ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗನ್ನು ವಶಪಡಿಸಿಕೊಂಡ ಇರಾನ್

ಭಾರತಕ್ಕೆ ತೆರಳುವ ಹಡಗನ್ನು ಐಆರ್‌ಜಿಸಿ ವಶಪಡಿಸಿಕೊಂಡಿದೆ. ಇರಾನ್ ವಶಪಡಿಸಿಕೊಂಡಿರುವ 2 ಹಡಗುಗಳಲ್ಲಿ ಒಂದು ಭಾರತದ್ದು. ವಶಕ್ಕೆ ಪಡೆದ ಹಡಗನ್ನು ಇರಾನ್‌ಗೆ ಕರೆದೊಯ್ಯಲಾಗುತ್ತಿದೆ. ಈ ಎರಡು ಹಡಗುಗಳಲ್ಲಿ ಒಂದು ಭಾರತಕ್ಕೆ ತೆರಳುವ ಹಡಗಾಗಿದ್ದರೆ ಮತ್ತೊಂದು ವಿಶ್ವದ ಅತಿದೊಡ್ಡ ಸಾಗಣೆದಾರ ಎಂಎಸ್‌ಸಿಗೆ ಸಂಬಂಧಿಸಿದ್ದಾಗಿದೆ. ಹಾರ್ಮುಜ್ ಜಲಸಂಧಿಯನ್ನು ದಾಟಲು ಯತ್ನಿಸಿದ ಹಡಗಿನ ಮೇಲೆ ಇತ್ತೀಚೆಗಷ್ಟೇ ಇರಾನ್ ದಾಳಿ ನಡೆಸಿತ್ತು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗನ್ನು ವಶಪಡಿಸಿಕೊಂಡ ಇರಾನ್
Strait Of Hormuz

Updated on: Apr 22, 2026 | 5:49 PM

ಟೆಹ್ರಾನ್, ಏಪ್ರಿಲ್ 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ ಕದನ ವಿರಾಮ ವಿಸ್ತರಣೆಯ ಹೊರತಾಗಿಯೂ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಉದ್ವಿಗ್ನತೆ ಮುಂದುವರಿದಿದೆ. ಹಾರ್ಮುಜ್ ಜಲಸಂಧಿಯಲ್ಲಿ 2 ಹಡಗುಗಳನ್ನು ವಶಪಡಿಸಿಕೊಂಡಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ. ಆ 2 ಹಡಗುಗಳಲ್ಲಿ ಒಂದು ಭಾರತದ ಗುಜರಾತ್​​ನತ್ತ ಬರುತ್ತಿತ್ತು.

“ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾ ಪಡೆ ಇಂದು ಬೆಳಿಗ್ಗೆ ಹಾರ್ಮುಜ್ ಜಲಸಂಧಿಯಲ್ಲಿ ಎರಡು ಹಡಗುಗಳು ನಿಯಮ ಉಲ್ಲಂಘನೆ ಮಾಡಿದ್ದನ್ನು ಗುರುತಿಸಿ ನಿಲ್ಲಿಸಿದೆ. ಅವುಗಳನ್ನು ಇರಾನ್​ನ ಕರಾವಳಿಯತ್ತ ತೆಗೆದುಕೊಂಡು ಹೋಗಲಾಗಿದೆ. ವಶಪಡಿಸಿಕೊಂಡ ಹಡಗುಗಳನ್ನು ಎಂಎಸ್‌ಸಿ-ಫ್ರಾನ್ಸೆಸ್ಕಾ ಮತ್ತು ಇಪಾಮಿನೊಂಡಾಸ್ ಎಂದು ಗುರುತಿಸಲಾಗಿದೆ” ಎಂದು ಇರಾನ್ ಹೇಳಿಕೆಯಲ್ಲಿ ತಿಳಿಸಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

ಇದನ್ನೂ ಓದಿ: ಹಾರ್ಮುಜ್​ನಲ್ಲಿ ಭಾರತದ ಹಡಗುಗಳ ಮೇಲೆ ಇರಾನ್ ದಾಳಿ, ಇರಾನ್ ರಾಯಭಾರಿ ಬಳಿ ವಿವರಣೆ ಕೇಳಿದ ಭಾರತ

ಲೈಬೀರಿಯಾ ಧ್ವಜದ ಅಡಿಯಲ್ಲಿ ಪ್ರಯಾಣಿಸುತ್ತಿದ್ದ ಕಂಟೇನರ್ ಹಡಗು ಇಪಾಮಿನೊಂಡಾಸ್ ದುಬೈನ ಜೆಬೆಲ್ ಅಲಿಯಿಂದ ಗುಜರಾತ್‌ಗೆ ಹೋಗುತ್ತಿತ್ತು. ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು ವಿಸ್ತರಿಸಿದ್ದಾರೆ. ಅದರ ಬೆನ್ನಲ್ಲೇ ಇರಾನ್ ಹಾರ್ಮುಜ್​ನಲ್ಲಿ ಹಡಗುಗಳನ್ನು ವಶಕ್ಕೆ ಪಡೆದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us