ಭಾರತದ ರಫ್ತು ನಿಷೇಧದಿಂದಾಗಿ ಅಮೆರಿಕದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಜನ; ಮೂರು ಪಟ್ಟು ಏರಿದ ಬೆಲೆ
ಅನಿವಾಸಿ ಭಾರತೀಯರು (NRI) ಭಾರತೀಯ ಪಾಕಪದ್ಧತಿಯಲ್ಲಿ ಪ್ರಧಾನವಾದ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ತಮ್ಮ ಪೂರೈಕೆಯನ್ನು ಪಡೆಯಲು ಹರಸಾಹಸ ಮಾಡುತ್ತಿರುವಾಗ ನಿಷೇಧದ ಸುದ್ದಿ ಹೊಡೆತ ನೀಡಿದೆ. ದೈತ್ಯ ಮಳಿಗೆಗಳಲ್ಲಿ ಉಳಿದಿರುವ ಅಕ್ಕಿ ಚೀಲಗಳನ್ನು ಖರೀದಿಸಲು ಜನರು ಮುಗಿ ಬೀಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ವಾಷಿಂಗ್ಟನ್ ಜುಲೈ 27: ಭಾರತ ಇತ್ತೀಚೆಗೆ ಬಾಸ್ಮತಿಯೇತರ ಬಿಳಿ ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದ ನಂತರ ಅಮೆರಿಕದಾದ್ಯಂತ (United States) ಜನರು ಆತಂಕಗೊಂಡಿದ್ದು ಅಕ್ಕಿ ಖರೀದಿಗೆ (Rice Shortage) ಮುಗಿಬಿದ್ದಿದ್ದಾರೆ. ಅಕ್ಕಿ ಖರೀದಿ, ಸಂಗ್ರಹಣೆಗೆ ಜನ ಧಾವಿಸುತ್ತಿದ್ದು, ಬೆಲೆ ಸಿಕ್ಕಾಪಟ್ಟೆ ಏರಿಕೆ ಆಗಿದೆ. ಭಾರತವು ಪ್ರಮುಖ ಅಕ್ಕಿ ರಫ್ತುದಾರನಾಗಿರುವುದರಿಂದ ಕಳೆದ ವಾರ ಘೋಷಿಸಲಾದ ನಿಷೇಧವು (Rice Ban) ಜಾಗತಿಕ ಆಹಾರ ಮಾರುಕಟ್ಟೆಯಲ್ಲಿ ಆಘಾತವನ್ನು ಉಂಟುಮಾಡಿದೆ. ವಾಷಿಂಗ್ಟನ್‌ನಲ್ಲಿ ವಾಸಿಸುವ ಅರುಣಾ ಅವರು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ್ದು ಭಾರತೀಯ ವಲಸೆಗಾರ ಆತಂಕದ ಬಗ್ಗೆ ಹೇಳಿದ್ದಾರೆ. “ನಾನು ಸುಮಾರು 10 ಕ್ಕಿಂತಲೂ ಹೆಚ್ಚು ಸ್ಟೋರ್‌ಗಳಿಗೆ ಭೇಟಿ ನೀಡಿದ್ದೇನೆ. ನಾನು ಬೆಳಿಗ್ಗೆ 9 ಗಂಟೆಗೆ ಸೋನಾ ಮಸೂರಿ ಅಕ್ಕಿ ಚೀಲವನ್ನು ಹುಡುಕಲು ಪ್ರಾರಂಭಿಸಿದೆ. ಸಂಜೆ 4 ಗಂಟೆಗೆ ಮೂರು ಪಟ್ಟು ಬೆಲೆಗೆ ಒಂದು ಅಕ್ಕಿ ಚೀಲ ಸಿಕ್ಕಿತು ಎಂದಿದ್ದಾರೆ.
ಅನಿವಾಸಿ ಭಾರತೀಯರು (NRI) ಭಾರತೀಯ ಪಾಕಪದ್ಧತಿಯಲ್ಲಿ ಪ್ರಧಾನವಾದ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ತಮ್ಮ ಪೂರೈಕೆಯನ್ನು ಪಡೆಯಲು ಹರಸಾಹಸ ಮಾಡುತ್ತಿರುವಾಗ ನಿಷೇಧದ ಸುದ್ದಿ ಹೊಡೆತ ನೀಡಿದೆ. ದೈತ್ಯ ಮಳಿಗೆಗಳಲ್ಲಿ ಉಳಿದಿರುವ ಅಕ್ಕಿ ಚೀಲಗಳನ್ನು ಖರೀದಿಸಲು ಜನರು ಮುಗಿ ಬೀಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
Those who call Indian Christians ‘Rice Bag Converts’ are rioting to hoard rice bags in Texas! pic.twitter.com/r8df7oylHN
— Ashok Swain (@ashoswai) July 26, 2023
ಕೋವಿಡ್ -19 ಸಾಂಕ್ರಾಮಿಕ ಮತ್ತು ಉಕ್ರೇನ್ ಯುದ್ಧದ ನಂತರ ಅಮೆರಿಕದಲ್ಲಿ ಬೇಬಿ ಫಾರ್ಮುಲಾ ಕೊರತೆಯನ್ನು ಇದು ನೆನಪಿಸಿದೆ.
