
ವಾಷಿಂಗ್ಟನ್, ಜನವರಿ 22: ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕವು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ದಾವೋಸ್ನಲ್ಲಿ ಮಾಡಿರುವ ಭಾಷಣದಲ್ಲಿ ಹೇಳಿದ್ದಾರೆ. ಭಾಷಣದ ಸಮಯದಲ್ಲಿ ಡ್ಯಾನಿಶ್ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಬೇಕೆಂಬ ತಮ್ಮ ಬೇಡಿಕೆಗೆ ದೃಢವಾಗಿ ಅಂಟಿಕೊಂಡಿದ್ದಾರೆ. ಅಮೆರಿಕ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರವು ಗ್ರೀನ್‌ಲ್ಯಾಂಡ್ ಅನ್ನು ಸುರಕ್ಷಿತವಾಗಿಡಲು ಸಾಧ್ಯವಿಲ್ಲ ಮತ್ತು ಆದ್ದರಿಂದ ಯುರೋಪಿಯನ್ ನಾಯಕರು ಸ್ವ-ಆಡಳಿತ ದ್ವೀಪವನ್ನು ಅಮೆರಿಕದ ನಿಯಂತ್ರಣಕ್ಕೆ ವರ್ಗಾಯಿಸುವುದು ಅತ್ಯಗತ್ಯ ಎಂದು ಟ್ರಂಪ್ ಪ್ರತಿಪಾದಿಸಿದರು.
ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಚರ್ಚಿಸಲು ಮತ್ತೊಮ್ಮೆ ತಕ್ಷಣದ ಮಾತುಕತೆಗಳನ್ನು ನಾನು ಬಯಸುತ್ತಿದ್ದೇನೆ ಎಂದು ಟ್ರಂಪ್ ಹೇಳಿದರು. ತಮ್ಮ ಮಹತ್ವಾಕಾಂಕ್ಷೆಗಳು ವಿಫಲವಾದರೆ ಪರಿಣಾಮಗಳ ಬಗ್ಗೆಯೂ ಅವರು ಸುಳಿವು ನೀಡಿದ್ದಾರೆ.
ನಾನು ಬಲಪ್ರಯೋಗ ಮಾಡುತ್ತೇನೆಂದು ಜನರು ಭಾವಿಸಿದ್ದರು, ಆದರೆ ನಾನು ಬಲಪ್ರಯೋಗ ಮಾಡಬೇಕಾಗಿಲ್ಲ ಎಂದು ಟ್ರಂಪ್ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಹೇಳಿದರು.
ಇತ್ತೀಚಿನ ವಾರಗಳಲ್ಲಿ ಅವರ ಬಲವಾದ ಹೇಳಿಕೆಗಳು NATO ಮಿತ್ರರಾಷ್ಟ್ರಗಳನ್ನು ಕೆರಳಿಸಿದ್ದವು. ಆದರೆ ಈಗ ಟ್ರಂಪ್ ಅವರು ಮಿಲಿಟರಿ ಕ್ರಮ ಕೈಗೊಳ್ಳುವುದಿಲ್ಲ ಅಥವಾ ಒತ್ತಡ ಹೇರಲು ಸುಂಕಗಳನ್ನು ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಎಲ್ಲರೂ ಸಂತೋಷಪಡುವ ಒಪ್ಪಂದವಾಗಿದೆ. ಇದು ದೀರ್ಘಾವಧಿಯ ಒಪ್ಪಂದವಾಗಿದೆ. ಟ್ರಂಪ್ ಇದನ್ನು ಶಾಶ್ವತ ಒಪ್ಪಂದ ಎಂದು ಕರೆದಿದ್ದಾರೆ.
