ಟೆಹ್ರಾನ್: ಇಂದು ಇರಾನ್ ಮೇಲೆ ನಡೆದ ದಾಳಿಗಳು ಇಸ್ರೇಲ್‌ನ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿವೆ. ಈ ದಾಳಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸೇನೆಯು ದೃಢಪಡಿಸಿದೆ. ಇಸ್ರೇಲಿ ಸೇನೆಯು ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಘೋಷಿಸಿದೆ. ಇರಾನ್‌ನ ವಾಯು ರಕ್ಷಣಾ ಕೇಂದ್ರ ಕಚೇರಿಯು “ಇಸ್ರೇಲ್‌ನ ಆಕ್ರಮಣಕಾರಿ ಕ್ರಮವನ್ನು ದೇಶದ ಸಮಗ್ರ ವಾಯು ರಕ್ಷಣಾ ವ್ಯವಸ್ಥೆಯಿಂದ ಯಶಸ್ವಿಯಾಗಿ ತಡೆಹಿಡಿಯಲಾಗಿದೆ ಮತ್ತು ಎದುರಿಸಲಾಗಿದೆ” ಎಂದು ಹೇಳಿದೆ.
ಇಸ್ರೇಲ್‌ನ ಮೇಲೆ ನಡೆದ ಟೆಹ್ರಾನ್‌ನ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಇರಾನ್‌ನ ಮಿಲಿಟರಿ ಗುರಿಗಳ ವಿರುದ್ಧ ದಾಳಿಗಳನ್ನು ನಡೆಸಿದೆ ಎಂದು ಹೇಳಿಕೊಂಡಿದೆ. ಟೆಹ್ರಾನ್‌ನ ದಾಳಿಯ ನಂತರ ಯುದ್ಧ ಉಲ್ಬಣಗೊಳ್ಳುವ ಆತಂಕದ ಬೆನ್ನಲ್ಲೇ ಈ ದಾಳಿ ನಡೆದಿದೆ.
ಇದನ್ನೂ ಓದಿ: ಹಮಾಸ್ ಮುಖ್ಯಸ್ಥನ ಹತ್ಯೆ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ನೆತನ್ಯಾಹು ಮನೆ ಮೇಲೆ ಡ್ರೋನ್ ದಾಳಿ
ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಸುಮಾರು 200 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಲಾಯಿತು. 6 ತಿಂಗಳ ಅವಧಿಯಲ್ಲಿ ಇರಾನ್ ಇಸ್ರೇಲ್‌ನ ಮೇಲೆ ಎರಡನೇ ನೇರ ದಾಳಿ ನಡೆಸಿತ್ತು. ಇದೀಗ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್‌ನಲ್ಲಿನ ಮಿಲಿಟರಿ ಗುರಿಗಳ ಮೇಲೆ ದಾಳಿಗಳನ್ನು ನಡೆಸುತ್ತಿದೆ.
In response to months of continuous attacks from the regime in Iran against the State of Israel—right now the Israel Defense Forces is conducting precise strikes on military targets in Iran.
The regime in Iran and its proxies in the region have been relentlessly attacking… pic.twitter.com/OcHUy7nQvN
— Israel Defense Forces (@IDF) October 25, 2024
ಟೆಹ್ರಾನ್‌ನಲ್ಲಿನ ದಾಳಿಗಳನ್ನು ಕ್ಯಾಂಪ್ ರಾಬಿನ್‌ನಲ್ಲಿರುವ ಇಸ್ರೇಲಿ ವಾಯುಪಡೆಯ ಭೂಗತ ಕಮಾಂಡ್ ಸೆಂಟರ್‌ನಿಂದ ಜನರಲ್ ಸ್ಟಾಫ್ ಮುಖ್ಯಸ್ಥ ಎಲ್‌ಟಿಜಿ ಹರ್ಝಿ ನೇತೃತ್ವ ವಹಿಸಿದ್ದರು. ಟೆಹ್ರಾನ್‌ನಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಕಾರ್ಯಾಚರಣೆ ಕೇಂದ್ರದಲ್ಲಿದ್ದರು. ಅವರು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