
ವಾಷಿಂಗ್ಟನ್, ಏಪ್ರಿಲ್ 23: ಭಾರತ ಮತ್ತು ಚೀನಾದಂತಹ ದೇಶಗಳಿಗೆ 9 ತಿಂಗಳಾದ ಬಳಿಕ ಅಮೆರಿಕಕ್ಕೆ ಬರುವ ಮಹಿಳೆಯರು ಇಲ್ಲೇ ಬಂದು ಮಗುವನ್ನು ಹೆರುತ್ತಾರೆ. ಆಗ ಆ ಮಗುವಿಗೆ ಇಲ್ಲಿನ ಪೌರತ್ವ ಸಿಗುತ್ತದೆ. ನಂತರ ಭಾರತ ಮತ್ತು ಚೀನಾದಂತಹ ನರಕಗಳಿಂದ ತಮ್ಮ ಸಂಬಂಧಿಕರನ್ನು ಇಲ್ಲಿಗೆ ಕರೆದುಕೊಂಡು ಬರುತ್ತಾರೆ. ಅಮೆರಿಕದ ಜನ್ಮಸಿದ್ಧ ಪೌರತ್ವಕ್ಕಾಗಿ ಇಲ್ಲಿಗೆ ವಲಸೆ ಬರುತ್ತಾರೆ ಎಂದು ಅಮೆರಿಕದ ಪಾಡ್ಕಾಸ್ಟ್ನಲ್ಲಿ ರಾಜಕೀಯ ವಿಶ್ಲೇಷಕ ಹಾಗೂ ರೇಡಿಯೋ ಜಾಕಿ ಮೈಕಲ್ ಸ್ಯಾವೇಜ್ ವಿವಾದಾತ್ಮಕವಾಗಿ ಮಾತನಾಡಿದ್ದರು. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆ ಹೇಳಿಕೆಗೆ ತನ್ನ ಸಹಮತ ಸೂಚಿಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಡೊನಾಲ್ಡ್ ಟ್ರಂಪ್ ಭಾರತ ಅತ್ಯುತ್ತಮ ದೇಶ ಎಂದಿದ್ದಾರೆ.
ತನ್ನ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿರುವ ಡೊನಾಲ್ಡ್ ಟ್ರಂಪ್ ಭಾರತವನ್ನು ಹೊಗಳಿದ್ದಾರೆ. ಭಾರತ ದೇಶವನ್ನು ಮುನ್ನಡೆಸುವ ನನ್ನ ಬಹಳ ಉತ್ತಮ ಸ್ನೇಹಿತ ಅಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಂಘರ್ಷದ ಹಾದಿಯಲ್ಲಿ ಬಲಿಷ್ಠ ರಾಷ್ಟ್ರಗಳು: ಇರಾನ್ ಹಠಕ್ಕೆ ಅಮೆರಿಕ ಕೆಂಡಾಮಂಡಲ, ಟ್ರಂಪ್‌ನಿಂದ ಖಡಕ್ ವಾರ್ನಿಂಗ್
ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯ ವಕ್ತಾರ ಕ್ರಿಸ್ಟೋಫರ್ ಎಲ್ಮ್ಸ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಮೆರಿಕದ ನಾಯಕ ಟ್ರಂಪ್ ಭಾರತದ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ, ಭಾರತವನ್ನು ಒಂದು ಉತ್ತಮ ರಾಷ್ಟ್ರ ಎಂದು ಕರೆದಿದ್ದಾರೆ. ಅವರು ಭಾರತದ ಪ್ರಧಾನಿಯೊಂದಿಗೆ ವೈಯಕ್ತಿಕ ಸ್ನೇಹವನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇರಾನ್ ವಿರುದ್ಧದ ದಾಳಿಗೆ ಸದ್ಯಕ್ಕೆ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಟ್ರಂಪ್
ಯುನೈಟೆಡ್ ಸ್ಟೇಟ್ಸ್‌ನ ಜನ್ಮಸಿದ್ಧ ಪೌರತ್ವ ಕಾನೂನಿನಲ್ಲಿ ಬದಲಾವಣೆಗಳಿಗೆ ಕರೆ ನೀಡುವ ಜನಾಂಗೀಯ ವಾಗ್ದಾಳಿಯಲ್ಲಿ ರೇಡಿಯೋ ಜಾಕಿ ಸ್ಯಾವೇಜ್ ಏಷ್ಯಾದ 2 ರಾಷ್ಟ್ರಗಳ ಜನರು 9ನೇ ತಿಂಗಳಲ್ಲಿ ಮಗುವನ್ನು ಹೆರುವ ಸಲುವಾಗಿಯೇ ಯುಎಸ್‌ಗೆ ಬರುತ್ತಾರೆ. ಇಲ್ಲಿನ ಕಾನೂನು ಅವರನ್ನು ಕೂಡಲೇ ಅಮೆರಿಕದ ನಾಗರಿಕರನ್ನಾಗಿ ಮಾಡುತ್ತದೆ ಎಂದು ಆರೋಪಿಸಿದ್ದರು. ಅಲ್ಲದೆ, ಭಾರತೀಯ ಮತ್ತು ಚೀನೀ ವಲಸಿಗರನ್ನು “ಲ್ಯಾಪ್‌ಟಾಪ್‌ಗಳನ್ನು ಹೊಂದಿರುವ ದರೋಡೆಕೋರರು” ಎಂದು ಟೀಕಿಸಿದ್ದರು. ಈ ವಿಡಿಯೋವನ್ನು ಡೊನಾಲ್ಡ್ ಟ್ರಂಪ್ ಮರು-ಪೋಸ್ಟ್ ಮಾಡಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:44 pm, Thu, 23 April 26