ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಉಡುಪಿ ಪೊಲೀಸರು 60 ಕಳೆದುಹೋದ ಮೊಬೈಲ್‌ಗಳನ್ನು ಅವುಗಳ ಮಾಲೀಕರಿಗೆ ಮರಳಿ ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ. ₹8.83 ಲಕ್ಷ ಮೌಲ್ಯದ ಈ ಫೋನ್‌ಗಳನ್ನು CAIR ಪೋರ್ಟಲ್ ದೂರಿನ ಆಧಾರದ ಮೇಲೆ ಪತ್ತೆಹಚ್ಚಿ ಹಸ್ತಾಂತರಿಸಲಾಗಿದೆ. ಕಷ್ಟಪಟ್ಟು ಮೊಬೈಲ್ ಖರೀದಿಸಿದ್ದವರಿಗೆ ಇದು ಸಂತಸ ತಂದಿದೆ. ಮೊಬೈಲ್ ಕಳೆದುಕೊಂಡರೆ CAIR ಪೋರ್ಟಲ್‌ನಲ್ಲಿ ದೂರು ದಾಖಲಿಸುವಂತೆ ಡಿವೈಎಸ್‌ಪಿ ಪ್ರಭು ಸಲಹೆ ನೀಡಿದ್ದಾರೆ.
ಉಡುಪಿ, ಡಿ.16: ಒಂದು ಕಡೆ ಪೊಲೀಸರು ದುರಾಸೆಯಿಂದ ಕಳ್ಳತನ, ಮೋಸದ ಕೆಲಸಗಳಿಗೆ ಕೈ ಹಾಕಿದ್ರೆ, ಇನ್ನು ಕೆಲವು ಕಡೆ ಸತ್ಯದ ಹಾದಿಯಲ್ಲಿ ಸಾಗುತ್ತಿದ್ದಾರೆ. ಹೌದು ಇದಕ್ಕೆ ಉದಾಹರಣೆ ಉಡುಪಿಯ ಪೊಲೀಸರು. ಇಲ್ಲಿನ ಅಧಿಕಾರಿಗಳು ಜನರ ಮುಖದಲ್ಲಿ ಮಂದಹಾಸ ತಂದಿದ್ದಾರೆ. ಉಡುಪಿಯಲ್ಲಿ ನಡೆದ ಸರಣಿ ಮೊಬೈಲ್ ಕಳ್ಳತದಿಂದ ಉಡುಪಿ ಜನರು ಬೇಸತ್ತು. ಸಿಎಐಆರ್ ಪೋರ್ಟಲ್ ನಲ್ಲಿ ದೂರು ನೀಡಿದರು. ಇದೀಗ ಪೊಲೀಸರು ನಡೆಸಿದ ಕಾರ್ಯಚರಣೆಯಿಂದ ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದಿದ್ದಾರೆ. ನಗರ ಠಾಣೆ ಪೊಲೀಸರಿಂದ 60 ಮಂದಿಗೆ ಮೊಬೈಲ್ ಹಸ್ತಾಂತರ ಮಾಡಿದ್ದಾರೆ. 8 ಲಕ್ಷದ 83 ಸಾವಿರದ 400 ರೂ. ಮೌಲ್ಯದ 60 ಮೊಬೈಲ್ನು ಕಳೆದುಕೊಂಡವರಿಗೆ ವಾಪಸ್ ನೀಡಿದ್ದಾರೆ. ಮೊಬೈಲ್ ಕಳೆದುಕೊಂಡಿದ್ದವರಿಂದ ಸಿಎಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಾಗಿತ್ತು. ಸಿಎಐಆರ್ ನಲ್ಲಿ ದಾಖಲಾಗಿದ್ದ ದೂರು ನಗರ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಲಾಗಿತ್ತು. ಈ ದೂರಿನ ಆಧಾರ ಮೇಲೆ ಕಾರ್ಯಚರಣೆ ನಡೆಸಿದ ಪೊಲೀಸರು ಮೊಬೈಲ್ ಹುಡುಕಿಕೊಟ್ಟಿದ್ದಾರೆ. ಕಷ್ಟಪಟ್ಟು ಇಎಮ್ ಐ ಮೂಲಕ ಮೊಬೈಲ್ ಖರೀದಿಸಿದ್ದವರಿಗೆ ಇದೀಗ ಈ ವಿಚಾರ ಸಂತಸ ತಂದಿದೆ. ಇದೀಗ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಸಾರ್ವಜನಿಕರಿಗೆ ಡಿವೈಎಸ್ಪಿ ಡಿ.ಟಿ ಪ್ರಭು ಸಲಹೆಯೊಂದನ್ನು ನೀಡಿದ್ದಾರೆ. ಮೊಬೈಲ್ ಕಳೆದುಕೊಂಡರೆ ಗಾಬರಿಯಾಗದೆ ಸಿಎಐಆರ್ ಪೋರ್ಟಲ್ ನಲ್ಲಿ ದೂರು ದಾಖಲಿಸಿ, ಈ ವರ್ಷ ಸಿಎಐಆರ್ ಪೋರ್ಟಲ್ ನಲ್ಲಿ ಮೊಬೈಲ್ ಕಳವು ದೂರು ಹೆಚ್ಚಾಗಿದೆ ಎಂದು ಹೇಳಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

