ಕೊರೊನಾವೈರಸ್ನ (Coronavirus) ಒಮಿಕ್ರಾನ್ (Omicron) ರೂಪಾಂತರದ ಹೊರಹೊಮ್ಮುವಿಕೆಯ ನಂತರ, ಜಗತ್ತು ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಿಸಲು ಅನುವು ಮಾಡಿಕೊಡುತ್ತದೆ. ಹೊಸ ತಳಿಯು ಹೆಚ್ಚು ಹರಡುವ ಮತ್ತು ಲಸಿಕೆಗಳಿಗೆ ನಿರೋಧಕವಾಗಿದೆ ಎಂದು ನಂಬಲಾಗಿದೆ. ಕೊರೊನಾವೈರಸ್ ಕಾಯಿಲೆ (Covid-19) ಸಾಂಕ್ರಾಮಿಕವು ಜಗತ್ತನ್ನು ಸ್ಥಗಿತಗೊಳಿಸಿದ್ದು ಈ ವರ್ಷದ ರಜಾದಿನದ ಯೋಜನೆಗಳನ್ನು ಹಾಳುಮಾಡುವ ಬೆದರಿಕೆಯನ್ನು ಮತ್ತೊಮ್ಮೆ ತಂದಿದೆ. ಜನರ ಉತ್ತಮ ರಕ್ಷಣೆಗಾಗಿ ಹೊಸ ಲಸಿಕೆಗಳು ಅಥವಾ ಬೂಸ್ಟರ್ ಶಾಟ್ಗಳನ್ನು ಅಭಿವೃದ್ಧಿಪಡಿಸಲು ಒಮಿಕ್ರಾನ್ ರೂಪಾಂತರದ ನಡವಳಿಕೆಯನ್ನು ಆರೋಗ್ಯ ತಜ್ಞರು ಅಧ್ಯಯನ ಮಾಡುತ್ತಿದ್ದಾರೆ. ಆದರೆ ಒಮಿಕ್ರಾನ್ ನಂತರ ಕೊವಿಡ್-19 ಕೊನೆಗೊಳ್ಳುತ್ತದೆಯೇ ಮುಂದಿನ ಕೆಲವು ತಿಂಗಳುಗಳಲ್ಲಿ ವೈರಸ್ ಹೇಗೆ ವರ್ತಿಸುತ್ತದೆ? ಪ್ರಮುಖ ಆರೋಗ್ಯ ತಜ್ಞರ ಇತ್ತೀಚಿನ ಪ್ರತಿಕ್ರಿಯೆಗಳು ಈ ಬಗ್ಗೆ ಬೆಳಕು ಚೆಲ್ಲುತ್ತವೆ. ಭಾನುವಾರ ಯುನೈಟೆಡ್ ಸ್ಟೇಟ್ಸ್ನ ಆಹಾರ ಮತ್ತು ಔಷಧ ಆಡಳಿತದ ಮಾಜಿ ಕಮಿಷನರ್ ಡಾ ಸ್ಕಾಟ್ ಗಾಟ್ಲೀಬ್ ಸಿಬಿಎಸ್ ನ್ಯೂಸ್ನ ‘ಫೇಸ್ ದಿ ನೇಷನ್’ ನಲ್ಲಿ ಕಾಣಿಸಿಕೊಂಡಿದ್ದು ಒಮಿಕ್ರಾನ್ ಸಾಮಾನ್ಯ ಸ್ಥಿತಿಗೆ ಮರಳುವ ಹಾದಿಯಲ್ಲಿ ಕೇವಲ “ತಾತ್ಕಾಲಿಕ ಘಟನೆ” ಎಂದು ಹೇಳಿದರು.
