ರಜತ್ ಫ್ಯಾಮಿಲಿ ಬಗ್ಗೆ ಮಾತನಾಡಿದ ಚೈತ್ರಾ ಕುಂದಾಪುರ: ದೊಡ್ಮನೆಯಲ್ಲಿ ಬಿಗ್ ಫೈಟ್
ಟಾಸ್ಕ್ ಆಡುವಾಗ ಚೈತ್ರಾ ಕುಂದಾಪುರ ಅವರು ನಿಯಮಗಳನ್ನು ಮುರಿದಿದ್ದಾರೆ ಎಂಬುದು ರಜತ್ ಆರೋಪ. ಅದೇ ಕಾರಣಕ್ಕೆ ಚೈತ್ರಾ ಕುಂದಾಪುರ ಮತ್ತು ರಜತ್ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರು ಆಗಿದೆ. ಜಗಳದ ಭರದಲ್ಲಿ ಚೈತ್ರಾ ಕುಂದಾಪುರ ಅವರು ರಜತ್ ಫ್ಯಾಮಿಲಿಯ ಬಗ್ಗೆ ಮಾತನಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋಗೆ ರಜತ್ ಮತ್ತು ಚೈತ್ರಾ ಕುಂದಾಪುರ (Chaithra Kundapura) ಅವರು ವೈಲ್ಡ್ ಕಾರ್ಡ್ ಮೂಲಕ ಬಂದಿದ್ದಾರೆ. ಈ ಮೊದಲು ಅವರು 11ನೇ ಸೀಸನ್ನಲ್ಲೂ ಸ್ಪರ್ಧಿಸಿದ್ದರು. ಹಳೇ ಸೀಸನ್ನಲ್ಲಿ ಅವರಿಬ್ಬರು ಹತ್ತಾರು ಬಾರಿ ಜಗಳ ಆಡಿದ್ದರು. 12ನೇ ಸೀಸನ್ಗೆ ಕಾಲಿಟ್ಟಾಗಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದರು. ಆದರೆ ಈಗ ಅದೇ ಆಪ್ತತೆ ಮುಂದುವರಿದಿಲ್ಲ. ಆಟದ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳ ಆಗಿದೆ. ತೀರಾ ಹೀನಾಯವಾಗಿ ಇಬ್ಬರೂ ಬೈಯ್ದುಕೊಂಡಿದ್ದಾರೆ. ಚೈತ್ರಾ ಕುಂದಾಪುರ ಅವರು ಒಂದು ಹೆಜ್ಜೆ ಮುಂದೆ ಹೋಗಿ ರಜತ್ (Rajath Kishan) ಅವರ ಫ್ಯಾಮಿಲಿ ಬಗ್ಗೆ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಯಾರು ಎಷ್ಟೇ ಕ್ಲೋಸ್ ಆಗಿದ್ದರೂ ಕೂಡ ಟಾಸ್ಕ್ ಆಡುವಾಗ ಎದುರಾಳಿಗಳಾಗಲೇ ಬೇಕು. ಚೈತ್ರಾ ಕುಂದಾಪುರ ಮತ್ತು ರಜತ್ ಅವರ ವಿಚಾರದಲ್ಲಿ ಹಾಗೆಯೇ ಆಗಿದೆ. ಇತ್ತೀಚೆಗೆ ಬಿಗ್ ಬಾಸ್ ನೀಡಿದ ಟಾಸ್ಕ್ನಲ್ಲಿ ರಜತ್ ಮತ್ತು ಚೈತ್ರಾ ಕುಂದಾಪುರ ಅವರು ಬೇರೆ ಬೇರೆ ತಂಡದಲ್ಲಿ ಆಟ ಆಡುತ್ತಿದ್ದರು. ಆಗ ಅವರಿಬ್ಬರ ನಡುವೆ ಕ್ಲ್ಯಾಶ್ ಆಗಿದೆ.
