ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಈ ನಿಯಮ ಪಾಲಿಸಲೇಬೇಕು, ಉಲ್ಲಂಘಿಸಿದ್ರೆ ದಂಡ ಖಂಡಿತ
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೊಸ ನಿಯಮ ಜಾರಿಯಾಗಿದೆ. ಇಂದಿನಿಂದ ಟರ್ಮಿನಲ್ 1ಕ್ಕೆ ಯಲ್ಲೋ ಬೋರ್ಡ್ ಕಾರುಗಳ ಪ್ರವೇಶ ನಿರ್ಬಂಧಿಸಲಾಗಿದೆ. ಇವರು P3, P4 ಪಾರ್ಕಿಂಗ್ ಬಳಸಬೇಕು. ವೈಟ್ ಬೋರ್ಡ್ ವಾಹನಗಳಿಗೆ 8 ನಿಮಿಷ ಉಚಿತ ಪ್ರವೇಶವಿದ್ದು, ನಂತರ ಪ್ರತಿ 5 ನಿಮಿಷಕ್ಕೆ 150 ರೂ. ದಂಡ ವಿಧಿಸಲಾಗುವುದು. ಈ ನಿಯಮಗಳ ಬಗ್ಗೆ ಚಾಲಕರು ಮತ್ತು ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತಿದೆ, ಮತ್ತು ಅಡಚಣೆ ತಪ್ಪಿಸಲು ಬಂದೋಬಸ್ತ್ ಏರ್ಪಡಿಸಲಾಗಿದೆ.

ಬೆಂಗಳೂರು, ಡಿ.13: ಬೆಂಗಳೂರು ಕೆಂಪೇಗೌಡ ವಿಮಾನದಲ್ಲಿ (Kempegowda Airport) ಹೊಸ ನಿಯಮ ಜಾರಿ ಮಾಡಲಾಗಿದೆ. ಇಂದಿನಿಂದ ಟರ್ಮಿನಲ್ 1ರಲ್ಲಿ ಯಲ್ಲೋ ಬೋರ್ಡ್ ಕಾರುಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಲ್ಲೋ ಬೋರ್ಡ್ ಕಾರುಗಳಿಗೆ ಟರ್ಮಿನಲ್ 1ಕ್ಕೆ ಪ್ರವೇಶ ಇರುವುದಿಲ್ಲ. ವಿಮಾನ ನಿಲ್ದಾಣದ ಪಿಕ್ಅಪ್ ಪಾಯಿಂಟ್ನಲ್ಲಿ ಈ ನಿಷೇಧವನ್ನು ಮಾಡಲಾಗಿದೆ. ಅಸಂಘಟಿತ ಯಲ್ಲೋ ಬೋರ್ಡ್ ಕಾರುಗಳಿಗೆ P3, P4 ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಿನಿ ಧ್ವನಿವರ್ಧಕ ((Public Address System) ಮೂಲಕ ಪ್ರಯಾಣಿಕರಿಗೆ ಸಿಬ್ಬಂದಿಯಿಂದ ಮಾಹಿತಿ ನೀಡಲಾಗುವುದು. ಯಲ್ಲೋ ಬೋರ್ಡ್ ಕಾರುಗಳು P3, P4ರಲ್ಲಿ ಪಾರ್ಕಿಂಗ್ ಮಾಡುವಂತೆ ಏರ್ಪೋರ್ಟ್ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಇನ್ನು ವೈಟ್ ಬೋರ್ಡ್ನ ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಯಾರೂ ಕೂಡ ಗಲಾಟೆ ಮಾಡದಂತೆ ಕಾರು ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ವೈಟ್ ಬೋರ್ಡ್ ವಾಹನಗಳಿಗೂ ಟರ್ಮಿನಲ್ 1ರಲ್ಲಿ ನಿಲ್ಲಲು ಮೊದಲ 8 ನಿಮಿಷ ಅವಕಾಶ ಇದೆ. ಒಂದು ವೇಳೆ 8 ನಿಮಿಷಕ್ಕಿಂತ ಹೆಚ್ಚಾದರೆ ಅಂದರೆ ಮತ್ತೆ 5 ನಿಮಿಷ ಕಾಲ ನಿಲುಗಡೆಗೆ 150 ರೂ. ದಂಡ ಹಾಕಲಾಗುವುದು. ನಂತರ ಒಂದು ಎಚ್ಚರಿಕೆಯನ್ನು ನೀಡಲಾಗುವುದು. ಇದನ್ನು ನಿರ್ಲಕ್ಷ್ಯಿಸಿ ಮತ್ತೆ 5 ನಿಮಿಷ ನಿಂತರೆ 150 ದಂಡ ಹಾಕಲಾಗುತ್ತದೆ ಎಂದು ಹೇಳಿದ್ದಾರೆ.
