ಮಾಲ್ಡೀವ್ಸ್ ಸಚಿವರು ಪ್ರಧಾನಿ ನರೇಂದ್ರ ಮೋದಿ(Narendra Modi) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಅಧ್ಯಕ್ಷ ಮೊಹಮ್ಮದ್ ಮುಯಿಝು(Mohamed Muizzu)ಗೆ ಭಾರಿ ದುಬಾರಿಯಾಗಿ ಪರಿಣಮಿಸಿದೆ. ಭಾರತದೊಂದಿಗಿನ ಸಂಬಂಧವನ್ನು ಹದಗೆಡಿಸುತ್ತಿದೆ ಎಂದು ಮಾಲ್ಡೀವ್ಸ್ನ ಪ್ರತಿಪಕ್ಷಗಳು ಅಲ್ಲಿನ ಸರ್ಕಾರವನ್ನು ದೂಷಿಸಿವೆ, ಜತೆಗೆ ಅಧ್ಯಕ್ಷ ಮುಯಿಝು ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೂ ತಯಾರಿ ನಡೆದಿದೆ.
ಮುಯಿಝು ಅವರನ್ನು ಪದಚ್ಯುತಿಗೊಳಿಸುವ ನಿರ್ಧಾರವನ್ನು ಸಂಸದೀಯ ಅಲ್ಪಸಂಖ್ಯಾತ ನಾಯಕ ಅಲಿ ಅಜೀಮ್ ತೆಗೆದುಕೊಂಡಿದ್ದಾರೆ. ಮುಯಿಝು ಅವರನ್ನು ಕುರ್ಚಿಯಿಂದ ಕೆಳಗಿಳಿಸಲೇಬೇಕು ಎಂದು ಮಾಲ್ಡೀವ್ಸ್ ನಾಯಕರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ವಿದೇಶಾಂಗ ನೀತಿಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ನಮ್ಮ ಮಾಲ್ಡೀವಿಯನ್ ಡೆಮಾಕ್ರೆಟಿಕ್ ಪಕ್ಷ ಬದ್ಧವಾಗಿದೆ ಎಂದು ಅಜೀಮ್ ಹೇಳಿದ್ದಾರೆ.
ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರವಾಸಿಗರು ಬುಕಿಂಗ್ ಅನ್ನು ರದ್ದುಗೊಳಿಸುತ್ತಿದ್ದಾರೆ. ಟ್ರಾವೆಲ್ ಕಂಪನಿಗಳು ಕೂಡ ಪ್ರತಿಭಟನೆಗಳಿದಿವೆ. ಮಾಲ್ಡೀವ್ಸ್ ಪ್ರವಾಸೋದ್ಯಮ ಅಸೋಸಿಯೇಷನ್ ಕೂಡ ಸಚಿವರ ಹೇಳಿಕೆಯನ್ನು ಟೀಕಿಸಿವೆ.
ಮತ್ತಷ್ಟು ಓದಿ: India Maldives Row: ಶೀಘ್ರ ಭಾರತಕ್ಕೆ ಆಗಮಿಸಲಿದ್ದಾರೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು
ಹಾಗೆಯೇ ಭಾರತ ನಮ್ಮ ಹತ್ತಿರದ ನೆರೆಯ ಮತ್ತು ಮಿತ್ರ ರಾಷ್ಟ್ರವಾಗಿದೆ, ಇತಿಹಾಸದಲ್ಲಿ ನಮ್ಮ ದೇಶವು ಬಿಕ್ಕಟ್ಟಿನಿಂದ ಕೂಡಿದ್ದಾಗ ಭಾರತವು ಸಹಾಯಕ್ಕೆ ಬಂದಿತ್ತು, ಮಾಲ್ಡೀವ್ಸ್ನ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಭಾರತ ಪ್ರಮುಖ ಪಾತ್ರವಹಿಸಿದೆ. ಹಾಗೆಯೇ ಕೋವಿಡ್ ಸಂದರ್ಭದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಚೇತರಿಸಿಕೊಳ್ಳುವಲ್ಲಿಯೂ ಸಾಕಷ್ಟು ಸಹಾಯ ಮಾಡಿದೆ.
ಇದಾದ ಬಳಿಕ ಮಾಜಿ ಉಪಾಧ್ಯಕ್ಷ ಅದೀಬ್ ಮಾತನಾಡಿ, ಸಚಿವರು ಭಾರತದ ಕ್ಷಮೆಯಾಚಿಸಬೇಕು, ಈ ರಾಜತಾಂತ್ರಿಕ ಬಿಕ್ಕಟ್ಟನ್ನು ಎದುರಿಸಲು ಅಧ್ಯಕ್ಷ ಮುಯಿಝು ಪ್ರಧಾನಿ ಮೋದಿ ಬಳಿ ಹೋಗಬೇಕು ಎಂದು ಅದೀಬ್ ಹೇಳಿದ್ದಾರೆ.
ಘಟನೆ ಹಿನ್ನೆಲೆ ಏನು?
ಮಾಲ್ಡೀವ್ಸ್ ಸರ್ಕಾರದ ಮೂವರು ಸಚಿವರು ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪ ಭೇಟಿ ಕುರಿತು ಲೇವಡಿ ಮಾಡಿದ್ದರು. ಲಕ್ಷದ್ವೀಪವನ್ನು ಮಾಲ್ಡೀವ್ಸ್ ಮಾಡುವುದು ನಿಮ್ಮ ಭ್ರಮೆಯಷ್ಟೆ, ಮಾಲ್ಡೀವ್ಸ್ನಲ್ಲಿ ಸಿಗುವ ಮೂಲ ಸೌಕರ್ಯಗಳು ಲಕ್ಷದ್ವೀಪದಲ್ಲಿ ಸಿಗಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದರು. ಇದಾದ ಬಳಿಕ ಮೂವರನ್ನು ಸರ್ಕಾರ ಅಮಾನತುಗೊಳಿಸಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