ಉಕ್ರೇನ್​ನ ಸುಮಿಯಲ್ಲಿ ರಷ್ಯನ್ ಡ್ರೋನ್ ದಾಳಿ; ಭಾರತೀಯ ವ್ಯಕ್ತಿಯ ಔಷಧ ಘಟಕ ಧ್ವಂಸ; ಒಬ್ಬನ ಸಾವು, ಹಲವರಿಗೆ ಗಾಯ

ಉಕ್ರೇನ್‌ನ ಸುಮಿ ಪ್ರದೇಶದಲ್ಲಿ ಸಂಭವಿಸಿದ ರಷ್ಯನ್ ಡ್ರೋನ್ ದಾಳಿಗೆ ಔಷಧ ಘಟಕವೊಂದು ಧ್ವಂಸಗೊಂಡಿದೆ. ಭಾರತೀಯ ಉದ್ಯಮಿ ರಾಜೀವ್ ಗುಪ್ತಾ ಅವರ 'ಕುಸುಮ್ ಗ್ರೂಪ್' ಗೆ ಸೇರಿದ ಔಷಧ ತಯಾರಿಕಾ ಘಟಕ ಇದಾಗಿದೆ. ಈ ದಾಳಿಯಲ್ಲಿ ಒಬ್ಬನ ಸಾವು ಖಚಿತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಸಾವಿನ ಸಂಖ್ಯೆ ಮತ್ತಷ್ಟು ಏರುವ ಭೀತಿ ಇದೆ.

ಉಕ್ರೇನ್​ನ ಸುಮಿಯಲ್ಲಿ ರಷ್ಯನ್ ಡ್ರೋನ್ ದಾಳಿ; ಭಾರತೀಯ ವ್ಯಕ್ತಿಯ ಔಷಧ ಘಟಕ ಧ್ವಂಸ; ಒಬ್ಬನ ಸಾವು, ಹಲವರಿಗೆ ಗಾಯ
ಉಕ್ರೇನ್​ನ ಸುಮಿಯಲ್ಲಿ ರಷ್ಯನ್ ದಾಳಿಯಲ್ಲಿ ಆಗಿರುವ ಅನಾಹುತ
Image Credit source: X post of Volodymyr Zelenskyy

Updated on: Oct 04, 2026 | 6:49 PM

ನವದೆಹಲಿ, ಅಕ್ಟೋಬರ್ 4: ಉಕ್ರೇನ್ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯೊಂದರಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬರ ಕಂಪನಿ ಘಟಕ ನಾಶಗೊಂಡಿರುವುದು ವರದಿಯಾಗಿದೆ. ಎನ್​ಡಿಟಿವಿಯಲ್ಲಿ ಬಂದಿರುವ ಎಕ್ಸ್​ಕ್ಲೂಸಿವ್ ವರದಿ ಪ್ರಕಾರ, ಸುಮಿ ನಗರದ (Sumy) ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಔಷಧ ಕಾರ್ಖಾನೆಯೊಂದು ನಾಶಗೊಂಡಿದೆ. ಭಾರತೀಯ ಮೂಲಕ ರಾಜೀವ್ ಗುಪ್ತಾ ಎಂಬುವವರ ಮಾಲೀಕತ್ವದ ‘ಕುಸುಮ್ ಗ್ರೂಪ್’ (Kusum Group) ಔಷಧ ತಯಾರಿಕಾ ಘಟಕ ಧ್ವಂಸಗೊಂಡಿದೆ. ಈ ದಾಳಿ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ದಾಳಿಯ ತೀವ್ರತೆಗೆ ಔಷಧ ಕಾರ್ಖಾನೆಯ ಮುಖ್ಯ ಕಟ್ಟಡ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿತ್ತು. ಈ ದಾಳಿಯಿಂದ ಕಂಪನಿಗೆ ಕನಿಷ್ಠ ₹400 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಮಚ್ಚರ್, ಹಾಥಿ, ಘೋಡಾ: ಗುಜರಾತಿ ಕುಟುಂಬಗಳಲ್ಲಿ ಪ್ರಾಣಿಗಳ ಹೆಸರಿನ ಸರ್‌ನೇಮ್‌ ಇಡುವುದೇಕೆ ಗೊತ್ತಾ?

