- Kannada News Photo gallery Groom Join From Canada And Bride In Karnataka: Couple Gets Engaged On Video Call At Udupi
ಎಲ್ಲರೂ ಮಾತಾಡ್ತಿದ್ದ ಆ ಕಾಲ ಬಂದೇ ಬಿಡ್ತು: ಆನ್‌ಲೈನ್‌ನಲ್ಲೇ ನಡೆಯಿತು ನಿಶ್ಚಿತಾರ್ಥ
ಇತ್ತೀಚಿಗೆ ಎಲ್ಲವೂ ಆನ್‌ಲೈನ್ (Online) ಮಯವಾಗಿ ಬಿಟ್ಟಿದೆ. ಊಟ, ಬಟ್ಟೆಯಿಂದ ಹಿಡಿದು ಎಲ್ಲವೂ ಕೂತಲ್ಲೇ ಆನ್ಲೈನ್ನಲ್ಲಿಯೇ ನಡೆಯುತ್ತೆ. ಹೀಗಾಗಿ ಮುಂದಿನ ದಿನಗಳಲ್ಲಿ ಆನ್‌ಲೈನ್‌ನಲ್ಲೇ ನಿಶ್ಚಿತಾರ್ಥ, ಮದುವೆ ಮಾಡುವ ಕಾಲ ಬರಹುದು ಎಂದು ಹಳ್ಳಿಗಳಲ್ಲಿ ಜನರು ಮಾತಾಡುತ್ತಿರುತ್ತಾರೆ. ಇದೀಗ ಆ ಕಾಲ ಬಂದೇ ಬಿಟ್ಟಿದೆ. ಹೌದು...ಕೆಲಸದ ಒತ್ತಡ ಮತ್ತು ರಜೆ (Leave) ಸಿಗದ ಕಾರಣ ವಿದೇಶದಲ್ಲಿರುವ ವರ ದೇಶಕ್ಕೆ ಬರಲಾಗದೇ ಆನ್‌ಲೈನ್ ವಿಡಿಯೋ ಕಾಲ್ನಲ್ಲೇ ಯುವಕ-ಯುವತಿಯ ನಿಶ್ಚಿತಾರ್ಥ (Engagement) ನೆರವೇರಿದೆ. ಅಚ್ಚರಿ ಅಂದ್ರೆ ಇದು ಬೇರೆ ದೇಶದಲ್ಲಿ ನಡೆದಿಲ್ಲ. ಬದಲಾಗಿ ಕರ್ನಾಟಕದಲ್ಲಿ. ಅಚ್ಚರಿ ಅನ್ನಿಸಿದರೂ ಸತ್ಯ.
Updated on: Dec 16, 2025 | 9:45 PM

ಜಗತ್ತು ಡಿಜಿಟಲ್ ಆಗುತ್ತಿದ್ದಂತೆಯೇ ಎಲ್ಲವೂ ಆನ್‌ಲೈನ್ ಮಯವಾಗಿದೆ. ಊಟ, ಶಾಪಿಂಗ್ ಹೀಗೆ ಎಲ್ಲವೂ ಆನ್‌ಲೈನ್‌ನಲ್ಲೇ ಆರ್ಡರ್ ಮಾಡುವ ಕಾಲವಿದು. ಇದು ಇಷ್ಟಕ್ಕೆ ಸೀಮಿತವಾಗದೇ ನಿಶ್ಚಿತಾರ್ಥ, ಮದುವೆಯೂ ಆನ್ಲೈನ್‌ಗೆ ಕಾಲಿಟ್ಟಿದೆ. ಮಾಗಡಿ (Magadi) ಮೂಲದ ಯುವಕ ಹಾಗೂ ಉಡುಪಿ ಮೂಲದ ಯುವತಿ ಆನ್ಲೈನ್‌ನಲ್ಲಿ ಎಂಗೇಜ್‌ಮೆಂಟ್ (Online Engagement) ಮಾಡಿಕೊಂಡಿರೋದು ಇದಕ್ಕೆ ಸಾಕ್ಷಿಯಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ನಿವಾಸಿ ಸುಹಾಸ್ ಹಾಗೂ ಉಡುಪಿ ಮೂಲದ ಮೇಘನ ಆನ್‌ಲೈನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಉಡುಪಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಈ ನಿಶ್ಚಿತಾರ್ಥ ನಡೆದಿದ್ದು, ವರನ ಅನುಪಸ್ಥಿತಿಯಲ್ಲಿ ಎರಡೂ ಕುಟುಂಬಗಳು ಈ ಕಾರ್ಯಕ್ರಮ ನೆರವೇರಿಸಿವೆ.

