ತಾಯಿ ಇಲ್ಲದ ಮಗುವಿಗೆ ದಿನವೂ ಜಡೆ ಹೆಣೆದು ಅಮ್ಮನಾದ ಬಸ್ ಚಾಲಕಿ

ಹನ್ನೊಂದು ವರ್ಷದ ಇಸಾಬೆಲ್ಲಾ ತಾಯಿಯನ್ನು ಕಳೆದುಕೊಂಡಾಗ, ಆಕೆಯ ತಂದೆಗೆ ಕೂದಲನ್ನು ಬಾಚುವುದೇ ದೊಡ್ಡ ತಲೆ ನೋವಾಗಿತ್ತು. ಇದನ್ನು ಗಮನಿಸಿದ ಬಸ್ ಚಾಲಕಿ ಟ್ರೇಸಿ ಡೀನ್, ಪ್ರತಿದಿನ ಬೆಳಗ್ಗೆ ಇಸಾಬೆಲ್ಲಾಳಿಗೆ ಬಸ್ಸಿನಲ್ಲಿಯೇ ವಿಭಿನ್ನ ಶೈಲಿಯ ಜಡೆಗಳನ್ನು ಹೆಣೆಯಲು ಪ್ರಾರಂಭಿಸಿದರು. ಟ್ರೇಸಿ ಅವರ ಈ ನಿಸ್ವಾರ್ಥ ಪ್ರೀತಿ ಇಸಾಬೆಲ್ಲಾಳ ಜೀವನದಲ್ಲಿ ತಾಯಿಯ ಸ್ಥಾನವನ್ನು ತುಂಬಿ, ಅವಳಲ್ಲಿ ಆತ್ಮವಿಶ್ವಾಸ ಮತ್ತು ಸಂತೋಷವನ್ನು ಹೆಚ್ಚಿಸಿತು. ಇದು ಮಾನವೀಯತೆಯ ಅತ್ಯುತ್ತಮ ಉದಾಹರಣೆ. ,

ತಾಯಿ ಇಲ್ಲದ ಮಗುವಿಗೆ ದಿನವೂ ಜಡೆ ಹೆಣೆದು ಅಮ್ಮನಾದ ಬಸ್ ಚಾಲಕಿ
ಬಾಲಕಿ
Image Credit source: NDTV

Updated on: Jun 19, 2026 | 10:04 AM

ನ್ಯೂಯಾರ್ಕ್​, ಜೂನ್ 19: ಎರಡು ವರ್ಷಗಳ ಹಿಂದೆ ಅಪರೂಪದ ಕಾಯಿಲೆಯಿಂದ ತಾಯಿಯನ್ನು ಕಳೆದುಕೊಂಡ 11 ವರ್ಷದ ಬಾಲಕಿ ಇಸಾಬೆಲ್ಲಾ ಪಿಯರಿ, ಪ್ರತಿ ದಿನ ಆಕೆಯೇ ಹೇಗೋ ಕಷ್ಟಪಟ್ಟು ಶಾಲೆ(School)ಗೆ ಹೋಗಲು ತಯಾರಾಗುತ್ತಿದ್ದಳು. ಆಕೆಯ ತಂದೆ ಫಿಲಿಪ್ ಪಿಯರಿ ಬೆಳಗ್ಗೆಯೇ ಕೆಲಸಕ್ಕೆ ಹೋಗಬೇಕಿದ್ದರಿಂದ ಮಗಳನ್ನು ತಾನೊಬ್ಬನೇ ಸಾಕುವುದು ಕಷ್ಟವಾಗಿತ್ತು. ಮಗಳ ಕೂದಲನ್ನು ಹೇಗೆ ಬಾಚಬೇಕೆಂದು ಕೂಡ ಗೊತ್ತಿರಲಿಲ್ಲ ಇನ್ನು ಜಡೆ ಹೆಣೆಯುವುದು ದೂರದ ಮಾತು. ಗೊಂದಲದಲ್ಲಿದ್ದ ತಂದೆ ಮಗಳ ಕೂದಲನ್ನು ತೀರ ಚಿಕ್ಕದಾಗಿ ಕತ್ತರಿಸಿದ್ದರು.

ಆದರೆ ಹಠ ಮಾಡಿದ್ದ ಇಸಾಬೆಲ್ಲಾ ಮತ್ತೊಂದು ಬಾರಿ ಕೂದಲು ಕತ್ತರಿಸಲು ಬಿಡಲಿಲ್ಲ. ಸುಮ್ಮನೆ ಪೋನಿಟೇಲ್ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಳು. ಒಂದು ದಿನ ಅವಳ ಶಾಲಾ ಬಸ್ ಚಾಲಕಿ ಟ್ರೇಸಿ ಡೀನ್, ಇನ್ನೊಬ್ಬ ವಿದ್ಯಾರ್ಥಿನಿಯ ಕೂದಲನ್ನು ಸುಂದರವಾಗಿ ಹೆಣೆಯುತ್ತಿರುವುದನ್ನು ಇಸಾಬೆಲ್ಲಾ ಗಮನಿಸಿದಳು. ತಕ್ಷಣ ಧೈರ್ಯ ಮಾಡಿ, ನನಗೂ ಜಡೆ ಹೆಣೆದು ಕೊಡ್ತೀರಾ? ಎಂದು ಬಸ್ ಚಾಲಕಿಯನ್ನು ಕೇಳಿಯೇ ಬಿಟ್ಟಳು.

