ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​​ಗೆ ಅರುಳು ಮರುಳು?

ವ್ಲಾಡಿಮಿರ್ ಪುಟಿನ್ ಅವರು ಛಾವಣಿ ನೋಡಿ, ದೇಶದಲ್ಲಿನ ಒಂದು ಸ್ಥಳವನ್ನು ಹುಡುಕುವ ಬಗ್ಗೆ ನಿಧಾನವಾಗಿ ಗೊಣಗುತ್ತಿರುವುದು ಅಸಹಜ  ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರು ಬರೆದಿದ್ದಾರೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​​ಗೆ ಅರುಳು ಮರುಳು?
ವ್ಲಾಡಿಮಿರ್ ಪುಟಿನ್
Follow us
ರಶ್ಮಿ ಕಲ್ಲಕಟ್ಟ
|

Updated on:Jul 21, 2023 | 1:54 PM

ಮಾಸ್ಕೋ  ಜುಲೈ21:  ಕ್ರೆಮ್ಲಿನ್‌ನಲ್ಲಿ (Kremlin )ನಡೆದ ಚರ್ಚೆಯ ಸಂದರ್ಭದಲ್ಲಿ  ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ನಡೆಸಿದ ಮಾತುಕತೆ ಅವರ ಆರೋಗ್ಯದ ಬಗ್ಗೆ ಇರುವ ಊಹಾಪೋಹಗಳನ್ನು ಮತ್ತಷ್ಟು ಹೆಚ್ಚಿಸಿದೆ. ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್‌ ಉಪ ಮೇಯರ್ ಮಗುವಿನ ವಯಸ್ಸಿನ ಬಗ್ಗೆ  ಗೊಂದಲಕ್ಕೀಡಾದ ಕಾರಣ ಅವರಿಗೆ ಅರುಳು ಮರುಳು ಶುರುವಾಗಿದೆ (dementia)ಎಂಬ ವದಂತಿ ಹಬ್ಬಿಕೊಂಡಿದೆ. ಏತನ್ಮಧ್ಯೆ, ರಷ್ಯಾದ ಅಧ್ಯಕ್ಷರು ಆರೋಗ್ಯವಾಗಿದ್ದಾರೆ ಎಂದು ಕ್ರೆಮ್ಲಿನ್ ಹೇಳಿದೆ. ಉಲಿಯಾನಾ ಯಪ್ಪರೋವಾ ಎಂಬ ಬ್ಲಾಗರ್ ವಿಡಿಯೊವೊಂದನ್ನು ಟ್ಟೀಟ್ ಮಾಡಿದ್ದು, ವ್ಲಾಡಿಮಿರ್ ಪುಟಿನ್ ಇವಾನ್ ಶ್ಟೋಕ್ಮನ್ ಅವರೊಂದಿಗೆ ಮಾತನಾಡುವುದನ್ನು ತೋರಿಸಿದೆ. ಮಿಲಿಟರಿ ಸಮವಸ್ತ್ರದಲ್ಲಿ ಕಾಣಿಸಿಕೊಂಡಿರುವ ನಗರದ ಉಪಮೇಯರ್ ನಿಜ್ನಿ ನವ್ಗೊರೊಡ್ ಜತೆ ಪುಟಿನ್ ಮಾತುಕತೆ ಈ ರೀತಿ ಇತ್ತು.

“ದೇಶದ ಭವಿಷ್ಯವನ್ನು ಈಗ ನಿರ್ಧರಿಸಲಾಗುತ್ತಿದೆ” ಉಪಮೇಯರ್ ಅವರು ವ್ಲಾಡಿಮಿರ್ ಪುಟಿನ್‌ಗೆ ಹೇಳಿದ್ದಾರೆ. ಉಕ್ರೇನ್ ಯುದ್ಧದ ಮಧ್ಯೆ ಸೈನ್ಯಕ್ಕೆ ಸೇರುವ ನಿರ್ಧಾರವನ್ನು ಅವರು ವಿವರಿಸಿದರು. ಈ ಮಾತು ರಷ್ಯಾ ಅಧ್ಯಕ್ಷರಿಗೆ ಹಿಡಿಸಿದ್ದನ್ನು ಅರಿತ ನಿಜ್ನಿ, ಅಂತೂ ಕೊನೆಯಲ್ಲಿ ನೀವು ಅತ್ಯಂತ ಮುಖ್ಯವಾದ ವಿಷಯಕ್ಕೆ ಬಂದಿದ್ದೀರಿ. ಈ ದೇಶಕ್ಕೆ ಸಮರ್ಪಣೆಯ ವಿಷಯ ಅದು. ಆದರೆ ಕೊನೆಯಲ್ಲಿ, ಇದು ನಮ್ಮ ಮಕ್ಕಳ ಮತ್ತು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೋರಾಟವಾಗಿದೆ ಎಂದಿದ್ದಾರೆ.

