ನೆದರ್‌ಲ್ಯಾಂಡ್‌ನ ಮಾಜಿ ಪ್ರಧಾನಿ ಸರಳತೆಗೆ ಹೆಸರಾಗಿದ್ದಾರೆ. ಮಾಜಿ ಪ್ರಧಾನಿ ಮಾರ್ಕ್ ರುಟ್ಟೆ ಅವರು ತಮ್ಮ 14 ವರ್ಷಗಳ ಅಧಿಕಾರವನ್ನು ಬಿಟ್ಟುಕೊಡುವ ಸಂದರ್ಭದಲ್ಲಿ ಸರಳತೆಯನ್ನು ಮೇರೆದಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜುಲೈ 2ರಂದು ಮಾಜಿ ಪ್ರಧಾನಿ ಮಾರ್ಕ್ ರುಟ್ಟೆ ಅವರು ಡಿಕ್ ಸ್ಕೂಫ್‌ಗೆ ತಮ್ಮ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ. ಈ ಸಮಯದಲ್ಲಿ ಮಾರ್ಕ್ ರುಟ್ಟೆ ಸಮಾರಂಭ ಮುಗಿಸಿ ತಮ್ಮ ಕಚೇರಿಯನ್ನು ತೊರೆಯುವಾಗ ತಮ್ಮ ಕಾರನ್ನು ಬಿಟ್ಟು ಸೈಕಲ್ನಲ್ಲಿ ಹೋಗಿದ್ದಾರೆ. ಇದೀಗ ಅವರ ಸರಳತೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ನೂತನ ಪ್ರಧಾನಿ ಡಿಕ್ ಸ್ಕೂಫ್ ಅವರಿಗೆ ಅಧಿಕಾರ ಹಸ್ತಂತಾರ ಸಮಾರಂಭದ ನಂತರ ಮಾರ್ಕ್ ರುಟ್ಟೆ ಅವರು ಪ್ರಧಾನಿ ಕಚೇರಿಯಿಂದ ಸೈಕಲ್ನಲ್ಲಿ ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ರುಟ್ಟೆ ಅವರು ಪ್ರಧಾನಿ ಕಚೇರಿಯಿಂದ ಹೋಗುವಾಗ ಅಲ್ಲಿದ್ದ ಅನೇಕ ಅಧಿಕಾರಿಗಳು ಹಾಗೂ ಜನ ಚಪ್ಪಾಳೆ ಮೂಲಕ ಅವರಿಗೆ ಬೀಳ್ಕೊಡುಗೆ ನೀಡಿದರು.
After 14 years in power, this is how former Dutch Prime Minister Mark Rutte left the Prime Minister’s Office after completing the ceremony of officially handing over power to his successor, Dick Schoof.#netherlands pic.twitter.com/exux8saX0D
— Kiran Bedi (@thekiranbedi) July 6, 2024
ಮಾರ್ಕ್ ರುಟ್ಟೆ ಅವರು ಸೈಕಲ್ನಲ್ಲಿ ಹೋಗುವುದು ಇದೇ ಮೊದಲಲ್ಲ. ಹಲವು ಬಾರಿ ಸರ್ಕಾರಿ ಕಾರ್ಯಕ್ರಮಗಳಿಗೆ ಹಾಗೂ ಸಾರ್ವಜನಿಕ ಸಭೆಗಳಿಗೆ ಸೈಕಲ್ನಲ್ಲೇ ಹೋದ ಉದಾಹರಣೆ ಇದೆ. 14 ವರ್ಷಗಳ ಕಾಲ ಮಾರ್ಕ್ ರುಟ್ಟೆ ನೆದರ್‌ಲ್ಯಾಂಡ್‌ನ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಇನ್ನು ಮುಂದೆ ಅವರು NATOದ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜುಲೈ 2ರಂದು ಡಚ್ ಕಿಂಗ್ ವಿಲ್ಲೆಮ್-ಅಲೆಕ್ಸಾಂಡರ್ ಅವರು ದೇಶದ ಹೊಸ ಸರ್ಕಾರಕ್ಕೆ ಒಪ್ಪಿಗೆ ನೀಡಿ, ಪ್ರಮಾಣ ವಚನ ಬೋಧಿಸಿದರು.
ಇದನ್ನೂ ಓದಿ: ಕೀರ್ ಸ್ಟಾರ್ಮರ್ ಬ್ರಿಟನ್ ಪ್ರಧಾನಿ, ಉಪ ಪ್ರಧಾನ ಮಂತ್ರಿಯಾಗಿ ಏಂಜೆಲಾ ರೇನರ್ ನೇಮಕ
ಪ್ರಧಾನಿ ಡಿಕ್ ಸ್ಕೂಫ್ ಡಚ್ ಗುಪ್ತಚರ ಸಂಸ್ಥೆ ಮತ್ತು ಭಯೋತ್ಪಾದನಾ ನಿಗ್ರಹ ಕಚೇರಿಯ ಮಾಜಿ ಮುಖ್ಯಸ್ಥರಾಗಿದ್ದರು. ಜುಲೈ 2ಕ್ಕೆ ಹ್ಯೂಸ್ ಟೆನ್ ಬಾಷ್ ಅರಮನೆಯಲ್ಲಿ ಅಧಿಕೃತವಾಗಿ ಪ್ರಧಾನಿ ಮಂತ್ರಿ ಸ್ಥಾನಕ್ಕೆ ಸಹಿ ಹಾಕಿದರು. ಇವರು ಜತೆಗೆ 15 ಜನ ಮಂತ್ರಿಗಳಿರುವ ಹೊಸ ಸರ್ಕಾರ ರಚನೆ ಅವಕಾಶ ನೀಡಲಾಗಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