ಅಂದಹಾಗೆ ಬ್ಯಾಹ್ಮಣ ಸಂಪ್ರದಾಯದಂತೆ ನಿಶ್ಚಿತಾರ್ಥ ನೆರವೇರಿದೆ. ಆನ್ ಲೈನ್ ವಿಡಿಯೋ ಮೂಲಕವೇ ಯುವಕ-ಯುವತಿ ಇಬ್ಬರು ಉಂಗುರವನ್ನ ಕ್ಯಾಮೆರಾಗಳಿಗೆ ತೋರಿಸಿ ಎಂಗೇಜ್ಮೇಟ್ ಮಾಡಿಕೊಂಡಿದ್ದಾರೆ.

ಕ್ಯಾಮರಾಗೆ ಆರತಿ ಬೆಳಗಿ ಮಂತ್ರಾಕ್ಷತೆ ಹಾಕಿ ನೆರೆದಿದ್ದವರು ಶುಭ ಹಾರೈಸಿದ್ರು. ಇನ್ನು ಕೆನಡಾದ ಕಾಲಮಾನ 12 ಗಂಟೆ ವ್ಯತ್ಯಾಸವಿದ್ದು ಉಡುಪಿಯಲ್ಲಿ ಹಗಲು ಹಾಗೂ ಕೆನಡಾದಲ್ಲಿ ಮಧ್ಯರಾತ್ರಿ ವೇಳೆ ನಿಶ್ಚಿತಾರ್ಥ ನೆರವೇರಿದೆ.

ಇಬ್ಬರ ವಿವಾಹ ಜನವರಿ 7 ಮತ್ತು 8 ರಂದು ಫಿಕ್ಸ್ ಆಗಿದೆ. ಹೀಗಾಗಿ ಇಬ್ಬರು ಮೊದಲಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ರು. ಆದರೆ ನಿಶ್ಚಿತಾರ್ಥಕ್ಕೆ ರಜೆ ಸಿಗದ ಹಿನ್ನೆಲೆಯಲ್ಲಿ ಇಬ್ಬರು ಸಹಾ ಆನ್ ಲೈನ್ ವಿಡಿಯೋ ಮೂಲಕವೇ ಉಡುಪಿಯ ಸರಸ್ವತಿ ಸಭಾಭವನದಲ್ಲಿ ನೆರವೇರಿದೆ.

ಅಂದಹಾಗೆ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಚಕ್ರಭಾವಿ ಗ್ರಾಮದ ಶ್ರೀಧರ್ ಮೂರ್ತಿ ಹಾಗೂ ಗೌರಿ ಅವರ ಜೇಷ್ಠ ಪುತ್ರ ಸುಹಾಸ್, ಬೆಂಗಳೂರಿನಲ್ಲಿ ವ್ಯಾಸಂಗ ಮುಗಿಸಿ ಕಳೆದ ಕೆಲ ತಿಂಗಳಿಂದ ಕೆನಡಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಅಪ್ಲಿಕೇಶನ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು ಉಡುಪಿ ನಿವಾಸಿ ರವೀಂದ್ರ ರಾವ್ ಹಾಗಯು ಕಾತ್ಯಾಯಿನಿ ದಂಪತಿಗಳ ಜೇಷ್ಠ ಪುತ್ರು ಮೇಘಾ, ಮುಂಬೈನಾ ಬ್ಯಾಂಕ್ ವೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಇನ್ನು ಬ್ರಾಹ್ಮಣ ಸಂಪ್ರದಾಯದಂತೆ ಎರಡೂ ಕುಟುಂಬಸ್ಥರು ನಿಶ್ಚಿತಾರ್ಥ ನೆರವೇರಿಸಿದ್ದು, ಎಲ್‌ಇಡಿ ಸ್ಕ್ರೀನ್‌ಗೆ ಆರತಿ ಬೆಳಗಿ ಮಂತ್ರಾಕ್ಷತೆ ಹಾಕಿ ವಧು, ವರನಿಗೆ ಹಿರಿಯರು ಶುಭ ಕೋರಿದ್ದಾರೆ.




