Israel Hamas Conflict: ಇಂದು 17 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ಹಮಾಸ್(Hamas) ಇಂದು 17 ಒತ್ತೆಯಾಳುಗಳ ಎರಡನೇ ಗುಂಪನ್ನು ಬಿಡುಗಡೆ ಮಾಡಿದೆ. ಇದರಲ್ಲಿ 13 ಇಸ್ರೇಲಿ ಮತ್ತು ನಾಲ್ಕು ಥಾಯ್ ಪ್ರಜೆಗಳು ಸೇರಿದ್ದಾರೆ. ಅವರು ಭಾನುವಾರ ಯಶಸ್ವಿಯಾಗಿ ಇಸ್ರೇಲ್​ಗೆ ಆಗಮಿಸಿದ್ದಾರೆ. ಒಪ್ಪಂದದ ನಿಯಮಗಳನ್ನು ಇಸ್ರೇಲ್ ಉಲ್ಲಂಘಿಸಿದೆ ಎಂದು ಹಮಾಸ್ ಹೇಳಿಕೊಂಡಿದ್ದರಿಂದ ಒತ್ತೆಯಾಳುಗಳ ಬಿಡುಗಡೆ ಹಲವು ಗಂಟೆಗಳ ಕಾಲ ವಿಳಂಬವಾಯಿತು.

Israel Hamas Conflict: ಇಂದು 17 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್
ನಯನಾ ಎಸ್​ಪಿ Edited By:

Updated on: Nov 26, 2023 | 8:34 AM

ಹಮಾಸ್(Hamas) ಇಂದು 17 ಒತ್ತೆಯಾಳುಗಳ ಎರಡನೇ ಗುಂಪನ್ನು ಬಿಡುಗಡೆ ಮಾಡಿದೆ. ಇದರಲ್ಲಿ 13 ಇಸ್ರೇಲಿ ಮತ್ತು ನಾಲ್ಕು ಥಾಯ್ ಪ್ರಜೆಗಳು ಸೇರಿದ್ದಾರೆ. ಅವರು ಭಾನುವಾರ ಯಶಸ್ವಿಯಾಗಿ ಇಸ್ರೇಲ್​ಗೆ ಆಗಮಿಸಿದ್ದಾರೆ. ಒಪ್ಪಂದದ ನಿಯಮಗಳನ್ನು ಇಸ್ರೇಲ್ ಉಲ್ಲಂಘಿಸಿದೆ ಎಂದು ಹಮಾಸ್ ಹೇಳಿಕೊಂಡಿದ್ದರಿಂದ ಒತ್ತೆಯಾಳುಗಳ ಬಿಡುಗಡೆ ಹಲವು ಗಂಟೆಗಳ ಕಾಲ ವಿಳಂಬವಾಯಿತು.

ಒತ್ತೆಯಾಳು ಬಿಡುಗಡೆಯು ಕತಾರ್ ಮತ್ತು ಈಜಿಪ್ಟ್​ ಮಧ್ಯಸ್ಥಿಕೆಯ ನಿರ್ಣಾಯಕ ಒಪ್ಪಂದದ ಭಾಗವಾಗಿದೆ. ನಾಲ್ಕು ದಿನಗಳಲ್ಲಿ 150 ಪ್ಯಾಲೆಸ್ತೀನಿಯನ್ ಕೈದಿಗಳಿಗೆ ಒಟ್ಟು 50 ಒತ್ತೆಯಾಳುಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಬಿಡುಗಡೆಯಾದ 13 ಇಸ್ರೇಲಿಗಳಲ್ಲಿ 6 ಮಹಿಳೆಯರು ಮತ್ತು ಏಳು ಮಕ್ಕಳು ಮತ್ತು ಯುವಕರಿದ್ದಾರೆ ಎಂದು ಪ್ರಧಾನಿ ಬೆಂಜಮಿನ್ ನೇತನ್ಯಾಹು ಕಚೇರಿ ತಿಳಿಸಿದೆ.

ಶುಕ್ರವಾರ ಹಮಾಸ್, ಇಸ್ರೇಲಿ ಜೈಲುಗಳಿಂದ 39 ಪ್ಯಾಲೆಸ್ತೀನ್ ಮಹಿಳೆಯರು ಮತ್ತು ಯುವಕರಿಗೆ ಪ್ರತಿಯಾಗಿ ಮಕ್ಕಳು ಮತ್ತು ವೃದ್ಧರು ಸೇರಿದಂತೆ 13 ಒತ್ತೆಯಾಳುಗಳ ಮೊದಲ ಬ್ಯಾಚ್​ ಅನ್ನು ಬಿಡುಗಡೆ ಮಾಡಿತು.

ಹಮಾಸ್ ಸಶಸ್ತ್ರ ವಿಭಾಗವು ನಿಗದಿತ ಎರಡನೇ ಸುತ್ತಿನ ಒತ್ತೆಯಾಳುಗಳ ಬಿಡುಗಡೆ ವಿಳಂಬಗೊಳಿಸಿದಾಗ ಒಪ್ಪಂದದ ಹಳಿ ತಪ್ಪಿದ್ದು, ತೀವ್ರ ಕಳವಳ ಉಂಟಾಗಿತ್ತು.

ಮತ್ತಷ್ಟು ಓದಿ: ನಾಲ್ಕು ದಿನಗಳ ಕದನ ವಿರಾಮ; 13 ಇಸ್ರೇಲಿ, 12 ಥಾಯ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್​ ಮೇಲೆ 5 ಸಾವಿರಕ್ಕೂ ಅಧಿಕ ರಾಕೆಟ್​ಗಳಿಂದ ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾದಲ್ಲಿ ದಾಳಿ ಆರಂಭಿಸಿತ್ತು. ಹಮಾಸ್​ನ್ನು ಹತ್ತಿಕ್ಕುವವರೆಗೂ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಹೇಳಿತ್ತು. ಅಷ್ಟೇ ಅಲ್ಲದೆ ಯುದ್ಧವನ್ನು ನಾವು ಪ್ರಾರಂಭಿಸಿಲ್ಲ ಆದರೆ ಅಂತ್ಯ ನಮ್ಮಿಂದಲೇ ಆಗಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದರು.

ಇದಾದ ಬಳಿಕ ಕತಾರ್ ಮಧ್ಯಸ್ಥಿಕೆಯಲ್ಲಿ 4 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ ನೀಡಿತ್ತು. ಅದರ ಭಾಗವಾಗಿ ಇದೀಗ ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ.

Nayana SP

ಹುಟ್ಟೂರು ದಕ್ಷಿಣ ಕನ್ನಡ ಬೆಳೆದದ್ದು ನಮ್ಮ ಬೆಂಗಳೂರಿನಲ್ಲಿ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಶಿಕ್ಷಣ, ಜೋತಿಷ್ಯ, ಉದ್ಯೋಗ, ಹೀಗೆ ಹಲವು. ಕಳೆದ ಎರಡು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಓದುಗರ ಅಭಿರುಚಿಗೆ ಅನುಗುಣವಾಗಿ ಲೇಖನಗಳನ್ನು ಬರೆಯುವುದು ನನ್ನ ಪ್ರಯತ್ನ.

Follow Us