25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
IPL 2026 Cameron green: ಭರ್ಜರಿ ಫಾರ್ಮ್ನಲ್ಲಿರುವ ಲೆಕ್ಕಾಚಾರದೊಂದಿಗೆ ಕೋಟಿ ಸುರಿದಿರುವ ಕೆಕೆಆರ್ ಫ್ರಾಂಚೈಸಿಗೆ ಹರಾಜಿನ ಬೆನ್ನಲ್ಲೇ ಗ್ರೀನ್ ಬಿಗ್ ಶಾಕ್ ನೀಡಿದ್ದಾರೆ. ಇದಾಗ್ಯೂ ಅವರ ಕಡೆಯಿಂದ ಮುಂಬರುವ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ಮೂಡಿಬರಲಿದೆಯಾ ಕಾದು ನೋಡಬೇಕಿದೆ. ಇನ್ನು ಅಡಿಲೇಡ್ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಆಸ್ಟ್ರೇಲಿಯಾ ತಂಡವು 37 ಓವರ್ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 146 ರನ್ ಕಲೆಹಾಕಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ಹೆಗ್ಗಳಿಕೆ ಆಸ್ಟ್ರೇಲಿಯಾದ ಕ್ಯಾಮರೋನ್ ಗ್ರೀನ್ ಪಾಲಾಗಿದೆ. ಮಂಗಳವಾರ (ಡಿ.16) ಅಬುಧಾಬಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಬರೋಬ್ಬರಿ 25.20 ಕೋಟಿ ರೂ.ಗೆ ಕ್ಯಾಮರೋನ್ ಗ್ರೀನ್ ಅವರನ್ನು ಖರೀದಿಸಿದೆ.
ಈ ಖರೀದಿ ಬೆನ್ನಲ್ಲೇ ಗ್ರೀನ್ ಶೂನ್ಯಕ್ಕೆ ಔಟಾಗಿರುವುದು ವಿಶೇಷ. ಅಡಿಲೇಡ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕ್ಯಾಮರೋನ್ ಗ್ರೀನ್ ಡಕ್ ಔಟ್ ಆಗಿ ಹೊರ ನಡೆದಿದ್ದಾರೆ.
ಇತ್ತ ಭರ್ಜರಿ ಫಾರ್ಮ್ನಲ್ಲಿರುವ ಲೆಕ್ಕಾಚಾರದೊಂದಿಗೆ ಕೋಟಿ ಸುರಿದಿರುವ ಕೆಕೆಆರ್ ಫ್ರಾಂಚೈಸಿಗೆ ಹರಾಜಿನ ಬೆನ್ನಲ್ಲೇ ಗ್ರೀನ್ ಬಿಗ್ ಶಾಕ್ ನೀಡಿದ್ದಾರೆ. ಇದಾಗ್ಯೂ ಅವರ ಕಡೆಯಿಂದ ಮುಂಬರುವ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ಮೂಡಿಬರಲಿದೆಯಾ ಕಾದು ನೋಡಬೇಕಿದೆ.
ಇನ್ನು ಅಡಿಲೇಡ್ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಆಸ್ಟ್ರೇಲಿಯಾ ತಂಡವು 37 ಓವರ್ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 146 ರನ್ ಕಲೆಹಾಕಿದೆ.