ಇಂದಿನಿದಲೇ ಈ ನಿಯಮ ಜಾರಿಗೆ ಬರಲಿದೆ. ಈ ಬಗ್ಗೆ ಯಾವುದೇ ಕಾರು ಚಾಲಕರು ಕಿರಿಕಿರಿ ಮಾಡಬಾರದು ಎಂದು ವಿಮಾನ ನಿಲ್ದಾಣ ಸಿಬ್ಬಂದಿಗಳು ಹೇಳಿದ್ದಾರೆ. ಈ ಬಗ್ಗೆ ವಿಮಾನ ನಿಲ್ದಾಣದಲ್ಲಿ ಯಾವುದೇ ಕಿರಿಕಿರಿ ಆಗದಂತೆ ಬಂದೋಬಸ್ತ್ ವಹಿಸುವಂತೆ ಪೊಲೀಸರಿಗೆ ಹೇಳಿದ್ದಾರೆ.
ಇದನ್ನೂ ಓದಿ: ವಿಮಾನ ನಿಲ್ದಾಣಗಳಲ್ಲಿ ಕಳ್ಳತನ ಪ್ರಕರಣ: ಬೆಂಗಳೂರಿಗೆ ದೇಶದಲ್ಲೇ ಮೊದಲನೇ ಸ್ಥಾನ!
ವಿಮಾನ ನಿಲ್ದಾಣಗಳಲ್ಲಿ ಕಳ್ಳತನ ಪ್ರಕರಣ:
ಇಂಡಿಗೋ ವಿಮಾನ ಹಾರಾಟ ರದ್ದಾದ ನಂತರ ಬೆಂಗಳೂರು ಕೆಂಪೇಗೌಡ ವಿಮಾನದಲ್ಲಿ ಹೊಸ ಪಾರ್ಕೀಂಗ್ ನಿಯಮವನ್ನು ಮಾಡಲಾಗಿತ್ತು. ಇದರಿಂದಲ್ಲೂ ವಿಮಾನ ನಿಲ್ದಾಣ ದೊಡ್ಡ ಗೊಂದಲ ಸೃಷ್ಟಿಯಾಗಿತ್ತು. ಇದರ ಜತೆಗೆ ಕಳ್ಳತನದ ಪ್ರಕರಣ ಕೂಡ ವಿಮಾನ ನಿಲ್ದಾಣದಲ್ಲಿ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಈ ವರ್ಷ ಭಾರತದಲ್ಲಿನ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಪ್ರಕ್ರಿಯೆಯ ವೇಳೆ 9 ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಆ ಪೈಕಿ ನಾಲ್ಕು ಪ್ರಕರಣಗಳು ಕೆಐಎಬಿಯಲ್ಲೇ ನಡೆದಿವೆ. ಈ ಮೂಲಕ ಬೆಂಗಳೂರು ಏರ್ಪೋರ್ಟ್ ಪಟ್ಟಿಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಜನವರಿ 1ರಿಂದ ನವೆಂಬರ್ 27ರವರೆಗೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಲ್ಕು ಕಳ್ಳತನ ಪ್ರಕರಣಗಳು ನಡೆದಿದ್ದು, ದೆಹಲಿ, ಹೈದರಾಬಾದ್, ಮುಂಬೈ, ನಾಗಪೂರ್ ಮತ್ತು ರಾಜ್ಕೋಟ್ ವಿಮಾನ ನಿಲ್ದಾಣಗಳಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ ಎಂದು ವಿಮಾನಯಾನ ರಾಜ್ಯ ಖಾತೆ ಸಚಿವ ಮುರಳೀಧರ ಮೊಹೊಲ್ ಲೋಕಸಭೆಗೆ ತಿಳಿಸಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