ಚೈತ್ರಾ ಕುಂದಾಪುರ ಅವರು ಟಾಸ್ಕ್ ಆಡುವಾಗ ನಿಯಮಗಳನ್ನು ಮುರಿದಿದ್ದಾರೆ ಎಂಬುದು ರಜತ್ ಆರೋಪ. ನಿಯಮ ಮುರಿದಿದ್ದೂ ಅಲ್ಲದೇ ಅವರು ಸುಳ್ಳು ಕೂಡ ಹೇಳಿದ್ದಾರೆ ಎಂದು ರಜತ್ ಗರಂ ಆಗಿದ್ದಾರೆ. ‘ನೀನು ಸುಳ್ಳಿ’ ಎಂದು ಕಟುವಾಗಿ ಟೀಕಿಸಿದ್ದಾರೆ. ‘ನ್ಯಾಯವಾಗಿ ಆಟ ಆಡೋಕೆ ಚೈತ್ರಾಗೆ ಒಮ್ಮೆಯೂ ಆಗಲ್ಲ. ಸೋಲುವ ಸಮಯದಲ್ಲಿ ಮೋಸ ಮಾಡ್ತಾಳೆ’ ಎಂದು ರಜತ್ ಕೂಗಾಡಿದ್ದಾರೆ.
ಈ ಮಾತಿನ ಚಕಮಕಿ ನಡೆಯುವಾಗಲೇ ಡಿಸೆಂಬರ್ 16ರ ಸಂಚಿಕೆ ಅಂತ್ಯವಾಗಿದೆ. ಆದರೆ ಈ ಮೊದಲೇ ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದ್ದ ಪ್ರೋಮೋದಲ್ಲಿ ಜಗಳದ ಇನ್ನಷ್ಟು ವಿವರಗಳು ಬಹಿರಂಗ ಆಗಿದ್ದವು. ‘ಅವನ ಫ್ಯಾಮಿಲಿಗೆ ಅದೊಂದು ಸರ್ನೇಮ್ ಇದೆ. ಅದನ್ನು ಅವನು ಎಲ್ಲರಿಗೂ ಅಂಟಿಸುತ್ತಿದ್ದಾನೆ’ ಎಂದು ಚೈತ್ರಾ ಆರೋಪಿಸಿದ್ದಾರೆ.
ಚೈತ್ರಾ ಅವರು ಫ್ಯಾಮಿಲಿ ಬಗ್ಗೆ ಮಾತನಾಡಿದ್ದಕ್ಕೆ ರಜತ್ಗೆ ಕೋಪಬಂದಿದೆ. ‘ಆಟ ಆಡೋಕೆ ಯೋಗ್ಯತೆ ಇಲ್ಲದೇ ಇರುವವಳು ನೀನು’ ಎಂದು ರಜತ್ ಹೇಳಿದ್ದಾರೆ. ಈ ವಿವರಗಳು ಡಿಸೆಂಬರ್ 17ರ ಸಂಚಿಕೆಯಲ್ಲಿ ಪ್ರಸಾರ ಆಗಲಿದೆ. ಈ ವಾರ ರಾಶಿಕಾ ಶೆಟ್ಟಿ ಅವರು ಕ್ಯಾಪ್ಟನ್ ಆಗಿದ್ದಾರೆ. ಈ ಎಲ್ಲ ಜಗಳದ ನಡುವೆ ಆಟದ ಉಸ್ತುವಾರಿ ವಹಿಸುವುದು ಅವರಿಗೆ ತಲೆನೋವಾಗಿದೆ.
ಇದನ್ನೂ ಓದಿ: ಗಿಲ್ಲಿ ವಿರುದ್ಧ ಸಮರ ಸಾರಿದ ಚೈತ್ರಾ ಕುಂದಾಪುರ: ಮಾತಿಗೆ ಮಾತು ಬೆಳೆದು ಮನೆ ರಣರಂಗ
ಈ ಮೊದಲು ಅಶ್ವಿನಿ ಗೌಡ ಅವರು ಜೋರಾಗಿ ಜಗಳ ಮಾಡುತ್ತಿದ್ದರು. ಆದರೆ ಕೆಲವು ವಾರಗಳಿಂದ ಅವರು ಸೈಲೆಂಟ್ ಆಗಿದ್ದಾರೆ. ಅವರ ಬದಲು ಚೈತ್ರಾ ಕುಂದಾಪುರ ಅವರು ಜಗಳ ಶುರು ಮಾಡಿಕೊಂಡಿದ್ದಾರೆ. ಈಗಾಗಲೇ ಅವರು ಅಶ್ವಿನಿ ಗೌಡ ಜೊತೆಗೂ ಜಗಳ ಮಾಡಿದ್ದಾರೆ. ಟಾಸ್ಕ್ ವೇಳೆ ಉಗಿದಿದ್ದಾರೆ. ಆದರೆ ನಂತರ ಹೋಗಿ ಅಶ್ವಿನಿ ಗೌಡ ಬಳಿ ಕ್ಷಮೆ ಕೇಳಿ ರಾಜಿ ಮಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




