆಲಸಕ್ಕೆ ಹೋಗುತ್ತಾನೆ, ಮನೆಗೆ ಬರುತ್ತಾನೆ. ಜಿಮ್ಗೆ ಹೋಗುತ್ತಿದ್ದ ಅಷ್ಟೇ ಎಂದು ತಾಯಿ ಹೇಳಿದ್ದಾರೆ.
ಮತ್ತಷ್ಟು ಓದಿ: ಸಿಡ್ನಿಯ ಬೊಂಡಿ ಬೀಚ್ನಲ್ಲಿ ಗುಂಡಿನ ದಾಳಿ ನಡೆಸಿದವರು ಪಾಕಿಗಳು
ನವೀದ್ ಕೆಲಸ ಮಾಡುತ್ತಿದ್ದ ಕಂಪನಿ ದಿವಾಳಿಯಾದಾಗ ತಿಂಗಳುಗಳ ಹಿಂದೆ ಕೆಲಸ ಕಳೆದುಕೊಂಡಿದ್ದ. ತಂದೆ ಸಾಜಿದ್ ಒಂದು ಹಣ್ಣಿನ ಅಂಗಡಿಯನ್ನು ಹೊಂದಿದ್ದರು. ಇಬ್ಬರೂ ನವೀದ್‌ನ ಸಹೋದರ (20) ಮತ್ತು ಸಹೋದರಿ (22) ಜೊತೆ ಪಶ್ಚಿಮ ಸಿಡ್ನಿಯಲ್ಲಿರುವ ಒಂದು ಮನೆಯಲ್ಲಿ ವಾಸಿಸುತ್ತಿದ್ದರು, ಅದನ್ನು ಅವರು ಕಳೆದ ವರ್ಷ ಖರೀದಿಸಿದ್ದರು. ಘಟನೆಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ.
ನಿಖಾಧಿಕಾರಿಗಳು ಶಂಕಿತನನ್ನು ನ್ಯೂ ಸೌತ್ ವೇಲ್ಸ್‌ನ ಅಲ್-ಮುರಾದ್ ಸಂಸ್ಥೆಯ ವಿದ್ಯಾರ್ಥಿ ಎಂದು ಗುರುತಿಸಿದ್ದಾರೆ , ಇದು ಅರೇಬಿಕ್ ಮತ್ತು ಕುರಾನ್ ಅನ್ನು ಕಲಿಸುತ್ತದೆ. ತನಿಖಾಧಿಕಾರಿಗಳು ಅವನ ಶೈಕ್ಷಣಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ. ಪ್ರಸ್ತುತ, ಭಯೋತ್ಪಾದಕ ದಾಳಿಗೂ ಅವನ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಕಂಡುಬಂದಿದೆ.
ನವೀದ್ ಅಕ್ರಮ್ ಸಿಡ್ನಿಯ ಸೆಂಟ್ರಲ್ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯ ಮತ್ತು ಇಸ್ಲಾಮಾಬಾದ್‌ನ ಹಮ್ದಾರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದ.ಅಲ್-ಮುರಾದ್ ಸಂಸ್ಥೆಯಲ್ಲಿಯೂ ವ್ಯಾಸಂಗ ಮಾಡಿದ್ದ, ಇತ್ತೀಚೆಗೆ ಆತ ತನ್ನ ಕೆಲಸವನ್ನು ಕಳೆದುಕೊಂಡಿದ್ದ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:38 am, Mon, 15 December 25




