AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಚ್ಚರ್, ಹಾಥಿ, ಘೋಡಾ: ಗುಜರಾತಿ ಕುಟುಂಬಗಳಲ್ಲಿ ಪ್ರಾಣಿಗಳ ಹೆಸರಿನ ಸರ್‌ನೇಮ್‌ ಇಡುವುದೇಕೆ ಗೊತ್ತಾ?

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಶೌರ್ಯದ ಸುದ್ದಿಯೊಂದಿಗೆ ಅವರ "ಮಚ್ಚರ್" ಉಪನಾಮ ಚರ್ಚೆಯಲ್ಲಿದೆ. ಗುಜರಾತಿ ಸಮುದಾಯಗಳಲ್ಲಿ ಪ್ರಾಣಿ, ಪಕ್ಷಿ, ಕೀಟಗಳ ಹೆಸರನ್ನು ಉಪನಾಮಗಳಾಗಿ ಇಟ್ಟುಕೊಳ್ಳುವ ವಿಶಿಷ್ಟ ಸಂಪ್ರದಾಯವಿದೆ. 'ಮಚ್ಚರ್' (ಸೊಳ್ಳೆ), 'ಹಾಥಿ' (ಆನೆ), 'ಘೋಡಾ' (ಕುದುರೆ) ಇವು ವೃತ್ತಿ ಅಥವಾ ಕೆಲ ನಂಬಿಕೆಗಳಿಂದ ಬಂದಿದ್ದು ಈ ಬಗ್ಗೆ ಸಂಪೂರ್ಣ ವಿವರವನ್ನು ಇಲ್ಲಿ ತಿಳಿದುಕೊಳ್ಳಿ.

ಮಚ್ಚರ್, ಹಾಥಿ, ಘೋಡಾ: ಗುಜರಾತಿ ಕುಟುಂಬಗಳಲ್ಲಿ ಪ್ರಾಣಿಗಳ ಹೆಸರಿನ ಸರ್‌ನೇಮ್‌ ಇಡುವುದೇಕೆ ಗೊತ್ತಾ?
ಕ್ಯಾಪ್ಟನ್ ಸ್ಮಿತ್ ಮಚ್ಚರ್
ಅಕ್ಷತಾ ವರ್ಕಾಡಿ
|

Updated on: Oct 03, 2026 | 2:46 PM

Share

ಫ್ಲೈದುಬೈ’ ವಿಮಾನದ ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತೋರಿದ ಶೌರ್ಯ ಅಪ್ರತಿಮವಾದುದು. ಸದ್ಯ ಅವರ ಹೆಸರು ಜಗತ್ತಿನಾದ್ಯಂತ ಭಾರಿ ಸುದ್ದು ಮಾಡುತ್ತಿದೆ. ಜೊತೆಗೆ ಅವರ “ಮಚ್ಛರ್” ಎಂಬ ಉಪನಾಮ (Surname) ಸಾಕಷ್ಟು ಜನರನ್ನು ಗೊಂದಲಕ್ಕೀಡು ಮಾಡಿದೆ. ಯಾಕೆಂದರೆ ಹಿಂದಿಯಲ್ಲಿ ‘ಮಚ್ಛರ್’ ಎಂದರೆ ಸೊಳ್ಳೆ. ಹೀಗೆ ಪ್ರಾಣಿ, ಪಕ್ಷಿ ಮತ್ತು ಕೀಟಗಳ ಹೆಸರನ್ನೇ ತಮ್ಮ ಉಪನಾಮಗಳನ್ನಾಗಿ ಇಟ್ಟುಕೊಳ್ಳುವ ಅಪರೂಪದ ಹಾಗೂ ರಸವತ್ತಾದ ಸಂಪ್ರದಾಯ ಗುಜರಾತಿ ಸಮುದಾಯಗಳಲ್ಲಿದೆ. ಈ ಬಗ್ಗೆ ಸಂಪೂರ್ಣ ವಿವರವನ್ನು ಇಲ್ಲಿ ತಿಳಿದುಕೊಳ್ಳಿ.

ಗುಜರಾತಿ ಕುಟುಂಬಗಳಲ್ಲಿ ಹೆಸರಿನ ವಿಶೇಷತೆ:

ಗುಜರಾತ್‌ನ ನಾಗರ ಬ್ರಾಹ್ಮಣರು (Nagar Brahmins), ಬ್ರಹ್ಮಕ್ಷತ್ರಿಯ ಮತ್ತು ಲೋಹಾನ ಸಮುದಾಯಗಳಲ್ಲಿ ಇಂತಹ ಪ್ರಾಣಿಗಳಿಗೆ ಸಂಬಂಧಿಸಿದ ಮನೆತನದ ಹೆಸರುಗಳು ಹೆಚ್ಚಾಗಿ ಕಂಡುಬರುತ್ತವೆ. ಇವುಗಳಲ್ಲಿ ಪ್ರಮುಖವಾದವುಗಳು:

  • ಘೋಡಾ (Ghoda): ಕುದುರೆ
  • ಮಾಂಕಡ್ (Mankad): ತಿಗಣೆ
  • ಮಾಂಕೋಡಿ (Mankodi): ಕಪ್ಪು ಇರುವೆ
  • ಪೋಪಟ್ (Popat): ಗಿಳಿ
  • ವಿಂಚಿ (Vinchhi): ಚೇಳು
  • ಶಿಯಾಳ್ (Shiyal): ನರಿ
  • ಹಾಥಿ (Hathi): ಆನೆ

ಈ ಉಪನಾಮಗಳ ಮೂಲ ಮತ್ತು ಹಿನ್ನೆಲೆಯೇನು?

