AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ಒಪ್ಪಿಗೆ ಇಲ್ಲದೆ ಪತ್ನಿ ಡಿಶ್​ವಾಶರ್ ತಂದಿದ್ದಕ್ಕೆ ಪತಿ ಮಾಡಿದ್ದೇನು ಗೊತ್ತಾ? ನೀವು ವಿಚ್ಛೇದನ ಕೊಟ್ಟೇಬಿಡಿ ಎಂದ ನೆಟ್ಟಿಗರು

ಪತ್ನಿ ತನ್ನ ಒಪ್ಪಿಗೆ ಇಲ್ಲದೆ ಡಿಶ್‌ವಾಶರ್ ಖರೀದಿಸಿದ್ದಕ್ಕೆ ಚೀನಾದ ಪತಿಯೊಬ್ಬ ಮನೆ ಧ್ವಂಸಗೊಳಿಸಿದ್ದಾನೆ. ಮನೆ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಪತ್ನಿ ಈ ಯಂತ್ರ ತಂದಿದ್ದರೂ, ಆರ್ಥಿಕ ಸಂಕಷ್ಟದಲ್ಲಿರುವ ಪತಿ ಕೋಪಗೊಂಡು ಮನೆಯಲ್ಲಿದ್ದ ವಸ್ತುಗಳನ್ನು ಒಡೆದಿದ್ದಾನೆ. ಬಳಿಕ ಪತಿ ಕ್ಷಮೆ ಕೇಳಿ ಸುಖಾಂತ್ಯ ಕಂಡಿದ್ದರೂ, ಈ ಘಟನೆ ವೈವಾಹಿಕ ಸಮಸ್ಯೆಗಳನ್ನು ಎತ್ತಿ ತೋರಿಸಿದೆ. ನೆಟ್ಟಿಗರು ಪತ್ನಿಗೆ ವಿಚ್ಛೇದನ ಪಡೆಯಲು ಸಲಹೆ ನೀಡಿದ್ದು, ಇದು ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಎಂದಿದ್ದಾರೆ.

ತನ್ನ ಒಪ್ಪಿಗೆ ಇಲ್ಲದೆ ಪತ್ನಿ ಡಿಶ್​ವಾಶರ್ ತಂದಿದ್ದಕ್ಕೆ ಪತಿ ಮಾಡಿದ್ದೇನು ಗೊತ್ತಾ? ನೀವು ವಿಚ್ಛೇದನ ಕೊಟ್ಟೇಬಿಡಿ ಎಂದ ನೆಟ್ಟಿಗರು
ಪಾತ್ರೆಗಳು
ನಯನಾ ರಾಜೀವ್
|

Updated on: Jan 22, 2026 | 7:25 AM

Share

ಚೀನಾ, ಜನವರಿ 22: ಪತ್ನಿ ತನ್ನ ಒಪ್ಪಿಗೆ ಇಲ್ಲದೆ ಪಾತ್ರೆ ತೊಳೆಯುವ ಸಾಧನ ಡಿಶ್​ವಾಶರ್ ತಂದಿದ್ದಕ್ಕೆ ಕೋಪಗೊಂಡ ಪತಿ(Husband) ಇಡೀ ಮನೆಯಲ್ಲಿರುವ ಪೀಠೋಪಕರಣ, ವಸ್ತುಗಳನ್ನು ಒಡೆದುಹಾಕಿರುವ ಘಟನೆ ಚೀನಾದಲ್ಲಿ ನಡೆದಿದೆ. ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಪತ್ನಿ ತನಗೆ ಗೊತ್ತಿಲ್ಲದೆ 25 ಸಾವಿರ ರೂ. ಮೌಲ್ಯದ ಡಿಶ್​ವಾಶರ್ ಖರೀದಿಸಿದ್ದಕ್ಕೆ ಕೋಪಗೊಂಡು ಆತ ಕೆಟ್ಟದಾಗಿ ನಡೆದುಕೊಂಡಿದ್ದಾನೆ.

ಮನೆಯಲ್ಲಿ ಯಾವ ಕೆಲಸಕ್ಕೂ ಪತಿ ಸಹಾಯ ಮಾಡುತ್ತಿರಲಿಲ್ಲ, ಹೀಗಾಗಿ ತನಗೇನು ಮಾಡಬೇಕೆಂದು ತೋಚದೆ, ಸ್ವಲ್ಪ ಕೆಲಸ ಕಡಿಮೆಯಾಗಲಿ ಎಂದು ಈ ಯಂತ್ರವನ್ನು ಖರೀದಿಸಿದ್ದಾಗಿ ಪತ್ನಿ ಹೇಳಿದ್ದಾರೆ. ಪತಿ ತನ್ನ ಹೆಂಡತಿಗೆ ಆರ್ಡರ್ ರದ್ದುಗೊಳಿಸಿ ಯಂತ್ರವನ್ನು ಹಿಂತಿರುಗಿಸುವಂತೆ ಆದೇಶಿಸಿದಾಗ, ಆಕೆ ನಿರಾಕರಿಸಿದ್ದಾರೆ ಅದಕ್ಕೆ ಕೋಪಗೊಂಡ ಪತಿ ಲಿವಿಂಗ್ ರೂಮಿನಲ್ಲಿದ್ದ ಪೀಠೋಪಕರಣಗಳು ಮತ್ತು ಇತರ ವಸ್ತುಗಳನ್ನು ಒಡೆದುಹಾಕಿದ್ದಾನೆ.

