ಮನುಷ್ಯ ಅಲ್ಲ ಈತ ರಾಕ್ಷಸ, ಪತ್ನಿಯ ಹತ್ಯೆ ಮಾಡಿ 200 ತುಂಡುಗಳಾಗಿ ಕತ್ತರಿಸಿ ವಾರ ಅಡುಗೆ ಮನೆಯಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿ

ವ್ಯಕ್ತಿಯೊಬ್ಬ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ, ಬಳಿಕ ದೇಹವನ್ನು 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಅಷ್ಟೇ ಅಲ್ಲ ದೇಹದ ತುಂಡುಗಳನ್ನು ವಾರಗಳವರೆಗೆ ಅಡುಗೆ ಮನೆಯಲ್ಲೇ ಇಟ್ಟುಕೊಂಡಿದ್ದ, ಇದಾದ ನಂತರ ಸ್ನೇಹಿತನಿಗೆ 5 ಸಾವಿರ ರೂ. ಕೊಟ್ಟು ಅವುಗಳನ್ನು ನದಿಗೆ ಎಸೆಯಲು ತಿಳಿಸಿದ್ದ.

ಮನುಷ್ಯ ಅಲ್ಲ ಈತ ರಾಕ್ಷಸ, ಪತ್ನಿಯ ಹತ್ಯೆ ಮಾಡಿ 200 ತುಂಡುಗಳಾಗಿ ಕತ್ತರಿಸಿ ವಾರ ಅಡುಗೆ ಮನೆಯಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿ
ಆರೋಪಿ

Updated on: Apr 07, 2024 | 11:22 AM

ವ್ಯಕ್ತಿಯೊಬ್ಬ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ, ಬಳಿಕ ದೇಹವನ್ನು 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಅಷ್ಟೇ ಅಲ್ಲ ದೇಹದ ತುಂಡುಗಳನ್ನು ವಾರಗಳವರೆಗೆ ಅಡುಗೆ ಮನೆಯಲ್ಲೇ ಇಟ್ಟುಕೊಂಡಿದ್ದ, ಇದಾದ ನಂತರ ಸ್ನೇಹಿತನಿಗೆ 5 ಸಾವಿರ ರೂ. ಕೊಟ್ಟು ಅವುಗಳನ್ನು ನದಿಗೆ ಎಸೆಯಲು ತಿಳಿಸಿದ್ದ.

28 ವರ್ಷದ ನಿಕೋಲಸ್ ಮೆಟ್ಸನ್ 26 ವರ್ಷದ ಪತ್ನಿ ಬ್ಲಾಮ್ಲಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮೊದಲು ಬೆಡ್​ರೂಮಿನಲ್ಲಿ ಪತ್ನಿಗೆ ಹಲವು ಬಾರಿ ಇರಿದು ಕೊಲೆ ಮಾಡಿ ಬಳಿಕ ದೇಹವನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಬಳಿಕ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಡುಗಳನ್ನು ಹಾಕಿ ಇರಿಸಿದ್ದ.

ಘಟನೆ ನಡೆದು ಸುಮಾರು ಒಂದು ವಾರದ ಬಳಿಕ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಶವವನ್ನು ವಿಲೇವಾರಿ ಮಾಡಿದ ಮರುದಿನವೇ ವಾಕಿಂಗ್​ಗೆ ತೆರಳಿದ್ದ ವ್ಯಕ್ತಿಯೊಬ್ಬರು ನದಿಯಲ್ಲಿ ಪ್ಲಾಸ್ಟಿಕ್​ ಚೀಲಗಳು ತೇಲುತ್ತಿರುವುದನ್ನು ನೋಡಿದ್ದರು.
ಒಂದು ಬ್ಯಾಗ್​ನಲ್ಲಿ ಬ್ರಾಮ್ಲಿಯ ಕೈ ಹಾಗೂ ಬೋಳಿಸಿದ ತಲೆ ಇತ್ತು. ದೇಹವನ್ನು ವಿರೂಪಗೊಳಿಸಲಾಗಿತ್ತು.

ಮತ್ತಷ್ಟು ಓದಿ: ಮಂಗಳೂರು: ಅವಳಿ ಕೊಲೆ ಕೇಸ್​ನಲ್ಲಿ ಮೃತಪಟ್ಟಿದ್ದ ಮಹಿಳೆ ಪತಿ ಹತ್ಯೆಗೆ ಯತ್ನ: ಆಸ್ಪತ್ರೆಗೆ ದಾಖಲು

ತನ್ನ ಮಗಳಿಗೆ ಮದುವೆಯಾಗಿ ಕೇವಲ 16 ತಿಂಗಳುಗಳಾಗಿದೆ, ಈ ರಾಕ್ಷಸರು ಒಂದು ದಿನವೂ ಆಕೆಗೆ ನಮ್ಮನ್ನು ಭೇಟಿಯಾಗಲು ಅವಕಾಶ ಕೊಟ್ಟಿರಲಿಲ್ಲ. ಮಾರ್ಚ್​ 24 ರಂದು ಪೊಲೀಸರು ಅವರ ಮನೆಗೆ ಹೋದಾಗ ಆತ ತನ್ನ ಹೆಂಡತಿ ತನಗೆ ಕಾಟ ಕೊಡುತ್ತಿದ್ದಾಳೆ ಎಂದು ಕಚ್ಚಿದ ಕಲೆಯನ್ನು ತೋರಿಸಿದ್ದ.

ಬಳಿಕ ಪೊಲೀಸರು ಬಾತ್​ ಟಬ್​ನಲ್ಲಿ ರಕ್ತದ ಕಲೆಗಳನ್ನು ಕಂಡಿದ್ದಾರೆ, ರೂಮಿನ ತುಂಬಾ ಅಮೋನಿಯಾ ಹಾಗೂ ಬ್ಲೀಚ್​ನ ವಾಸನೆ ಮೂಗಿಗೆ ಬಡಿಯುತ್ತಿತ್ತು. ಕೆಲವು ದಿನಗಳ ಹಿಂದೆ ಆಕೆ ತನ್ನ ಸ್ನೇಹಿತೆಯರ ಜತೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ನಂಬಿಸಲು ಪ್ರಯತ್ನಿಸಿದ್ದ, ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ ಸೋಮವಾರ ಹಂತಕನಿಗೆ ಶಿಕ್ಷೆಯಾಗಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us