AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಬೀರಿಯಾದಲ್ಲಿ ರಷ್ಯಾದ ಹೆಲಿಕಾಪ್ಟರ್ ಪತನ; 6 ಸಾವು, ವಿಡಿಯೊ ವೈರಲ್

Russia chopper crash: ಖಾಸಗಿ ಕಂಪನಿಯೊಂದರ ಹೆಲಿಕಾಪ್ಟರ್ ಪ್ರವಾಸಿಗರ ಗುಂಪನ್ನು ಹೊತ್ತೊಯ್ಯುತ್ತಿತ್ತು ಎಂದು ರಷ್ಯಾದ ಸುದ್ದಿ ಸಂಸ್ಥೆ RIA ನೊವೊಸ್ಟಿಯನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್‌ನ ವರದಿ ತಿಳಿಸಿದೆ.

ರಶ್ಮಿ ಕಲ್ಲಕಟ್ಟ
|

Updated on:Jul 27, 2023 | 9:04 PM

Share

ಸೈಬೀರಿಯಾ ಜುಲೈ 27:ರಷ್ಯಾದ (Russia) ಸೈಬೀರಿಯಾದಲ್ಲಿ (Siberia) ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ (chopper crash) ಆರು ಜನರು ಸಾವಿಗೀಡಾಗಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಎಂಐ-8 ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡು ದಕ್ಷಿಣ ಸೈಬೀರಿಯಾದ ಅಲ್ಟಾಯ್ ರಿಪಬ್ಲಿಕ್ ನಲ್ಲಿ ಪತನ ಆಗಿದೆ ಎಂದು ನ್ಯೂಸ್ 9 ವರದಿ ಮಾಡಿದೆ. ಹೆಲಿಕಾಪ್ಟರ್ ಜೋರಾಗಿ ಸಿಡಿದು ಬೆಂಕಿ ಹೊತ್ತಿಕೊಂಡಿತು ಎಂದು ರಷ್ಯಾದ ತುರ್ತು ಸಚಿವಾಲಯದ ಅಲ್ಟಾಯ್ ಶಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಹೆಲಿಕಾಪ್ಟರ್ ಅಪಘಾತಕ್ಕೀಡಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಖಾಸಗಿ ಕಂಪನಿಯೊಂದರ ಹೆಲಿಕಾಪ್ಟರ್ ಪ್ರವಾಸಿಗರ ಗುಂಪನ್ನು ಹೊತ್ತೊಯ್ಯುತ್ತಿತ್ತು ಎಂದು ರಷ್ಯಾದ ಸುದ್ದಿ ಸಂಸ್ಥೆ RIA ನೊವೊಸ್ಟಿಯನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್‌ನ ವರದಿ ತಿಳಿಸಿದೆ.

ಚಾಪರ್‌ನಲ್ಲಿ ಮೂವರು ಸಿಬ್ಬಂದಿ ಸೇರಿದಂತೆ 15 ಪ್ರಯಾಣಿಕರು ಇದ್ದರು ಎಂದು ಆರ್‌ಐಎ ನೊವೊಸ್ಟಿ ವರದಿ ಮಾಡಿದೆ. ಆದಾಗ್ಯೂ, ಅಲ್ಟಾಯ್ ತುರ್ತು ಸಚಿವಾಲಯವು ಅದರಲ್ಲಿ 13 ಮಂದಿ ಪ್ರಯಾಣಿಕರಿದ್ದರು ಎಂದು ಹೇಳಿದೆ.

ಇದನ್ನೂ ಓದಿಭಾರತದ ರಫ್ತು ನಿಷೇಧದಿಂದಾಗಿ ಅಮೆರಿಕದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಜನ; ಮೂರು ಪಟ್ಟು ಏರಿದ ಬೆಲೆ

Mi-8 ಒಂದು ಅವಳಿ-ಎಂಜಿನ್ ಹೆಲಿಕಾಪ್ಟರ್ ಆಗಿದ್ದು, ಮೂಲತಃ ರಷ್ಯಾದಿಂದ 1960 ರ ದಶಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ರಷ್ಯಾ ಮತ್ತು ಇತರ ವಿದೇಶಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:02 pm, Thu, 27 July 23

ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?