AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಗುಂಡಿನ ದಾಳಿ ನಡೆಸಿದವರು ಪಾಕಿಗಳು

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾನುವಾರ ಸಂಜೆ ನಡೆದ ಭೀಕರ ಗುಂಡಿನ ದಾಳಿ ದೇಶವನ್ನೇ ಬೆಚ್ಚಿಬೀಳಿಸಿದೆ. ಇಬ್ಬರು ಶಸ್ತ್ರಸಜ್ಜಿತ ದಾಳಿಕೋರರು ಅಚಾನಕ್ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ಹನ್ನೆರಡು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಬಳಿಕ ಸಿಡ್ನಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಿಡ್ನಿಯಲ್ಲಿ ನಡೆದ ಈ ರಕ್ತಪಾತಕಾರಿ ದಾಳಿಯ ಉದ್ದೇಶವೇನು ಎಂಬುದನ್ನು ಆಸ್ಟ್ರೇಲಿಯಾ ಪೊಲೀಸರು ಇನ್ನೂ ಸ್ಪಷ್ಟಪಡಿಸಿಲ್ಲ. ದಾಳಿಕೋರರ ಹಿನ್ನೆಲೆ ಹಾಗೂ ದಾಳಿಯ ಹಿಂದಿನ ಉದ್ದೇಶದ ಕುರಿತು ತನಿಖಾ ಸಂಸ್ಥೆಗಳು ತೀವ್ರವಾಗಿ ಪರಿಶೀಲನೆ ನಡೆಸುತ್ತಿವೆ.

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಗುಂಡಿನ ದಾಳಿ ನಡೆಸಿದವರು ಪಾಕಿಗಳು
ಆರೋಪಿ ಅಕ್ರಮ್
ನಯನಾ ರಾಜೀವ್
|

Updated on: Dec 15, 2025 | 8:48 AM

Share

ಸಿಡ್ನಿ, ಡಿಸೆಂಬರ್ 15: ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಬೊಂಡಿ ಬೀಚ್​ನಲ್ಲಿ ಭಾನುವಾರ ಸಂಜೆ ನಡೆದ ಗುಂಡಿನ ದಾಳಿ(Shooting) ದೇಶವನ್ನೇ ಬೆಚ್ಚಿಬೀಳಿಸಿದೆ.ಇಬ್ಬರು ದಾಳಿಕೋರರು ಮನಬಂದಂತೆ ನಡೆಸಿದ ಗುಂಡಿನ ದಾಳಿಯಲ್ಲಿ ಹನ್ನೆರಡು ಜನರು ಸಾವನ್ನಪ್ಪಿದ್ದಾರೆ.ಆಸ್ಟ್ರೇಲಿಯಾದ ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ದಾಳಿಯ ಉದ್ದೇಶ ಅಥವಾ ದಾಳಿಕೋರರ ಗುರುತನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದಾಗ್ಯೂ, ಯಹೂದಿ ಆಸ್ಟ್ರೇಲಿಯನ್ನರನ್ನು ಗುರಿಯಾಗಿಸಿಕೊಂಡ ಇಬ್ಬರು ದಾಳಿಕೋರರಲ್ಲಿ ಒಬ್ಬನಿಗೆ ಪಾಕಿಸ್ತಾನದೊಂದಿಗೆ ಸಂಪರ್ಕವಿದೆ ಎಂದು ಹೇಳಲಾಗುತ್ತಿದೆ. ಇಬ್ಬರು ದಾಳಿಕೋರರಲ್ಲಿ ಒಬ್ಬ ಸಾವನ್ನಪ್ಪಿದ್ದಾನೆ, ಇನ್ನೊಬ್ಬನನ್ನು ಗಾಯಗೊಂಡ ಸ್ಥಿತಿಯಲ್ಲಿ ಬಂಧಿಸಲಾಗಿದೆ.

ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತನನ್ನು ಪಾಕಿಸ್ತಾನ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆಸ್ಟ್ರೇಲಿಯಾದ ತನಿಖಾಧಿಕಾರಿಗಳು ಅವರ ವಲಸೆ ಸ್ಥಿತಿ, ಕುಟುಂಬದ ಹಿನ್ನೆಲೆ ಮತ್ತು ವಿದೇಶಗಳ ಸಂಪರ್ಕಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬಂದೂಕುಧಾರಿಯನ್ನು 24 ವರ್ಷದ ನವೀದ್ ಅಕ್ರಮ್ ಎಂದು ಗುರುತಿಸಲಾಗಿದೆ.

ಮತ್ತಷ್ಟು ಓದಿ: Video: ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

ನವೀದ್ ಅಕ್ರಮ್ ಯಾರು? ತನಿಖಾಧಿಕಾರಿಗಳು ಶಂಕಿತನನ್ನು ನ್ಯೂ ಸೌತ್ ವೇಲ್ಸ್‌ನ ಅಲ್-ಮುರಾದ್ ಸಂಸ್ಥೆಯ ವಿದ್ಯಾರ್ಥಿ ಎಂದು ಗುರುತಿಸಿದ್ದಾರೆ , ಇದು ಅರೇಬಿಕ್ ಮತ್ತು ಕುರಾನ್ ಅನ್ನು ಕಲಿಸುತ್ತದೆ. ತನಿಖಾಧಿಕಾರಿಗಳು ಅವನ ಶೈಕ್ಷಣಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ. ಪ್ರಸ್ತುತ, ಭಯೋತ್ಪಾದಕ ದಾಳಿಗೂ ಅವನ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಕಂಡುಬಂದಿದೆ.

ಗುಂಡಿನ ದಾಳಿಯ ವಿಡಿಯೋ

ನವೀದ್ ಅಕ್ರಮ್ ಸಿಡ್ನಿಯ ಸೆಂಟ್ರಲ್ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯ ಮತ್ತು ಇಸ್ಲಾಮಾಬಾದ್‌ನ ಹಮ್ದಾರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದ.ಅಲ್-ಮುರಾದ್ ಸಂಸ್ಥೆಯಲ್ಲಿಯೂ ವ್ಯಾಸಂಗ ಮಾಡಿದ್ದ, ಇತ್ತೀಚೆಗೆ ಆತ ತನ್ನ ಕೆಲಸವನ್ನು ಕಳೆದುಕೊಂಡಿದ್ದ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.

ನೈಋತ್ಯ ಸಿಡ್ನಿಯ ಉಪನಗರವಾದ ಬೋನಿರಿಗ್‌ನಲ್ಲಿರುವ ನವೀದ್ ಅಕ್ರಮ್ ಅವರ ಮನೆಯ ಮೇಲೆ ಭದ್ರತಾ ಸಂಸ್ಥೆಗಳು ದಾಳಿ ನಡೆಸಿವೆ. ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಶಂಕಿತನ ಕಾರಿನಲ್ಲಿ ಸುಧಾರಿತ ಸ್ಫೋಟಕ ಸಾಧನ (IED) ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಕ್ರಮ್ ಫೋಟೊ

ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 50 ವರ್ಷದ ಸಾಜಿದ್ ಅಕ್ರಮ್ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಗುಂಡಿನ ದಾಳಿಕೋರ, ಅವರ 24 ವರ್ಷದ ಮಗ ನವೀದ್ ಅಕ್ರಮ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ದಾಳಿ ಸುಮಾರು 10 ನಿಮಿಷಗಳ ಕಾಲ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಾವನ್ನಪ್ಪಿದವರು 10 ರಿಂದ 87 ವರ್ಷ ವಯಸ್ಸಿನವರು. 42 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆರೋಪಿಗಳು ಈ ರೀತಿ ಮಾಡಲು ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