
ನವದೆಹಲಿ, ಜೂನ್ 19: ಕಳೆದ ಹಲವು ತಿಂಗಳುಗಳಿಂದ ಇಸ್ರೇಲ್ (Israel) ಸೇನೆ ಮತ್ತು ಲೆಬನಾನ್ (Lebanon) ಮೂಲದ ಹೆಜ್ಬೊಲ್ಲಾ ಸಂಘಟನೆಯ ನಡುವೆ ಭಾರಿ ಪ್ರಮಾಣದ ಕ್ಷಿಪಣಿ ದಾಳಿಗಳು ಹಾಗೂ ವೈಮಾನಿಕ ದಾಳಿಗಳು ನಡೆಯುತ್ತಿದ್ದವು. ಈ ಯುದ್ಧವನ್ನು ಕೊನೆಗಾಣಿಸಲು ಅಮೆರಿಕ ಮತ್ತು ಇತರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆದಾರರು ನಿರಂತರ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸುತ್ತಿದ್ದರು. ಇದೀಗ ಕೊನೆಗೂ ಉಭಯ ದೇಶಗಳು ಶಾಂತಿಗೆ ಸಮ್ಮತಿಸಿವೆ. ಈ ಒಪ್ಪಂದದ ಅನ್ವಯ ನಾಳೆ ಮುಂಜಾನೆಯಿಂದಲೇ ಎರಡೂ ದೇಶದವರು ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗುತ್ತದೆ.
ದಕ್ಷಿಣ ಲೆಬನಾನ್‌ನ ಗಡಿ ಪ್ರದೇಶಗಳಿಂದ ಹೆಜ್ಬೊಲ್ಲಾ ತನ್ನ ಶಸ್ತ್ರಾಸ್ತ್ರ ಮತ್ತು ಹೋರಾಟಗಾರರನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಇಸ್ರೇಲ್ ಸೇನೆಯೂ ಸಹ ತನ್ನ ಸೈನಿಕರನ್ನು ಗಡಿಯಿಂದ ಹಿಂದೆ ಕರೆಸಿಕೊಳ್ಳಬೇಕು ಎಂಬ ನಿಯಮಗಳನ್ನು ವಿಧಿಸಲಾಗಿದೆ ಎನ್ನಲಾಗಿದೆ. ಕದನ ವಿರಾಮದ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿವೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡಲು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ (UNIFIL) ಮತ್ತು ಲೆಬನಾನ್ ರಾಷ್ಟ್ರೀಯ ಸೇನೆಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತದೆ.
ISRAEL CONTINUE TO BOMB THROUGHOUT SOUTHERN LEBANON
They are making Trump look like a fool. pic.twitter.com/ruoVR8n8Gc
— Sulaiman Ahmed (@ShaykhSulaiman) June 19, 2026
ಇದನ್ನೂ ಓದಿ: ಇಸ್ರೇಲ್ ಕೈಲಾಗದಿದ್ದರೆ ಸಿರಿಯಾ ನಿಭಾಯಿಸಲಿ; ಹೆಜ್ಬುಲ್ಲಾ ನಿಗ್ರಹಕ್ಕೆ ಟ್ರಂಪ್ ಐಡಿಯಾ
ಇಂದು ಮುಂಜಾನೆ ಇಸ್ರೇಲಿ ಪಡೆಗಳು ಮತ್ತು ಹೆಜ್ಬೊಲ್ಲಾ ನಡುವೆ ಮತ್ತೆ ಹೊಸದಾಗಿ ಪರಸ್ಪರ ದಾಳಿಗಳು ನಡೆದ ಹೊರತಾಗಿಯೂ ಈ ಒಪ್ಪಂದ ಏರ್ಪಟ್ಟಿದ್ದು, ಇದು ಈ ಕದನ ವಿರಾಮದ ಸೂಕ್ಷ್ಮತೆಯನ್ನು ಎತ್ತಿ ತೋರಿಸುತ್ತದೆ. ಲೆಬನಾನ್‌ನಲ್ಲಿ ಮುಂದುವರಿದಿರುವ ಘರ್ಷಣೆಗಳು ಪ್ರಾದೇಶಿಕವಾಗಿ ಪ್ರಸ್ತುತ ನಡೆಯುತ್ತಿರುವ ಇತರ ವಿಶಾಲವಾದ ಮಾತುಕತೆಗಳಿಗೆ ಧಕ್ಕೆ ತರಬಹುದು ಎಂಬ ಆತಂಕಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಅಮೆರಿಕ, ಕತಾರ್ ಮತ್ತು ಇರಾನಿನ ಮಧ್ಯಸ್ಥಿಕೆದಾರರು ಕಳೆದ ಕೆಲವು ದಿನಗಳಿಂದ ತೀವ್ರವಾದ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದ್ದರು.
Huge loss for Iran backed Hezbollah
Angry Israel launched a fresh wave of airstrikes against Iran backed Hezbollah after Hezbollah launched over 50 rockets in Northern Israel. Reportedly over 50 Hezbollah terrorists have been killed in these airstrikes in Southern Lebanon. pic.twitter.com/qN7KRqwcKn
— Baba Banaras™ (@RealBababanaras) June 19, 2026
ಇದನ್ನೂ ಓದಿ: ವಾಸ್ತವವನ್ನು ಅರ್ಥಮಾಡಿಕೊಳ್ಳಿ: ಇರಾನ್ ಒಪ್ಪಂದ ಟೀಕಿಸಿದ ಇಸ್ರೇಲ್ಗೆ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಎಚ್ಚರಿಕೆ
ಇಸ್ರೇಲ್-ಹೆಜ್ಬೊಲ್ಲಾ ಯುದ್ಧದ ಕಾರಣದಿಂದಾಗಿ ಲೆಬನಾನ್ ಮತ್ತು ಉತ್ತರ ಇಸ್ರೇಲ್‌ನಲ್ಲಿ ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆದು ನಿರಾಶ್ರಿತರಾಗಿದ್ದರು. ಅಮೆರಿಕ ಸರ್ಕಾರದ ಈ ಪ್ರಕಟಣೆಯು ಇಡೀ ಜಗತ್ತು ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ನೋಡಲಾಗುತ್ತಿದೆ. ವಿಶ್ವದ ಹಲವು ರಾಷ್ಟ್ರಗಳ ನಾಯಕರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:09 pm, Fri, 19 June 26