  • ಕುಲ ಕಸುಬು: ಅಹಮದಾಬಾದ್‌ನ ಭಾರತಿ ವಿಂಚಿ ಅವರ ಪ್ರಕಾರ, ಅವರ ಹಿರಿಯರು ಚೇಳು ಅಥವಾ ಕ್ರಿಮಿಕೀಟಗಳ ಕಡಿತಕ್ಕೆ ಚಿಕಿತ್ಸೆ ನೀಡುವ ವೈದ್ಯರಾಗಿದ್ದರು. ಹೀಗಾಗಿ ಅವರ ಕುಟುಂಬಕ್ಕೆ ‘ವಿಂಚಿ’ (ಚೇಳು) ಎಂಬ ಹೆಸರು ಬಂದಿತು.
  • ಟೋಟೆಮ್ (ಸಾಮಾಜಿಕ ನಂಬಿಕೆ): ಸಮಾಜಶಾಸ್ತ್ರಜ್ಞ ಗೌರಂಗ್ ಜಾನಿ ಅವರ ಪ್ರಕಾರ, 1942ರಲ್ಲಿ ವಿನೋದಿನಿ ನೀಲಕಂಠ ಅವರು ಬರೆದ ‘ಗುಜರಾತಿ ಅಟಕೋ ನೋ ಇತಿಹಾಸ್’ ಪುಸ್ತಕದಲ್ಲಿ ಇದರ ವಿವರಣೆಯಿದೆ. ಹಳೆಯ ಕಾಲದಲ್ಲಿ ಜನರು ನಿರ್ದಿಷ್ಟ ಪ್ರಾಣಿಗಳ ಧನಾತ್ಮಕ ಗುಣಗಳನ್ನು ಗೌರವಿಸಿ, ತಮ್ಮ ವಂಶವನ್ನು ಆ ಪ್ರಾಣಿಯ ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದರು.
  • ಕೇವಲ ಪ್ರಾಣಿ-ಕೀಟಗಳಷ್ಟೇ ಅಲ್ಲದೆ, ‘ಭೂತ್’ (Bhoot – ದೆವ್ವ) ಮತ್ತು ‘ಜೋಗಿ’ (Jogi – ಸನ್ಯಾಸಿ) ಎಂಬ ವಿಚಿತ್ರ ಉಪನಾಮಗಳೂ ಈ ಭಾಗದ ಸಮುದಾಯಗಳಲ್ಲಿ ಕಂಡುಬರುತ್ತವೆ.

ಇದನ್ನೂ ಓದಿ: 174 ಪ್ರಯಾಣಿಕರ ಜೀವ ಉಳಿಸಿದ ವೀರ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ‘ಅಶೋಕ ಚಕ್ರ’ ನೀಡಲು ದೇಶಾದ್ಯಂತ ಆಗ್ರಹ

ವಿಚಿತ್ರವಾಗಿ ಕಂಡರೂ, ಇದು ಒಂದು ಸಾಂಸ್ಕೃತಿಕ ಗುರುತು:

‘ಮಚ್ಚರ್’, ‘ಹಾಥಿ’, ‘ಘೋಡಾ’ ಅಥವಾ ‘ಪೋಪಟ್’ ಎಂಬ ಉಪನಾಮಗಳು ಹೊರಗಿನವರಿಗೆ ಮೊದಲಿಗೆ ವಿಚಿತ್ರವಾಗಿ ಕಾಣಬಹುದು. ಆದರೆ ಅವುಗಳನ್ನು ಹೊಂದಿರುವ ಕುಟುಂಬಗಳಿಗೆ ಇವು ಕೇವಲ ಪದಗಳಲ್ಲ; ತಲೆಮಾರುಗಳಿಂದ ಬಂದ ಕುಟುಂಬದ ಗುರುತುಗಳು. ಉಪನಾಮದ ಅರ್ಥವನ್ನು ತಿಳಿದುಕೊಳ್ಳುವ ಕುತೂಹಲ ಸಹಜ. ಆದರೆ ಪ್ರತಿಯೊಂದು ಹೆಸರಿಗೂ ಒಂದೇ ಮೂಲ ಅಥವಾ ಒಂದೇ ಕಥೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಹೆಸರುಗಳ ಹಿಂದೆ ಅಡ್ಡಹೆಸರು ಇರಬಹುದು, ಕೆಲವು ಸ್ಥಳನಾಮದಿಂದ ಬಂದಿರಬಹುದು, ಇನ್ನೂ ಕೆಲವು ಹೆಸರುಗಳ ನಿಖರ ಮೂಲ ಇಂದಿಗೂ ಸ್ಪಷ್ಟವಾಗಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More