ಜನರು ಸಾಮಾನ್ಯವಾಗಿ ಕೊವಿಡ್ನಿಂದಾಗಿ ಜೀವನದಿಂದ ಬೇಸತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಜನರು ಏನು ಮಾಡುತ್ತಿದ್ದಾರೆ ಎಂಬುದರ ವಿಷಯದಲ್ಲಿ ನೀವು ಅದನ್ನು ನೋಡುತ್ತಿರುವಿರಿ. ಅವರು ಚಟುವಟಿಕೆಗಳಲ್ಲಿ ಪುನಃ ತೊಡಗಿಸಿಕೊಂಡಿದ್ದಾರೆ ಇದರಿಂದ ಈ ವೈರಸ್ನ ಹರಡುವಿಕೆಗೆ ಸಹಕಾರಿಯಾಗಲಿದೆ ಎಂದು ನಮಗೆ ತಿಳಿದಿದೆ. ಒಮಿಕ್ರಾನ್ ನಿಜವಾಗಿಯೂ ಇಲ್ಲಿ ಕರ್ವ್ಬಾಲ್ ಅನ್ನು ಎಸೆದಿದೆ. ಇದು ತಾತ್ಕಾಲಿಕ ಘಟನೆ ಎಂದು ನಾನು ಭಾವಿಸುತ್ತೇನೆ ಎಂದು ಗಾಟ್ಲೀಬ್ ಹೇಳಿದ್ದಾರೆ.
ಆದಾಗ್ಯೂ ಒಮಿಕ್ರಾನ್ ಯುಎಸ್ ಜನಸಂಖ್ಯೆಯನ್ನು ತ್ವರಿತವಾಗಿ ಆವರಿಸಿದೆ ಎಂದು ಅವರು ಎಚ್ಚರಿಸಿದ್ದಾರೆ. ಕಳೆದ ವಾರ ಯುಎಸ್ನಲ್ಲಿ ಒಮಿಕ್ರಾನ್ ಡೆಲ್ಟಾಕ್ಕಿಂತ ಹೆಚ್ಚು ಹರಡಿದ್ದು, ಕಳೆದ ವಾರ ದೇಶದಲ್ಲಿ ಹೊಸ ಕೊವಿಡ್ -19 ಪ್ರಕರಣಗಳಲ್ಲಿ 73 ಪ್ರತಿಶತವನ್ನು ಹೊಂದಿದೆ.
ಶುಕ್ರವಾರ ಫೈಜರ್ ಕಂಪನಿಯ ಕಾರ್ಯನಿರ್ವಾಹಕರು ಸಿಎನ್ಬಿಸಿ ಜತೆ ಮಾತನಾಡಿದ್ದು ಕೊರೊನಾ ವೈರಸ್ ಸ್ಥಳೀಯವಾಗಿ ಪರಿಣಮಿಸುತ್ತದೆ ಎಂದು ಹೇಳಿದರು. 2024 ರ ವೇಳೆಗೆ ಕೊವಿಡ್ ಸ್ಥಳೀಯ ಸ್ಥಿತಿಗೆ ಪರಿವರ್ತನೆಯಾಗುತ್ತದೆ ಎಂದು ನಾವು ನಂಬುತ್ತೇವೆ ಎಂದು ಫಿಜರ್ ಲಸಿಕೆಗಳ ಜಾಗತಿಕ ಅಧ್ಯಕ್ಷ ನಾನೆಟ್ ಕೊಸೆರೊ ಹೇಳಿದರು.
ಕಂಪನಿಯ ಮುಖ್ಯ ವೈಜ್ಞಾನಿಕ ಅಧಿಕಾರಿ ಮೈಕೆಲ್ ಡಾಲ್ಸ್ಟನ್, ಹೊಸ ರೂಪಾಂತರಗಳ ಹೊರಹೊಮ್ಮುವಿಕೆಯು ಸಾಂಕ್ರಾಮಿಕ ರೋಗವು ಹೇಗೆ ಮುಂದುವರಿಯುತ್ತದೆ ಎಂಬುದರ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದರು.
ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಅನ್ನು ಮೊದಲು ಪತ್ತೆ ಮಾಡಲಾಯಿತು. ಅಂದಿನಿಂದಈ ರೂಪಾಂತರವು 100 ಕ್ಕೂ ಹೆಚ್ಚು ದೇಶಗಳಲ್ಲಿ ಜನರ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಒಮಿಕ್ರಾನ್ ಸಂಖ್ಯೆಯು 200ರ ಗಡಿ ದಾಟಿದೆ. ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಕರಣಗಳಿವೆ.
ಇದನ್ನೂ ಓದಿ: Delmicron ಒಮಿಕ್ರಾನ್ ನಂತರ ಬಂದಿದೆ ಹೊಸ ರೂಪಾಂತರಿ ಡೆಲ್ಮಿಕ್ರಾನ್; ರೋಗ ಲಕ್ಷಣಗಳೇನು? ಚಿಕಿತ್ಸೆ ಏನು?