ಬಸ್ ಚಾಲಕಿ ಟ್ರೇಸಿ ಪ್ರೀತಿಯಿಂದ ಒಪ್ಪಿಕೊಂಡರು. ಅಂದಿನಿಂದ ಪ್ರತಿದಿನ ಬೆಳಗ್ಗೆ ಇಸಾಬೆಲ್ಲಾ ಬಸ್ಸಿನಿಂದ ಇಳಿಯುವ ಮುನ್ನ ಟ್ರೇಸಿ ಅವಳಿಗೆ ವಿಭಿನ್ನ ಶೈಲಿಯ ಜಡೆಗಳನ್ನು ಹೆಣೆದು ಅಂದವಾಗಿ ಅಲಂಕರಿಸಲು ಆರಂಭಿಸಿದರು.

ಮತ್ತಷ್ಟು ಓದಿ: ಎಲ್ಲರಿಗೂ ಅಪ್ಪ ಇದ್ದಾರೆ ಆದ್ರೆ ನಂಗಿಲ್ಲ, ಯಾಕಪ್ಪಾ ಅಷ್ಟೊಂದು ಕುಡಿದ್ರಿ, ಯಾಕೆ ಹೋದ್ರಿ, ಪುಟ್ಟ ಬಾಲಕಿಯ ಪ್ರಶ್ನೆಗೆ ಉತ್ತರಿಸುವವರ್ಯಾರು?

ಬಸ್ ಚಾಲಕಿಯ ಈ ಪ್ರೀತಿಯ ಬಗ್ಗೆ ಇಸಾಬೆಲ್ಲಾ ಅತ್ಯಂತ ಭಾವುಕವಾಗಿ ಮಾತನಾಡಿದ್ದಾಳೆ. ಟ್ರೇಸಿ ಆಂಟಿ ಜಡೆ ಹೆಣೆಯುವಾಗ ನನಗೆ ನನ್ನ ಸ್ವಂತ ತಾಯಿಯೇ ನನ್ನ ಪಕ್ಕದಲ್ಲಿರುವಂತೆ ಅನಿಸುತ್ತದೆ. ನಾಳೆ ಅವರು ನನಗೆ ಯಾವ ಹೊಸ ಶೈಲಿಯ ಜಡೆ ಹೆಣೆಯುತ್ತಾರೆ ಎಂದು ನಾನು ಪ್ರತಿದಿನ ರಾತ್ರಿ ಉತ್ಸುಕತೆಯಿಂದ ಕಾಯುತ್ತಿರುತ್ತೇನೆ ಎಂದಿದ್ದಾಳೆ.

ಬಸ್ ಚಾಲಕಿ ಟ್ರೇಸಿ ಡೀನ್ ತಮಗೂ ಇಂತಹದೇ ಒಂದು ಕಹಿ ನೆನಪಿದೆ ಎಂದು ಹಂಚಿಕೊಂಡಿದ್ದಾರೆ. ಏಳು ವರ್ಷಗಳ ಹಿಂದೆ ನನಗೆ ಸ್ತನ ಕ್ಯಾನ್ಸರ್ (Breast Cancer) ಇರುವುದು ಪತ್ತೆಯಾಗಿತ್ತು. ಆಗ ನನ್ನ ತಲೆಯಲ್ಲಿ ಓಡಿದ್ದು ಒಂದೇ ಯೋಚನೆ ಒಂದು ವೇಳೆ ನಾನು ಸತ್ತರೆ ನನ್ನ ಪುಟ್ಟ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಗಂಡಂದಿರು ಮಕ್ಕಳನ್ನು ನೋಡಿಕೊಳ್ಳಬಲ್ಲರು, ಆದರೆ ತಾಯಂದಿರು ಮಾಡುವಂತೆ ಮಕ್ಕಳ ಕೂದಲನ್ನು ಬಾಚಿ ಜಡೆ ಹೆಣೆಯಲು ಅವರಿಗೆ ಬರುವುದಿಲ್ಲ. ಹಾಗಾಗಿ ಇಸಾಬೆಲ್ಲಾಳ ಪರಿಸ್ಥಿತಿ ನನಗೆ ಅರ್ಥವಾಯಿತು. ಬಸ್ಸಿಗೆ ಬರುವ ಮಕ್ಕಳನ್ನು ನಾವು ನಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದರೆ.

ಇಸಾಬೆಲ್ಲಾಳ ಶಾಲಾ ಶಿಕ್ಷಕರು ಕೂಡ ಈ ಬದಲಾವಣೆಯನ್ನು ಗಮನಿಸಿದ್ದಾರೆ. ಪ್ರತಿದಿನ ಸುಂದರವಾದ ಹೇರ್ ಸ್ಟೈಲ್‌ನೊಂದಿಗೆ ಶಾಲೆಗೆ ಬರುತ್ತಿರುವುದರಿಂದ ಇಸಾಬೆಲ್ಲಾಳಲ್ಲಿ ಆತ್ಮವಿಶ್ವಾಸ ಮತ್ತು ಸಂತೋಷ ತುಂಬಾ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಯಾವುದೇ ರಕ್ತದ ಸಂಬಂಧವಿಲ್ಲದಿದ್ದರೂ, ಕೇವಲ ಕಾಳಜಿಯಿಂದ ತನ್ನ ಮಗಳಿಗೆ ಅಮ್ಮನ ಸ್ಥಾನ ತುಂಬುತ್ತಿರುವ ಬಸ್ ಚಾಲಕಿ ಟ್ರೇಸಿ ಅವರ ನಿಸ್ವಾರ್ಥ ಸಹಾಯಕ್ಕೆ ಇಸಾಬೆಲ್ಲಾಳ ತಂದೆ ಕೃತಜ್ಞತೆ ಸಲ್ಲಿಸಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us