ಆಸ್ಟ್ರೇಲಿಯಾ: ಇಂಡಿಯನ್ ಸೊಸೈಟಿ ಆಫ್ ವೆಸ್ಟರ್ನ್ ಆಸ್ಟ್ರೇಲಿಯಾ (ISWA) ಆಯೋಜಿಸಿದ್ದ ಸಭೆಯಲ್ಲಿ ಇದೆ ಮೊದಲ ಬಾರಿಗೆ ಭಾರತ ಸರ್ಕಾರದ (Indian Government) ಸಚಿವರಾದ ಪ್ರಲ್ಹಾದ್ ಜೋಶಿಯವರ (Pralhad Joshi) ನೇತೃತ್ವದ ಸಚಿವರ ನಿಯೋಗ ಅನಿವಾಸಿ ಭಾರತೀಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ISWA ಕಮ್ಯೂನಿಟಿ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ (Australia) ಪ್ರಮುಖ ಜನಪ್ರತಿನಿಧಿಗಳೊಂದಿಗೆ ಅನಿವಾಸಿ ಭಾರತೀಯರು ಹಾಜರಿದ್ದರು.
ಆಸ್ಟ್ರೇಲಿಯಾದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರ ನೇತೃತ್ವದಲ್ಲಿ ನಿಯೋಗವೊಂದು ಭೇಟಿ ಮಾಡಿದ್ದು, ಅನಿವಾಸಿ ಭಾರತೀಯರೊಂದಿಗಿನ ಸಭೆ ಅತ್ಯಂತ ಫಲಪ್ರದ ಮತ್ತು ಸಂಬಂಧ ವೃದ್ಧಿ ದೃಷ್ಟಿಯಲ್ಲಿ ಚೇತೋಹಾರಿಯಾಗಿತ್ತು ಎಂದು ಸಚಿವ ಜೋಶಿಯವರು ಟ್ವೀಟ್ ಮಾಡಿದ್ದಾರೆ.
Deputy Premier @RogerCookMLA, graced the interaction organized by ISWA, at ISWA Community Centre. Had a fruitful discussion with him over various aspects & future plans.
Inviting him to be our ‘Atithi’ by visiting India! pic.twitter.com/tvUF1z7FdK
— Pralhad Joshi (@JoshiPralhad) July 3, 2022
ನಿಯೋಗ ಭೇಟಿ ವೇಳೆ ಪ್ರಸ್ತುತಪಡಿಸಿದ ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ವಾದಿಷ್ಟ ಆಹಾರ ಹಾಗೂ ಆತ್ಮೀಯ ಸ್ವಾಗತ ತುಂಬಾ ಸಂತೋಷ ನೀಡಿದೆ. ಭವಿಷ್ಯದಲ್ಲಿ ಇಂತಹ ಇನ್ನಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದು ಜೋಶಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ವೆಸ್ಟರ್ನ್ ಆಸ್ಟ್ರೇಲಿಯಾದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅನಿವಾಸಿ ಭಾರತೀಯರಿದ್ದು ISWA ಒಂದು ಪ್ರಬಲ ಸಂಘಟನೆಯಾಗಿ ಬೆಳೆದಿದೆ. ಈ ನಿಟ್ಟಿನಲ್ಲಿ ಇಲ್ಲಿನ ಭೇಟಿ ನಮ್ಮ ಸಹೋದರ ಸಹೋದರಿಯರನ್ನು ನಮ್ಮದೇ ಮನೆಯಲ್ಲಿ ಭೇಟಿ ಮಾಡಿ, ನಮ್ಮದೇ ಮನೆಗೆ ಬಂದ ರೀತಿ ಭಾಸವಾಗುತ್ತಿದೆ ಎಂದು ಜೋಶಿ ಅವರು ಹೇಳಿದ್ದಾರೆ.
ISWA ಸಭೆಯಲ್ಲಿ ಪಶ್ಚಿಮ ಆಸ್ಟ್ರೇಲಿಯಾದ ಉಪ ಪ್ರಧಾನಿ ರೋಜರ್ ಕುಕ್, ಶಾಸಕರಾದ ಯಾಜ್ ಮುಬಾರಕೈ, ಡಾ. ಜಗದೀಶ್ ಕೃಷ್ಣನ್ ಮತ್ತು ಸ್ಯಾಮ್ ಲಿಮ್ ಉಪಸ್ಥಿತರಿದ್ದರು.
Published On - 9:19 pm, Sun, 3 July 22