ಬೆಂಗಳೂರು: ಇಬ್ಬರು ಗಂಡಂದಿರ ಮುದ್ದಿನ ಮಡದಿ ಪೊಲೀಸಪ್ಪನ ಜತೆ ಪರಾರಿ
ಬೆಂಗಳೂರಿನಲ್ಲಿ ಗೃಹಿಣಿಯೊಬ್ಬಳು 12 ವರ್ಷದ ಮಗನಿದ್ದರೂ, ಪೊಲೀಸ್ ಕಾನ್ಸ್ಟೇಬಲ್ ಜೊತೆ ಪರಾರಿಯಾಗಿದ್ದಾಳೆ. 1.8 ಲಕ್ಷ ನಗದು ಮತ್ತು 160 ಗ್ರಾಂ ಚಿನ್ನಾಭರಣವನ್ನೂ ತೆಗೆದುಕೊಂಡು ಹೋಗಿದ್ದಾಳೆ. ಇತ್ತೀಚಿನ ಗ್ಲೀಡನ್ ವರದಿ ಬೆಂಗಳೂರನ್ನು ಅಕ್ರಮ ಸಂಬಂಧದಲ್ಲಿ ದೇಶದಲ್ಲೇ ನಂಬರ್ ಒನ್ ಎಂದು ಹೇಳಿದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸಪ್ಪನನ್ನು ಅಮಾನತುಗೊಳಿಸಲಾಗಿದೆ.

ಬೆಂಗಳೂರು, ಡಿ.13: ಬೆಂಗಳೂರಿನಲ್ಲಿ (Bangalore )ಅತೀ ಹೆಚ್ಚು ಅಕ್ರಮ ಸಂಬಂಧ ಪ್ರಕರಣಗಳು ಪತ್ತೆಯಾಗಿದೆ ಎಂದು ಇತ್ತೀಚೆಗೆ ಗ್ಲೀಡನ್ ನೀಡಿದ ವರದಿಯಲ್ಲಿ ಹೇಳಲಾಗಿತ್ತು. ಅಕ್ರಮ ಸಂಬಂಧದಲ್ಲಿ ದೇಶದಲೇ ಬೆಂಗಳೂರು ನಂಬರ್ ಒನ್ ಎಂದು ಈ ವರದಿ ಹೇಳಿದೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಅಕ್ರಮ ಸಂಬಂಧ ಪ್ರಕರಣವೊಂದು ಪತ್ತೆಯಾಗಿದೆ. ಇದು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಅಕ್ರಮ ಸಂಬಂಧದ ಗಾಳಿ ಬಿಸಿದೆ. 12 ವರ್ಷದ ಮಗ ಇದ್ರೂ ಗೃಹಣಿಯೊಬ್ಬಳು ಪೊಲೀಸಪ್ಪನ ಜೊತೆ ಪರಾರಿಯಾಗಿರುವ ಘಟನೆ ಬೆಳಕಿದೆ ಬಂದಿದೆ. ಮೈಸೂರು ಮೂಲದ ಮೋನಿಕಾ ಎಂಬ ಮಹಿಳೆ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ರಾಘವೇಂದ್ರನ ಜತೆಗೆ ಪರಾರಿಯಾಗಿದ್ದಾಳೆ.
