ತಾಯಿಯ ಜತೆ ಜಗಳವಾಡಿ ಹೋಟೆಲ್​ನ ಸೋಫಾಗೆ ಬೆಂಕಿ ಹಚ್ಚಿದ ಬಾಲಕಿಯ ಬಂಧನ

ತಾಯಿಯೊಂದಿಗೆ ಜಗಳವಾಡಿ, ಕೋಪದಲ್ಲಿ ಹೋಟೆಲ್​ನ ಸೋಫಾಗೆ ಬೆಂಕಿ ಹಚ್ಚಿರುವ ಬಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಾಯಿಯ ಜತೆ ಜಗಳವಾಡಿ ಹೋಟೆಲ್​ನ ಸೋಫಾಗೆ ಬೆಂಕಿ ಹಚ್ಚಿದ ಬಾಲಕಿಯ ಬಂಧನ
ಹೋಟೆಲ್ ಸೋಫಾ
Image Credit source: NDTV

Updated on: Jul 27, 2023 | 12:58 PM

ತಾಯಿಯೊಂದಿಗೆ ಜಗಳವಾಡಿ, ಕೋಪದಲ್ಲಿ ಹೋಟೆಲ್​ನ ಸೋಫಾಗೆ ಬೆಂಕಿ ಹಚ್ಚಿರುವ ಬಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ. 16 ವರ್ಷದ ಬಾಲಕಿ ಇಸಬೆಲ್ಲಾ ಫೇತ್ ಅಡೆಲಿನ್ ಗಾರ್ಸಿಯಾ ಮತ್ತು ಆಕೆಯ ತಾಯಿ ಇಲಿನಾಯ್ಸ್‌ನ ಪಿಯೋರಿಯಾದಿಂದ SW 36 ನೇ ಅವೆನ್ಯೂದಲ್ಲಿರುವ ಒಕಾಲಾ ಹಿಲ್ಟನ್‌ಗೆ ಬಂದಿದ್ದರು. ಈ ಘಟನೆಯು ಮುಂಜಾನೆ 3:20 ರ ಸುಮಾರಿಗೆ ನಡೆದಿದೆ.

ಈ ಘಟನೆ ಅಮೆರಿಕದಲ್ಲಿ ನಡೆದಿದೆ,   ಬೆಂಕಿ ಹಚ್ಚಿ ಐದು ನಿಮಿಷಗಳ ಬಳಿಕ 911ಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಬಾಲಕಿ ಮಾತನಾಡಿ, ನಾನು ನನ್ನ ತಾಯಿಯೊಂದಿಗೆ ಜಗಳವಾಡಿದ್ದೆ, ಅವರು ಕೋಪದಿಂದ ಬೇರೆ ಕೋಣೆಯನ್ನು ಪಡೆದಿದ್ದರು, ನಾನು ಎಷ್ಟು ಕರೆದರೂ ಬರಲಿಲ್ಲ, ಕರೆಗೂ ಉತ್ತರಿಸಲಿಲ್ಲ ಕೋಪದಿಂದ ಸೋಫಾಗೆ ಬೆಂಕಿ ಹಚ್ಚಿದ್ದೆ ಎಂದಿದ್ದಾಳೆ.

ಮತ್ತಷ್ಟು ಓದಿ: West Bengal: ಭಾರಿ ಅಗ್ನಿ ಅವಘಡ ಸಂಭವಿಸಿ 50ಕ್ಕೂ ಹೆಚ್ಚು ಅಂಗಡಿಗಳು ನಾಶ

ಕೊನೆಗೆ ಭಯವಾಗಿತ್ತು ಏನು ಮಾಡಬೇಕೆಂದು ತೋಚಲಿಲ್ಲ, ತಕ್ಷಣ ಹೋಟೆಲ್​ನ ಅಧಿಕಾರಿಗಳು ಹೋಟೆಲ್​ನಲ್ಲಿ ಆಶ್ರಯಿಸಿದ್ದ ಜನರನ್ನು ಸ್ಥಳಾಂತರಿಸಿದರು. ಅಗ್ನಿಶಾಮಕ ಸಿಬ್ಬಂದಿ ಹೋಟೆಲ್ ಲಾಬಿಗೆ ಪ್ರವೇಶಿಸಿದಾಗ ಭಾರಿ ಹೊಗೆ ಇತ್ತು. ಥರ್ಮಲ್ ಇಮೇಜಿಂಗ್ ಕ್ಯಾಮೆರಾ ಬಳಸಿ, ಸಿಬ್ಬಂದಿ ಬೆಂಕಿ ಹೊತ್ತಿಕೊಂಡಿದ್ದ ಆಸನವನ್ನು ಪತ್ತೆ ಮಾಡಿದರು. ನೀರಿನ ಕ್ಯಾನ್ ಬಳಕೆ ಮಾಡಿ ಬೆಂಕಿ ನಂದಿಸಿದರು, ಬೆಂಕಿಯು ಕೇವಲ ಸೋಫಾ ಮಾತ್ರವಲ್ಲ ಗೋಡೆಯನ್ನೂ ಆವರಿಸಿತ್ತು.

ಬಂದ ಏಳು ನಿಮಿಷಗಳಲ್ಲಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಸಂಕ್ಷಿಪ್ತ ತನಿಖೆಯ ನಂತರ ಪೊಲೀಸರು 16 ವರ್ಷದ ಬಾಲಕಿಯನ್ನು ಬಂಧಿಸಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿ ಇಲ್ಲಿ ಕ್ಲಿಕ್ ಮಾಡಿ