ಸಿಡ್ನಿಯ ಪಾಮ್ ಬೀಚ್ನಲ್ಲಿ ಅತ್ಯಂತ ವಿಶೇಷವಾದ ಹಾಗೂ ಹಾಲಿಡೇ ಟ್ರಿಪ್ಸ್ ವೇಳೆ ಸುಂದರ ತಾಣದಲ್ಲಿ ಬಳಸಲಾಗುತ್ತಿದ್ದ ಹೌಸ್ ಬೋಟ್ ಏಕಾ ಏಕಿ ಅಗ್ನಿಗೆ ಆಹುತಿಯಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.. ಆದರೆ ಹಡಗಿನ ಸುತ್ತ ಕಪ್ಪು ಹೊಗೆ ಆವರಿಸಿದೆ.
ಇದು ಐಷಾರಾಮಿ ‘ಲಿಲಿಪ್ಯಾಡ್’ ಹಾಲಿಡೇ ಹೌಸ್ ಬೋಟ್ ಅಂದ್ರೆ ತೇಲುವ ವಿಲ್ಲಾ ಆಗಿದೆ. ಇದರಲ್ಲಿ ಇಬ್ಬರಿಗೆ ರಾತ್ರಿಯ ವಸತಿ ಅನುಕೂಲದ ವ್ಯವಸ್ಥೆ ಇದೆ ಮತ್ತು 16 ಜನರಿಗೆ ಖಾಸಗಿ ಈವೆಂಟ್ ಮಾಡಿಕೊಳ್ಳಲು ಸ್ಥಳವನ್ನು ಒದಗಿಸುವಷ್ಟು ದೊಡ್ಡದಿದೆ. ಇಂತಹ ಐಷಾರಾಮಿ ಹೌಸ್ ಬೋಟ್ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳದ ಪ್ರಯತ್ನಗಳ ಹೊರತಾಗಿಯೂ, ಹಡಗನ್ನು ಉಳಿಸಲಾಗಲಿಲ್ಲ. ಹೌಸ್ ಬೋಟ್ ಪೂರ್ತಿ ಹಾಳಾಗಿದೆ.
ಹೌಸ್ ಬೋಟ್ನಲ್ಲಿ ಯಾರೂ ಇರಲಿಲ್ಲವಾ?
ಅದೃಷ್ಟವಶಾತ್ ಆ ಸಮಯದಲ್ಲಿ ಯಾರೂ ಹೌಸ್ ಬೋಟ್ನಲ್ಲಿ ಇರಲಿಲ್ಲ. ಆದ್ದರಿಂದ ಪ್ರಾಣ ಹಾನಿ ತಪ್ಪಿದೆ. ಆದರೆ ಬೆಳಬಾಳುವ ಹೌಸ್ ಬೋಟ್ ನಾಶವಾಗಿದೆ. ಬೆಂಕಿ ಕಾಣಿಸಿಕೊಳ್ಳಲು ಕಾರಣ ತಿಳಿದು ಬಂದಿಲ್ಲ, ತನಿಖೆ ಮುಂದುವರೆದಿದೆ.
Published On - 1:22 pm, Mon, 21 September 20