AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರ್ಮುಜ್​ನಲ್ಲಿ ಭಾರತದ ಹಡಗುಗಳ ಮೇಲೆ ಇರಾನ್ ದಾಳಿ, ಇರಾನ್ ರಾಯಭಾರಿ ಬಳಿ ವಿವರಣೆ ಕೇಳಿದ ಭಾರತ

ಹಾರ್ಮುಜ್​ನಲ್ಲಿ ಭಾರತದ ಹಡಗುಗಳ ಮೇಲೆ ಇರಾನ್ ದಾಳಿ, ಇರಾನ್ ರಾಯಭಾರಿ ಬಳಿ ವಿವರಣೆ ಕೇಳಿದ ಭಾರತ

ನಯನಾ ರಾಜೀವ್
|

Updated on:Apr 19, 2026 | 11:58 AM

Share

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ದಾಳಿ ನಡೆಸಿದೆ. ಭಾರತದ ಎರಡು ಹಡಗುಗಳು ಗುಂಡಿನ ದಾಳಿಗೆ ಒಳಗಾಗಿದ್ದು, ಒಂದು ಹಡಗು ಭಾರತದ ಕರಾವಳಿ ಕಡೆಗೆ ತಪ್ಪಿಸಿಕೊಂಡಿದೆ. ಈ ಘಟನೆಯಿಂದ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತದಲ್ಲಿರುವ ಇರಾನ್ ರಾಯಭಾರಿಯನ್ನು ಕರೆಸಿ ವಿವರಣೆ ಕೇಳಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕಾ ನಡುವೆ ಕದನ ವಿರಾಮ ಘೋಷಣೆಯಾಗಿದ್ದರೂ, ಹಾರ್ಮುಜ್ ಜಲಸಂಧಿಯಲ್ಲಿ ಮತ್ತೆ ಉದ್ವಿಗ್ನತೆ ಸೃಷ್ಟಿಯಾಗಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳ ಮೇಲೆ ಇರಾನ್ ಮಿಲಿಟರಿ ದಾಳಿ ನಡೆಸಿದ ಕಾರಣ, ಭಾರತ ಆಕ್ರೋಶ ವ್ಯಕ್ತಪಡಿಸಿದೆ. ಕದನ ವಿರಾಮವಿದ್ದರೂ ಇರಾನ್ ದಾಳಿ ಮುಂದುವರೆಸಿದೆ. ಇರಾನ್‌ನ ರಾಯಭಾರಿಯನ್ನು ಕರೆಸಿ ಭಾರತ ವಿವರಣೆ ಕೇಳಿದೆ. ಅಮೆರಿಕಾ ನೌಕಾಪಡೆ ಇರುವ ಕಾರಣ ಸಂಚಾರ ನಿಷೇಧಿಸಿದೆ ಎಂದು ಇರಾನ್ ಹೇಳಿದೆ. ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ದಾಳಿ ನಡೆಸಿದೆ. ಭಾರತದ ಎರಡು ಹಡಗುಗಳು ಗುಂಡಿನ ದಾಳಿಗೆ ಒಳಗಾಗಿದ್ದು, ಒಂದು ಹಡಗು ಭಾರತದ ಕರಾವಳಿ ಕಡೆಗೆ ತಪ್ಪಿಸಿಕೊಂಡಿದೆ.

ಈ ಘಟನೆಯಿಂದ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತದಲ್ಲಿರುವ ಇರಾನ್ ರಾಯಭಾರಿಯನ್ನು ಕರೆಸಿ ವಿವರಣೆ ಕೇಳಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕಾ ನಡುವೆ ಕದನ ವಿರಾಮ ಘೋಷಣೆಯಾಗಿದ್ದರೂ, ಹರ್ಮುಜ್ ಜಲಸಂಧಿಯಲ್ಲಿ ಮತ್ತೆ ಉದ್ವಿಗ್ನತೆ ಸೃಷ್ಟಿಯಾಗಿದೆ.

ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದೆ ಎಂದು ಘೋಷಿಸಿದ್ದರೂ, ಇಪ್ಪತ್ತನಾಲ್ಕು ಗಂಟೆಗಳೊಳಗಾಗಿ ಮತ್ತೆ ಬಂದ್ ಮಾಡಿದೆ. ಅಮೆರಿಕದ ಯುದ್ಧ ನೌಕೆಗಳು ಇನ್ನೂ ಹಾರ್ಮುಜ್ ಜಲಸಂಧಿಯಲ್ಲಿ ಇರುವುದರಿಂದ ಮತ್ತು ಇರಾನ್ ಬಂದರುಗಳಿಗೆ ಅಮೆರಿಕ ನಿರ್ಬಂಧ ಹೇರಿರುವ ಕಾರಣ ಹಡಗುಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಯುರೇನಿಯಂ ಕಾರ್ಯಕ್ರಮಗಳನ್ನು ನಿಲ್ಲಿಸುವ ಅಮೆರಿಕದ ಷರತ್ತುಗಳನ್ನು ಇರಾನ್ ತಿರಸ್ಕರಿಸಿದೆ. ಈ ಘಟನೆಗಳು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಗೊಂದಲಗಳಿಗೆ ಕಾರಣವಾಗಿವೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Apr 19, 2026 11:58 AM
Follow Us