ರಕ್ಷಿತಾ ಶೆಟ್ಟಿ ಆಟವೇಕೆ ಹೀಗಾಯ್ತು? ಬದಲಾಗದಿದ್ದರೆ ಇದೆ ಕಷ್ಟ
ರಕ್ಷಿತಾ ಶೆಟ್ಟಿ ಅವರ ಆಟದ ಶೈಲಿ ಬಗ್ಗೆ ಅನೇಕರಿಗೆ ಮೆಚ್ಚುಗೆ ಇತ್ತು. ಅವರು ಅಶ್ವಿನಿ ಗೌಡ ಹಾಗೂ ಜಾನ್ವಿಯನ್ನು ಎದುರು ಹಾಕಿಕೊಂಡಾಗ ಅವರ ಆಟಕ್ಕೆ ಸಖತ್ ಮೈಲೇಜ್ ಸಿಕ್ಕಿತು. ಆದರೆ, ರಕ್ಷಿತಾಗಿರೋ ಓವರ್ ಕಾನ್ಫಿಡೆನ್ಸ್ ಅವರನ್ನು ಹಾಳು ಮಾಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ಗೆ ಬಂದಾಗ ಸಾಕಷ್ಟು ಗಮನ ಸೆಳೆದರು. ಅವರ ಆಟದ ಶೈಲಿ ಎಲ್ಲರಿಗೂ ಇಷ್ಟ ಆಗಿತ್ತು. ಆದರೆ, ರಕ್ಷಿತಾ ಶೆಟ್ಟಿ ಈಗ ಸಂಪೂರ್ಣವಾಗಿ ಬದಲಾಗಿದ್ದಾರೆ. ಅವರಲ್ಲಿ ಓವರ್ ಕಾನ್ಫಿಡೆನ್ಸ್ ಎದ್ದು ಕಾಣಿಸುತ್ತಿದೆ. ಧ್ರುವಂತ್ ಅವರು ರಕ್ಷಿತಾನ ತಿದ್ದುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಅದು ಕೆಲಸ ಮಾಡುತ್ತಿಲ್ಲ. ರಕ್ಷಿತಾ ಆಟ ಇದೇ ರೀತಿ ಮುಂದುವರಿದರೆ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಎದುರಾಗಬಹುದು.
ರಕ್ಷಿತಾ ಶೆಟ್ಟಿ ಅವರ ಆಟದ ಶೈಲಿ ಬಗ್ಗೆ ಅನೇಕರಿಗೆ ಮೆಚ್ಚುಗೆ ಇತ್ತು. ಅವರು ಅಶ್ವಿನಿ ಗೌಡ ಹಾಗೂ ಜಾನ್ವಿಯನ್ನು ಎದುರು ಹಾಕಿಕೊಂಡಾಗ ಅವರ ಆಟಕ್ಕೆ ಸಖತ್ ಮೈಲೇಜ್ ಸಿಕ್ಕಿತು. ಆದರೆ, ರಕ್ಷಿತಾಗಿರೋ ಓವರ್ ಕಾನ್ಫಿಡೆನ್ಸ್ ಅವರನ್ನು ಹಾಳು ಮಾಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರನ್ನು ಸೋಲಿಸಲು ಅವರು ಯಾವ ಹಂತಕ್ಕೆ ಬೇಕಿದ್ದರೂ ಇಳಿಯಲು ರೆಡಿ ಇದ್ದಾರೆ.
ಇದನ್ನೂ ಓದಿ: ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಕ್ಷಿತಾ ಹಾಗೂ ಧ್ರುವಂತ್ ಸೀಕ್ರೆಟ್ ರೂಂನಲ್ಲಿ ಇದ್ದಾರೆ. ತಂಡ ರಚಿಸಲು ಬಿಗ್ ಬಾಸ್ ಇವರಿಗೆ ಅವಕಾಶ ನೀಡಿದರು. ಕಾವ್ಯಾನ ಕಂಡರೆ ರಕ್ಷಿತಾಗೆ ಸ್ವಲ್ಪವೂ ಇಷ್ಟ ಇಲ್ಲ. ಅವರನ್ನು ಟಾಸ್ಕ್ನಲ್ಲಿ ಸೋಲಿಸಲು ವೀಕ್ ಟೀಂ ರಚಿಸಲು ಮುಂದಾಗಿದ್ದರು. ಆದರೆ, ಇದಕ್ಕೆ ಧ್ರುವಂತ್ ಅವಕಾಶ ಕೊಡಲಿಲ್ಲ. ಇದರಿಂದ ಕಾವ್ಯಾ ಗೆದ್ದರು. ಕಾವ್ಯಾ ಗೆದ್ದಿದ್ದಕ್ಕೆ ರಕ್ಷಿತಾ ಮಾಡಿಕೊಂಡ ಬೇಸರ ಅಷ್ಟಿಷ್ಟಲ್ಲ.
ರಕ್ಷಿತ ಆಟ ದಿನೇ ದಿನೇ disappointing ಆಗ್ತಾ ಇದೆ. No clarity, no solid stand — just confusion. ಇದು smart game ಅಲ್ಲ, self-damage.#BBK12 pic.twitter.com/yixXD7vOOv
— Sampath (@Sampath19039707) December 16, 2025
ಇನ್ನು, ರಕ್ಷಿತಾ ಮಾತೇ ಅವರಿಗೆ ಮುಳ್ಳಾಗುತ್ತಿದೆ. ಅವರು ಏನು ಹೇಳುತ್ತಿದ್ದಾರೆ ಎಂಬುದು ಅವರಿಗೆ ತಿಳಿಯುತ್ತಿಲ್ಲ. ಯಾವ ಮಾತಿನಲ್ಲೂ ಸ್ಪಷ್ಟನೆ ಇಲ್ಲ. ತೆಗೆದುಕೊಳ್ಳುವ ನಿರ್ಧಾರಕ್ಕೆ ಅರ್ಥವಿಲ್ಲ. ಇದು ಅವರ ಆಟಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಅವರು ಟಾಪ್ 5 ಅಲ್ಲಿ ಇರ್ತಾರಾ ಎಂಬುದೇ ಪ್ರಶ್ನೆಯಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:53 am, Wed, 17 December 25