ಧ್ವಂಸಗೊಂಡ ಕೋಣೆಯ ವಿಡಿಯೋವನ್ನು ಕೂಡ ಮಾಡಲಾಗಿತ್ತು. ಅವರು ನನಗೆ ಡಿಶ್‌ವಾಶರ್ ಖರೀದಿಸಲು ಏಕೆ ಅನುಮತಿಸುವುದಿಲ್ಲ ಎಂದು ನನಗೆ ನಿಜವಾಗಿಯೂ ಅರ್ಥವಾಗುತ್ತಿಲ್ಲ. ನಾನು ತಪ್ಪು ಮಾಡಿದ್ದೇನೆಂದು ನನಗೆ ಅನಿಸುತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ.

ಮತ್ತಷ್ಟು ಓದಿ: ಪ್ರೀತಿಸಿ ಮದುವೆಯಾಗಿ ನಾಲ್ಕೇ ನಾಲ್ಕು ತಿಂಗಳು, ಮೂವರು ಪುರುಷರೊಂದಿಗೆ ಸಿಕ್ಕಿಬಿದ್ದ ಪತ್ನಿಯ ಕೊಲೆಗೈದ ಪತಿ

ಘಟನೆಯ ನಂತರ, ಪತ್ನ ಅಳುತ್ತಾ ಮನೆಯಿಂದ ಓಡಿಹೋಗಿದ್ದಾರೆ.ಬೀದಿಯಲ್ಲಿ ಗಂಟೆಗಟ್ಟಲೆ ಅಲೆದಾಡಿ ಬಳಿಕ ಹೋಟೆಲ್​ಗೆ ಹೋಗಿ ಉಳಿದುಕೊಂಡಿದ್ದರು. ಪತಿ ಮನೆಯಿಂದ ದೂರ ಕೆಲಸ ಮಾಡುತ್ತಾರೆ, ತಿಂಗಳಿಗೆ 11,000 ಯುವಾನ್ ( 144,844ರೂ.) ಸಂಪಾದಿಸುತ್ತಾರೆ, ಆದರೆ ಹೆಂಡತಿ ತಮ್ಮ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಾಳೆ.

ಕಳೆದ ವರ್ಷ ತನ್ನ ಅನಾರೋಗ್ಯ ಮತ್ತು ಕೆಲಸ ಮಾಡಲು ಸಾಧ್ಯವಾಗದ ಕಾರಣ ಆಕೆಯ ಮೇಲೆ ಕೋಪ ಹುಟ್ಟಿಕೊಂಡಿದೆ ಎಂಬುದು ಆಕೆಯ ಮಾತು. ಅವರು ಸಾಲದಲ್ಲಿ ಸಿಲುಕಿರುವ ಕಾರಣ ಡಿಶ್‌ವಾಶರ್ ಹಿಂದಿರುಗಿಸಿದ್ದಾರೆ ಎಂದು ಆಕೆ ಹೇಳಿದ್ದಾರೆ.

ಮರುದಿನವೇ ಆಕೆಯ ಪತಿ ಪತ್ನಿಗೆ ಕರೆ ಮಾಡಿ ಕ್ಷಮಿಸು, ಅಂದು ನನ್ನ ಮನಸ್ಥಿತಿ ಕೆಟ್ಟದಾಗಿತ್ತು ಆ ರೀತಿ ನಾನು ನಡೆದುಕೊಳ್ಳಬಾರದಿತ್ತು, ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ , ನಾವು ಚಿಕ್ಕ ಡಿಶ್​ವಾಶರ್ ಖರೀದಿಸೋಣ ಮನೆಗೆ ಬಾ ಎಂದು ಕೇಳಿದ್ದಾನೆ. ಆಗ ಈ ಕತೆ ಸುಖಾಂತ್ಯಗೊಂಡಿದೆ.

ಆದರೆ ನೆಟ್ಟಿಗರು ಆಕೆಗೆ ವಿಚ್ಛೇದನ ಪಡೆಯುವಂತೆ ಸಲಹೆ ನೀಡಿದ್ದಾರೆ. ಇಂಥಾ ವ್ಯಕ್ತಿ ಜತೆ ಬಾಳುವುದಕ್ಕಿಂತ ವಿಚ್ಛೇದನ ಪಡೆಯುವುದೇ ಬೆಟರ್ ಎಂದಿದ್ದಾರೆ. ಇನ್ನೂ ಕೆಲವರು ಪತಿಯ ಆಕ್ರೋಶಕ್ಕೆ ಚೀನಾದ ಆರ್ಥಿಕ ಸಂಕಷ್ಟಗಳೇ ಕಾರಣ ಎಂದು ದೂಷಿಸಿದರು. ಮಹಿಳೆ ತನ್ನ ಪತಿಯೊಂದಿಗೆ ಚರ್ಚಿಸದೆ ತಮ್ಮ ಕುಟುಂಬದ ಆರ್ಥಿಕ ಸಾಮರ್ಥ್ಯಗಳನ್ನು ಮೀರಿ ವಸ್ತುಗಳನ್ನು ಖರೀದಿಸುವುದು ತಪ್ಪು ಎಂದು ಮತ್ತೊಬ್ಬರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