AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ಸಿಡಿಲು ಬಡಿದು ಜೀವನ್ಮರಣದ ನಡುವೆ ಹೋರಾಡುತ್ತಿರುವ ಭಾರತ ಮೂಲದ ವಿದ್ಯಾರ್ಥಿನಿ ಚೇತರಿಕೆ

ಅಮೆರಿಕದಲ್ಲಿ ಸಿಡಿಲು ಬಡಿದು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಭಾರತ ಮೂಲದ ವಿದ್ಯಾರ್ಥಿನಿ ಈಗ ಚೇತರಿಕೆಯ ಹಾದಿಯಲ್ಲಿದ್ದಾಳೆ.

ಅಮೆರಿಕದಲ್ಲಿ ಸಿಡಿಲು ಬಡಿದು ಜೀವನ್ಮರಣದ ನಡುವೆ ಹೋರಾಡುತ್ತಿರುವ ಭಾರತ ಮೂಲದ ವಿದ್ಯಾರ್ಥಿನಿ ಚೇತರಿಕೆ
ವಿದ್ಯಾರ್ಥಿನಿImage Credit source: India Today
ನಯನಾ ರಾಜೀವ್
|

Updated on: Jul 28, 2023 | 11:14 AM

Share

ಅಮೆರಿಕದಲ್ಲಿ ಸಿಡಿಲು ಬಡಿದು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಭಾರತ ಮೂಲದ ವಿದ್ಯಾರ್ಥಿನಿ ಈಗ ಚೇತರಿಕೆಯ ಹಾದಿಯಲ್ಲಿದ್ದಾಳೆ. ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ ಸುಸ್ರೂಣ್ಯ ಕೋಡೂರು ಜುಲೈ 2 ರಂದು ಸ್ಯಾನ್ ಜೆಸಿಂಟೋ ಸ್ಮಾರಕ ಉದ್ಯಾನದ ಬಳಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ಸಿಡಿಲು ಬಡಿದಿತ್ತು.

ಕಳೆದ ಒಂದು ವಾರದಿಂದ ಚೇತರಿಸಿಕೊಳ್ಳುತ್ತಿದ್ದಾರೆ, ಈಗ ವೆಂಟಿಲೇಟರ್ ಇಲ್ಲದೆಯೇ ಉಸಿರಾಡುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಪೋಷಕರನ್ನು ಹೈದರಾಬಾದ್‌ನಿಂದ ಹೂಸ್ಟನ್‌ಗೆ ಕರೆತರಲು ಪ್ರಯತ್ನಿಸುತ್ತಿರುವ ಕೋಡೂರಿನ ಕುಟುಂಬದ ಸದಸ್ಯರು, ಪೋಷಕರ ವೀಸಾಗಳಿಗೆ ಅನುಮತಿ ಸಿಕ್ಕಿದೆ ಮತ್ತು ಮುಂದಿನ ವಾರ ಬರಬೇಕು ಹೋಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮತ್ತಷ್ಟು ಓದಿ: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬಹುದು? ಇಲ್ಲಿದೆ ಸಲಹೆ

ಸಿಡಿಲು ಬಡಿದ ಹೊಡೆತಕ್ಕೆ ಆಕೆ ಕೆರೆಗೆ ಬಿದ್ದಿದ್ದಳು ಆ ಸಮಯದಲ್ಲಿ ಕಾರ್ಡಿಯಾಕ್ ಅರೆಸ್ಟ್​ ಕೂಡ ಆಗಿ, ಕೋಮಾ ಸ್ಥಿತಿಯಲ್ಲಿದ್ದಳು. ಚಿಕಿತ್ಸೆಗೆ ಸಹಾಯ ಮಾಡಲು ಮತ್ತು ಆಕೆಯ ಪೋಷಕರೊಂದಿಗೆ ಅವಳನ್ನು ಮತ್ತೆ ಸೇರಿಸಲು ಕುಟುಂಬವು GoFundMe ಅನ್ನು ರಚಿಸಿದೆ.

ಕುಟುಂಬವು ಎಲ್ಲರ ಸಹಾಯಕ್ಕಾಗಿ ಮನವಿ ಮಾಡಿದೆ ಇದರಿಂದ ಅವರು ಶೀಘ್ರದಲ್ಲೇ ಮೊದಲಿನಂತಾಗುತ್ತಾಳೆ ಎಂದು ಹೇಳಿದ್ದಾರೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆಕೆ ಅಮೆರಿಕಕ್ಕೆ ಬಂದಿದ್ದಳು, ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಳು. ಇಂಟರ್ನ್‌ಶಿಪ್‌ಗಾಗಿ ಎದುರು ನೋಡುತ್ತಿದ್ದಳು. ಮೆದುಳಿಗೆ ಹಾನಿಯಾಗಿದ್ದು, ಕೋಮಾಗೆ ಜಾರಿದ್ದಳು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