ಲಾಸ್ ಏಂಜಲಸ್: ವಿಶ್ವದ ಖ್ಯಾತ ನಾಯಕರು, ಸಿನಿಮಾ ಸ್ಟಾರ್ಗಳನ್ನು ಭಿನ್ನ ರೀತಿಯಲ್ಲಿ ಸಂದರ್ಶನ ಮಾಡುತ್ತಿದ್ದ ಲ್ಯಾರಿ ಕಿಂಗ್ (87) ಶನಿವಾರ ಮೃತಪಟ್ಟಿದ್ದಾರೆ.
ಲಾಸ್ ಏಂಜಲೀಸ್‌ನ ಸೀಡರ್-ಸಿನಾಯ್ ವೈದ್ಯಕೀಯ ಕೇಂದ್ರದಲ್ಲಿ ಲ್ಯಾರಿ ಕಿಂಗ್ ಮೃತಪಟ್ಟಿದ್ದಾರೆ. ಇವರ ಸಾವಿಗೆ ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಲ್ಯಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿದ್ದವು.
1985ರಿಂದ ಇವರು ರೇಡಿಯೋ ಕಾರ್ಯಕ್ರಮ ನಡೆಸಿಕೊಡುತ್ತಾ ಬಂದಿದ್ದರು. ಸಿಎನ್ಎನ್ನಲ್ಲಿ ವಿಶೇಷ ಸಂದರ್ಶನ ಕಾರ್ಯಕ್ರಮ ನಡೆಸಿಕೊಟ್ಟ ಹೆಚ್ಚುಗಾರಿಕೆ ಕೂಡ ಇವರಿಗಿದೆ. ಲ್ಯಾರಿ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.
ನಾನೆಂಬ ಪರಿಮಳದ ಹಾದಿಯಲಿ: ಸಾಕಷ್ಟು ಹೂವುಗಳು ಸಿಕ್ಕವು ಮುಳ್ಳು ಸರಿಸಿ ಎತ್ತಿಕೊಂಡೆ…