‘ಕುಸುಮ್ ಗ್ರೂಪ್’ ಹಿನ್ನೆಲೆ

ಭಾರತೀಯ ಮೂಲದ ಉದ್ಯಮಿ ರಾಜೀವ್ ಗುಪ್ತಾ ಅವರು ನಡೆಸುತ್ತಿರುವ ಈ ಸಂಸ್ಥೆಯು 1994 ರಲ್ಲಿ ಭಾರತೀಯ ಔಷಧಗಳನ್ನು ಉಕ್ರೇನ್‌ಗೆ ರಫ್ತು ಮಾಡುವ ವಿತರಕ ಕಂಪನಿಯಾಗಿ ಆರಂಭವಾಗಿತ್ತು. 2002ರಲ್ಲಿ ಬೇರೆ ಕಂಪನಿಗಳ ಉತ್ಪನ್ನಗಳ ಮಾರಾಟ ಮಾಡುವ ಬದಲು, ತನ್ನದೇ ಬ್ರ್ಯಾಂಡ್​​ಗಳನ್ನು ಮಾರಲು ಆರಂಭಿಸಿತು. 2009 ರಲ್ಲಿ ಉಕ್ರೇನ್‌ನ ಸುಮಿಯಲ್ಲಿ ತನ್ನ ಸ್ವಂತ ಔಷಧ ಉತ್ಪಾದನಾ ಘಟಕವನ್ನು ಪ್ರಾರಂಭಿಸಿತು. ಭಾರತದಲ್ಲೂ ಈ ಸಂಸ್ಥೆಯು ಮೂರು ಪ್ರಮುಖ ಉತ್ಪಾದನಾ ಘಟಕಗಳನ್ನು ಹೊಂದಿದೆ.

ಉಕ್ರೇನ್ ಪ್ರಧಾನಿ ಝೆಲೆನ್​ಸ್ಕಿ ಅವರು ಪೋಸ್ಟ್ ಮಾಡಿರುವ ವಿಡಿಯೋ

ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ದಿನದಿಂದಲೂ ಈ ಕಾರ್ಖಾನೆಯು ಕಾರ್ಯನಿರ್ವಹಿಸುತ್ತಾ ಉಕ್ರೇನ್, ಉಜ್ಬೇಕಿಸ್ತಾನ್, ಕಝಕಿಸ್ತಾನ್ ಸೇರಿದಂತೆ 9ಕ್ಕೂ ಹೆಚ್ಚು ದೇಶಗಳಿಗೆ ಸುಮಾರು 50ಕ್ಕೂ ಹೆಚ್ಚು ಅಗತ್ಯ ‘ಜೆನೆರಿಕ್’ (Generic) ಔಷಧಗಳನ್ನು ಪೂರೈಸುತ್ತಿತ್ತು.

ಇದನ್ನೂ ಓದಿ: ಮಲೇಷ್ಯಾ ಎಂಜಿನಿಯರ್ ಸಾವಿನ ಪ್ರಕರಣದ ತನಿಖೆಗೆ ಕೇರಳ ಆದೇಶ: ಜ್ಞಾನೇಶ್ ಕುಮಾರ್‌ಗೆ ಹೊಸ ಸಂಕಷ್ಟ

ಜಾಗತಿಕ ವಲಯದ ಪ್ರತಿಕ್ರಿಯೆ

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ನಾಗರಿಕ ಮೂಲಸೌಕರ್ಯ ಹಾಗೂ ಉತ್ಪಾದನಾ ಘಟಕಗಳನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:36 pm, Sun, 4 October 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us