ಕುಡಿದ ಅಮಲಿನಲ್ಲಿ ಕಿರಿಕ್: ವ್ಯಕ್ತಿ ತಲೆಗೆ ಬಿಯರ್ ಬಾಟಲಿಂದ ಹೊಡೆದ ಗ್ಯಾಂಗ್
ಬೆಂಗಳೂರಿನ ಆನೇಕಲ್‌ನಲ್ಲಿರುವ ಮಾರುತಿ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಡಿ.16ರಂದು ಕುಡಿದ ಮತ್ತಿನಲ್ಲಿ ಪ್ರಕಾಶ್ ಎಂಬುವವರ ಮೇಲೆ ಮೂವರು ವ್ಯಕ್ತಿಗಳು ಏಕಾಏಕಿ ಹಲ್ಲೆ ಮಾಡಿದ್ದಾರೆ. ಸಣ್ಣ ಕಿರಿಕಿರಿ ಕಾರಣಕ್ಕೆ ಈ ದಾಳಿ ನಡೆದಿದ್ದು, ಗಾಯಗೊಂಡ ಪ್ರಕಾಶ್ ಅವರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಬೆಂಗಳೂರು,ಡಿ.16: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾರೆ. ಬೆಂಗಳೂರಿನ ಆನೇಕಲ್ನ ಮಾರುತಿ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ. ಬಾರ್ಗೆ ಕುಡಿಯಲು ಬಂದಿದ್ದ, ಪ್ರಕಾಶ್ ಎಂಬುವವರ ಮೇಲೆ ಇನ್ನೊಂದು ಟೇಬಲ್ನಲ್ಲಿದ್ದ ಮೂವರು ಏಕಾಏಕಿ ಬಂದು ಪ್ರಕಾಶ್ ಮೇಲೆ ದಾಳಿ ಮಾಡಿದ್ದಾರೆ. ನಂತರ ಅಲ್ಲಿಂದ ಈ ಗ್ಯಾಂಗ್ ಪರಾರಿಯಾಗಿದೆ. ಇನ್ನು ಬಾಟಲಿಯಿಂದ ತಲೆಗೆ ಹೊಡೆದ ಪರಿಣಾಮ ವಿಪರೀತ ರಕ್ತ ಬಂದಿದೆ. ಗಾಯಾಳು ಪ್ರಕಾಶ್ ಅವರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಈ ದಾಳಿ ಮಾಡಲು ಕಾರಣ ಏನು ಎಂಬ ಬಗ್ಗೆ ತಿಳಿದು ಬಂದಿಲ್ಲ. ಬಾರ್ನ ಇತರ ಗ್ರಾಹಕರು ಹೇಳಿರುವ ಪ್ರಕಾರ, ಚಿಕ್ಕ ಕಿರಿಕಿರಿ ಆಗಿದೆ, ಆ ಕಾರಣಕ್ಕೆ ಪ್ರಕಾಶ್ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
