Video: ದಾಖಲೆಗಳ ನೋಡದೆ ಆರ್ಟಿಒ 4,500 ರೂ. ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ
ಮಧ್ಯಪ್ರದೇಶದ ಗಡಿಯಲ್ಲಿ ಟ್ರಕ್ ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಡಿಯೋ ವೈರಲ್ ಆಗಿದೆ. ಯಾವುದೇ ದಾಖಲೆಗಳನ್ನು ಪರಿಶೀಲಿಸದೆ ಆರ್ಟಿಒ 4,500 ರೂ. ದಂಡ ವಿಧಿಸಿದ್ದಕ್ಕೆ ಬೇಸರಗೊಂಡ ಟ್ರಕ್ ಚಾಲಕ, ಟ್ರಕ್ ಮೇಲೆಯೇ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೆಳಗಿನಿಂದ ಅಧಿಕಾರಿಗಳು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಆತ ಟ್ರಕ್ನಿಂದ ಕೆಳಗೆ ಇಳಿದುಬರಲು ಸಿದ್ಧನಿರಲಿಲ್ಲ. ಸ್ಥಳದಲ್ಲಿದ್ದವರು ವಿಡಿಯೋ ಮಾಡಿಕೊಳ್ಳುತ್ತಿದ್ದರು, ಟ್ರಕ್ ಚಾಲಕ ಕಣ್ಣೀರು ಹಾಕುತ್ತಾ ತನ್ನ ಅಸಹಾಯಕತೆಯನ್ನು ತೋರುತ್ತಿರುವುದು ಕಂಡುಬಂತು.
ಭೋಪಾಲ್, ಡಿಸೆಂಬರ್ 12: ಮಧ್ಯಪ್ರದೇಶದ ಗಡಿಯಲ್ಲಿ ಟ್ರಕ್ ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಡಿಯೋ ವೈರಲ್ ಆಗಿದೆ. ಯಾವುದೇ ದಾಖಲೆಗಳನ್ನು ಪರಿಶೀಲಿಸದೆ ಆರ್ಟಿಒ 4,500 ರೂ. ದಂಡ ವಿಧಿಸಿದ್ದಕ್ಕೆ ಬೇಸರಗೊಂಡ ಟ್ರಕ್ ಚಾಲಕ, ಟ್ರಕ್ ಮೇಲೆಯೇ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೆಳಗಿನಿಂದ ಅಧಿಕಾರಿಗಳು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಆತ ಟ್ರಕ್ನಿಂದ ಕೆಳಗೆ ಇಳಿದುಬರಲು ಸಿದ್ಧನಿರಲಿಲ್ಲ. ಸ್ಥಳದಲ್ಲಿದ್ದವರು ವಿಡಿಯೋ ಮಾಡಿಕೊಳ್ಳುತ್ತಿದ್ದರು, ಟ್ರಕ್ ಚಾಲಕ ಕಣ್ಣೀರು ಹಾಕುತ್ತಾ ತನ್ನ ಅಸಹಾಯಕತೆಯನ್ನು ತೋರುತ್ತಿರುವುದು ಕಂಡುಬಂತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