ಈ ಹಿಂದೆ ಮೋನಿಕಾ ಎರಡು ಮದುವೆಯಾಗಿದ್ದು, ಇದೀಗ ಪೊಲೀಸ್ ಕಾನ್ಸ್ ಟೇಬಲ್ ಜತೆಗೆ ಸಂಬಂಧ ಹೊಂದಿದ್ದಾಳೆ ಎಂದು ಹೇಳಲಾಗಿದೆ. ಮೊದಲನೇ ಗಂಡನ ಬಿಟ್ಟು, ಎರಡನೇ ಮದುವೆಯಾಗಿದ್ದ ಮೋನಿಕಾ, ಸ್ವಲ್ಪ ದಿನ ಸಂಸಾರ ನಡೆಸಿ, ಇದೀಗ ಎರಡನೇ ಗಂಡನಿಗೂ ಕೈಕೊಟ್ಟಿದ್ದಾಳೆ. ಜೂನ್ನಲ್ಲಿ ಹೆಚ್ ಎಸ್ ಆರ್ ಠಾಣೆಯ ಹೊಯ್ಸಳ ಡ್ರೈವರ್ ರಾಘವೇಂದ್ರ ಮತ್ತು ಮೋನಿಕಾ ಇನ್ಸ್ಟಾಗ್ರಾಮ್ನಲ್ಲಿ ಪರಿಚಯ ಮಾಡಿಕೊಂಡಿದ್ದಾರೆ. ಪರಿಚಯದ ನಂತರ ಫೋನ್ ನಂಬರ್ ಎಕ್ಸ್ ಚೆಂಜ್ ಮಾಡಿಕೊಂಡು, ಪ್ರತಿದಿನ ಮಾತನಾಡುತ್ತಿದ್ದರು ಎಂದು ಹೇಳಲಾಗಿದೆ. ಈ ಸಲುಗೆ ಇಬ್ಬರ ನಡುವೆ ಪ್ರೀತಿಗೆ ತಿರುಗಿದೆ. ಮೂರು ತಿಂಗಳ ನಂತರ ಮೋನಿಕಾ ಎರಡನೇ ಗಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ನನ್ನ ಜೀವನ ರೂಪಿಸಿಕೊಳ್ಳಲು ನಾನು ಹೋಗ್ತಿದ್ದೇನೆ ನನ್ನ ಗಂಡನ ಕರೆಸಿ ಬುದ್ದಿ ಹೇಳಿ ಎಂದು ದೂರಿನಲ್ಲಿ ಹೇಳಿದ್ದಾಳೆ.
ಇದನ್ನೂ ಓದಿ: ಅಕ್ರಮ ಸಂಬಂಧದಲ್ಲಿ ಬೆಂಗಳೂರು ಫಸ್ಟ್; ಗ್ಲೀಡನ್ ವರದಿಯಲ್ಲಿ ಬಹಿರಂಗ
ಮೋನಿಕಾ ದೂರು ನೀಡಿದ ಬೆನ್ನಲ್ಲೆ ಚಂದ್ರಲೇಔಟ್ ಪೊಲೀಸರು ಗಂಡನಿಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ. ಇನ್ನು ಗಂಡ ಪೊಲೀಸ್ ಠಾಣೆಗೆ ಹೋಗುತ್ತಿದ್ದಂತೆ ಮೋನಿಕಾ ಮನೆಯಿಂದ 160 ಗ್ರಾಂ ಚಿನ್ನಾಭರಣ, 1.80 ಲಕ್ಷ ಹಣ ಜತೆಗೆ ಎಸ್ಕೇಪ್ ಆಗಿದ್ದಾಳೆ. ಪೊಲೀಸ್ ಠಾಣೆಯಲ್ಲಿದ್ದ ಗಂಡನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ತಕ್ಷಣ ಪೊಲೀಸ್ ಠಾಣೆಯಿಂದಲೇ ಮೋನಿಕಾನಿಗೆ ಫೋನ್ ಮಾಡಿದ್ದಾನೆ. ಆದರೆ ಮೋನಿಕಾ ಫೋನ್ ಎತ್ತಿಲ್ಲ. ಈ ಬಗ್ಗೆ ಅನುಮಾನ ಬಂದು ಮೋನಿಕಾನ ಗಂಡ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಇನ್ನು ಮೋನಿಕಾ ಪೊಲೀಸ್ ಕಾನ್ಸ್ ಟೇಬಲ್ ರಾಘವೇಂದ್ರ ಓಡಿ ಹೋಗಿದ್ದಾಳೆ ಎಂದು ತಿಳಿಯುತ್ತಿದ್ದಂತೆ ಹಿರಿಯ ಅಧಿಕಾರಿಗಳು ರಾಘವೇಂದ್ರನನ್ನು ಸಸ್ಪೆಂಡ್ ಮಾಡಿದ್ದಾರೆ.
ವಿಕಾಸ್
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