ನಂತರ ವ್ಲಾಡಿಮಿರ್ ಪುಟಿನ್ ಅವರ ಮಕ್ಕಳ ವಯಸ್ಸನ್ನು ಕೇಳಿದರು. ಇವಾನ್ ಶ್ಟೋಕ್ಮನ್ ಅವರು “ಕಿರಿಯವನಿಗೆ ಒಂಬತ್ತು” ಮತ್ತು ಹಿರಿಯವನಿಗೆ 23 ವರ್ಷ ಎಂದಿದ್ದಾರೆ. ಇದಕ್ಕೆ ರಷ್ಯಾದ ನಾಯಕ, ನಿಮ್ಮ ಪುಟ್ಟ ಮಗುವಿಗೆ ಮೂರು ವರ್ಷ ಎಂದು ಹೇಳಿ ಸೈನ್ಯ ಸೇರಲಿರುವ ಇವಾನ್ ಶ್ಟೋಕ್ಮನ್ ಅವರ ನಿರ್ಧಾರವನ್ನು ಶ್ಲಾಘಿಸಿದ್ದಾರೆ

ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯದ ಬಗ್ಗೆ ಚರ್ಚೆ ಏನು?

ವ್ಲಾಡಿಮಿರ್ ಪುಟಿನ್ ಅವರು ಛಾವಣಿ ನೋಡಿ, ದೇಶದಲ್ಲಿನ ಒಂದು ಸ್ಥಳವನ್ನು ಹುಡುಕುವ ಬಗ್ಗೆ ನಿಧಾನವಾಗಿ ಗೊಣಗುತ್ತಿರುವುದು ಅಸಹಜ  ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರು ಬರೆದಿದ್ದಾರೆ. ಅವರಿಗೆ ಇನ್ನೊಬ್ಬರು ಹೇಳುವುದು ಕೇಳಿಸುತ್ತಿಲ್ಲ ಎಂದು ಒಬ್ಬ ಬಳಕೆದಾರ ಹೇಳಿದ್ದು ಅವರಿಗೆ ಅರುಳು ಮರಳು ಶುರುವಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ವ್ಲಾಡಿಮಿರ್ ಪುಟಿನ್ ಗೆ ಅರುಳು ಮರುಳು ಇದೆಯೇ?

ಈ ವಾರ ರಷ್ಯಾದ ಅಧ್ಯಕ್ಷರು ಆನ್‌ಲೈನ್ ಚರ್ಚೆಯನ್ನು ನಡೆಸುತ್ತಿರುವುದು ಕಂಡುಬಂದಿದೆ.ಅಲ್ಲಿ ಅವರು ಉಕ್ರೇನ್‌ನಲ್ಲಿ ಸೈನಿಕರ ಸಾವಿನ ಬಗ್ಗೆ ಇರ್ಕುಟ್ಸ್ಕ್ ಗವರ್ನರ್ ಇಗೊರ್ ಕೊಬ್ಜೆವ್ ಹೇಳಿದಾಗ ಸಂಬಂಧವೇ ಇಲ್ಲದಂತೆ ಪ್ರತಿಕ್ರಿಯಿಸಿದ್ದಾರೆ. ಇಗೊರ್ ಕೊಬ್ಜೆವ್ ತನ್ನ ಪ್ರದೇಶದ ಸೈನ್ಯದ ಬಗ್ಗೆ ಮಾತನಾಡುವಾಗ, ವ್ಲಾಡಿಮಿರ್ ಪುಟಿನ್ “ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸಿ.”ಎಂದು ಹೇಳಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:15 pm, Fri, 21 July 23