ಭಾರತದ ರಫ್ತು ನಿಷೇಧವು ದೇಶೀಯ ಲಭ್ಯತೆ ಮತ್ತು ಮನೆಯಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಗಳನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ. ಆದಾಗ್ಯೂ, ಅದರ ಏರಿಳಿತದ ಪರಿಣಾಮ ವ್ಯಾಪಕವಾಗಿದೆ. ವಿಶೇಷವಾಗಿ ದಕ್ಷಿಣ ಏಷ್ಯಾದ ಕಿರಾಣಿ ಅಂಗಡಿಗಳಲ್ಲಿ ಅಕ್ಕಿಗೆ ಭಾರೀ ಬೇಡಿಕೆ ಕಂಡುಬಂದಿದೆ.
Rice bag NRIs standing in line to collect rice in the US,just like how they stand in front of a ration shop.pic.twitter.com/L0YqEwqrsa
— Брат (@B5001001101) July 25, 2023
ಸಪ್ನಾ ಫುಡ್ಸ್‌ನಲ್ಲಿ, ಮೇರಿಲ್ಯಾಂಡ್‌ನ ಸಗಟು ಮಾರಾಟಗಾರ, ಮಾಲೀಕ ತರುಣ್ ಸರ್ದಾನ ಅವರು ಅಕ್ಕಿಗೆ ಭಾರೀ ಬೇಡಿಕೆ ಇದೆ ಎಂದು ಹೇಳಿದ್ದಾರೆ.”ನಾವು ನಿರ್ದಿಷ್ಟ ಅಕ್ಕಿಗಾಗಿ ಬಹಳಷ್ಟು ಹೆಚ್ಚುವರಿ ಕರೆಗಳನ್ನು ಪಡೆಯುತ್ತಿದ್ದೇವೆ. ಜನ ಸೋನಾ ಮಸೂರಿ ಕೇಳುತ್ತಿದ್ದಾರೆ. ವಾರಾಂತ್ಯದಲ್ಲಿ ಬೇಡಿಕೆ ಇನ್ನೂ ಹೆಚ್ಚಿತ್ತು. ಸೋಮವಾರ ಬೆಳಿಗ್ಗೆ ಎಲ್ಲರೂ ನಮ್ಮಂತಹ ಗೋದಾಮುಗಳಿಂದ ಸಾಧ್ಯವಾದಷ್ಟು ದಕ್ಷಿಣ ಭಾರತದ ಅಕ್ಕಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ ಅವರು.
ರಫ್ತು ನಿಷೇಧವು ಪ್ರೀಮಿಯಂ ದರ್ಜೆಯ ಬಾಸ್ಮತಿ ಅಕ್ಕಿಯನ್ನು ಒಳಗೊಂಡಿಲ್ಲವಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಹಕರು ಅದನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ.
ಇದನ್ನೂ ಓದಿ: Explainer: ಭಾರತದ ನಿರ್ಧಾರಕ್ಕೆ ಅಮೆರಿಕದಲ್ಲಿ ಆಕ್ರೋಶ, ಒಂದು ಕುಟುಂಬಕ್ಕೆ ಕೇವಲ 9 ಕೆಜಿ ಅಕ್ಕಿ, ಎಚ್ಚರಿಕೆ ನೀಡಿದ IMF
ಆತಂಕದಿಂದ ಅಕ್ಕಿ ಖರೀದಿ ಹೆಚ್ಚಾಗುತ್ತಿದ್ದಂತೆ, ಬೆಲೆಯೂ ಹೆಚ್ಚಾಗುತ್ತದೆ. ಸಗಟು ವ್ಯಾಪಾರಿಗಳು ಮತ್ತು ಅಕ್ಕಿ ಕಂಪನಿಗಳು ಹೆಚ್ಚಿನ ಬೇಡಿಕೆಯಿಂದಾಗಿ ಬೆಲೆಗಳನ್ನು ಸರಿಹೊಂದಿಸುತ್ತಿವೆ.ಇದು ಬೆಲೆ ಏರಿಕೆಗೆ ಕಾರಣವಾಗುತ್ತದೆ. ಬೆಲೆಗಳು ಹೆಚ್ಚಿದ್ದು ಮಾತ್ರವಲ್ಲ ಶೇಕಡಾ 100 ರಷ್ಟು ಹೆಚ್ಚಾಗಿದೆ, ಇಂಥಾ ಸಮಯದಲ್ಲಿ ಅಕ್ಕಿ ದುಪ್ಪಟ್ಟು ಬೆಲೆಗೆ ಮಾರಾಟವಾಗಿದೆ ಎಂದಿದ್ದಾರೆ ಸರ್ದಾನ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:16 pm, Thu, 27 July 23