ಡೆನ್ಮಾರ್ಕ್, ಗ್ರೀನ್‌ಲ್ಯಾಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಮಾತುಕತೆಗಳು ಮುಂದುವರೆಯುತ್ತವೆ, ಇದರಿಂದಾಗಿ ರಷ್ಯಾ ಮತ್ತು ಚೀನಾ ಗ್ರೀನ್‌ಲ್ಯಾಂಡ್ ಮೇಲೆ ಎಂದಿಗೂ ಆರ್ಥಿಕ ಅಥವಾ ಮಿಲಿಟರಿ ನಿಯಂತ್ರಣವನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ತಾನೊಬ್ಬ ಸರ್ವಾಧಿಕಾರಿ ಎಂದು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಿಧಿಸಲಾಗಿದ್ದ ಸುಂಕಗಳನ್ನು ಈಗ ತಡೆಹಿಡಿಯಲಾಗಿದೆ ಎಂದು ಅವರು ಘೋಷಿಸಿದರು. ಈ ವಿಷಯದ ಬಗ್ಗೆ ಟ್ರಂಪ್ ಮುಖಾಮುಖಿಯಾಗುವ ಬದಲು ರಾಜಿ ಮಾರ್ಗವನ್ನು ಅನುಸರಿಸಲು ಬಯಸುತ್ತಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಟ್ರಂಪ್ ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳುವವರೆಗೆ ಡೆನ್ಮಾರ್ಕ್ ಮತ್ತು ಇತರ ಏಳು ಯುರೋಪಿಯನ್ ರಾಷ್ಟ್ರಗಳ ಮೇಲೆ ಶೇ.10 ಸುಂಕವನ್ನು ವಿಧಿಸುವುದಾಗಿ ಹೇಳಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರೆ ಅವರಿಗೆ ವೈಯಕ್ತಿಕವಾಗಿ ಕಳುಹಿಸಿದ ಪತ್ರದಲ್ಲಿ ನೊಬೆಲ್ ಪ್ರಶಸ್ತಿ ಸಿಗದಿರುವುದು ಎಷ್ಟು ನಿರಾಶೆಗೊಂಡಿದೆ ಎಂಬುದನ್ನು ಬಹಿರಂಗಪಡಿಸಿದ್ದರು. ಪತ್ರದ ವಿಷಯಗಳ ಬಗ್ಗೆ ಆಘಾತಕಾರಿ ಮಾಹಿತಿ ಸೋರಿಕೆಯಾಗಿದ್ದು, ಅದರಲ್ಲಿ ವಿಶ್ವ ಶಾಂತಿಯನ್ನು ಖಚಿತಪಡಿಸುವುದು ತಮ್ಮ ಜವಾಬ್ದಾರಿಯಲ್ಲ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಟ್ರಂಪ್ ಅವರು ನೊಬೆಲ್ ಪ್ರಶಸ್ತಿ ನಿರಾಕರಿಸಲ್ಪಟ್ಟಾಗಿನಿಂದ ಜಾಗತಿಕ ವ್ಯವಹಾರಗಳ ಬಗ್ಗೆ ತಮ್ಮ ದೃಷ್ಟಿಕೋನ ಬದಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದರು.
ಎಂಟಕ್ಕೂ ಹೆಚ್ಚು ಯುದ್ಧಗಳನ್ನು ನಿಲ್ಲಿಸಿದ್ದರೂ, ನನಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡದ ಕಾರಣ, ಶಾಂತಿಯ ಬಗ್ಗೆ ಮಾತ್ರ ಯೋಚಿಸಲು ಸಾಧ್ಯವಿಲ್ಲ. ಶಾಂತಿಗಾಗಿ ಉತ್ತಮ ಕೆಲಸ ಮಾಡಿದರೂ ನೊಬೆಲ್ ಪ್ರಶಸ್ತಿ ಸಿಗಲಿಲ್ಲ, ಆದ್ದರಿಂದ ಈಗ ಅವರು ಗ್ರೀನ್‌ಲ್ಯಾಂಡ್‌ನ ಅಮೆರಿಕದ ಆಕ್ರಮಣದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಟ್ರಂಪ್ ಪತ್ರದಲ್ಲಿ ತಿಳಿಸಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