ಡೊನಾಲ್ಡ್ ಟ್ರಂಪ್ ವಿರುದ್ಧ ಜಾರಿಯಾಯ್ತು ಅರೆಸ್ಟ್ ವಾರಂಟ್

ನವೆಂಬರ್​ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲುವ ಕನಸು ಕಾಣುತ್ತಿರುವ ಸದ್ಯದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ದಶ ದಿಕ್ಕುಗಳಿಂದಲೂ ಪ್ರಚಾರಕ್ಕೆ ಬದಲು ಅಪಚಾರವೇ ಹೆಚ್ಚಾಗಿ ಸಿಗುತ್ತಿದೆ. ಈ ಮಧ್ಯೆ ಇರಾನ್​ ಸಹ ತನ್ನ ಕೈಲಾದ ಮಟ್ಟಿಗೆ ಟ್ರಂಪ್​ ವಿರುದ್ಧ ಗುಡುಗಿದೆ. ಇರಾನ್ ಸೇನಾ ಕಮಾಂಡರ್​ ಖ್ವಾಸಿಂ ಸುಲೇಮಾನಿ ಹತ್ಯೆ ಪ್ರಕರಣ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧ ಇರಾನ್ ಸರ್ಕಾರ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ. ಡೊನಾಲ್ಡ್​ ಟ್ರಂಪ್ ಸೇರಿದಂತೆ ಇತರರನ್ನು ಬಂಧಿಸಲು ಇಂಟರ್​ಪೋಲ್ ನೆರವನ್ನು […]

ಡೊನಾಲ್ಡ್ ಟ್ರಂಪ್ ವಿರುದ್ಧ ಜಾರಿಯಾಯ್ತು ಅರೆಸ್ಟ್ ವಾರಂಟ್
ಡೊನಾಲ್ಡ್​ ಟ್ರಂಪ್ (ಸಂಗ್ರಹ ಚಿತ್ರ)
ಸಾಧು ಶ್ರೀನಾಥ್​ Edited By:

Updated on: Jun 29, 2020 | 6:38 PM

ನವೆಂಬರ್​ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲುವ ಕನಸು ಕಾಣುತ್ತಿರುವ ಸದ್ಯದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ದಶ ದಿಕ್ಕುಗಳಿಂದಲೂ ಪ್ರಚಾರಕ್ಕೆ ಬದಲು ಅಪಚಾರವೇ ಹೆಚ್ಚಾಗಿ ಸಿಗುತ್ತಿದೆ. ಈ ಮಧ್ಯೆ ಇರಾನ್​ ಸಹ ತನ್ನ ಕೈಲಾದ ಮಟ್ಟಿಗೆ ಟ್ರಂಪ್​ ವಿರುದ್ಧ ಗುಡುಗಿದೆ.

ಇರಾನ್ ಸೇನಾ ಕಮಾಂಡರ್​ ಖ್ವಾಸಿಂ ಸುಲೇಮಾನಿ ಹತ್ಯೆ ಪ್ರಕರಣ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧ ಇರಾನ್ ಸರ್ಕಾರ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ. ಡೊನಾಲ್ಡ್​ ಟ್ರಂಪ್ ಸೇರಿದಂತೆ ಇತರರನ್ನು ಬಂಧಿಸಲು ಇಂಟರ್​ಪೋಲ್ ನೆರವನ್ನು ಕೇಳಿದೆ.

​ಈ ಹಿಂದೆ ಖ್ವಾಸಿಂ ಸುಲೇಮಾನಿಯನ್ನ ಹತ್ಯೆ ಮಾಡಿಸಿದ್ದು ತಾನೇ ಎಂದು ಡೊನಾಲ್ಡ್​ ಟ್ರಂಪ್ ಹೇಳಿಕೊಂಡಿದ್ದರು. ಹಾಗಾಗಿ ಟ್ರಂಪ್ ವಿರುದ್ಧ ಇರಾನ್ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ.

Published On - 6:37 pm, Mon, 29 June 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us