ಗ್ರೀಸ್ ದೇಶದ ರಾಜಧಾನಿ ಅಥೆನ್ಸ್ನಲ್ಲಿ ಮಹಾತ್ಮ ಗಾಂಧೀಜಿಯವರ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ಗ್ರೀಸ್ಗೆ ಭೇಟಿ ನೀಡಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್.ಜೈಶಂಕರ್ ಮತ್ತು ಗ್ರೀಸ್ ದೇಶದ ವಿದೇಶಾಂಗ ವ್ಯವಹಾರಗಳ ಸಚಿವ ನಿಕೋಸ್ ಡೆಂಡಿಯಾಸ್ ಜತೆಗೂಡಿ ಈ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಈ ಸಮಯದಲ್ಲಿ ಅಥೆನ್ಸ್ನ ಮೇಯರ್ ಕೂಡ ಹಾಜರಿದ್ದರು. ಕಾರ್ಯಕ್ರಮದ ಬಳಿಕ ಟ್ವಿಟರ್ನಲ್ಲಿ ಫೋಟೋ ಶೇರ್ ಮಾಡಿದ ಎಸ್. ಜೈಶಂಕರ್ ಅವರು, ಮಹಾತ್ಮ ಗಾಂಧೀಜಿಯವರ ಸಂದೇಶದ ಸಾರ್ವತ್ರಿಕತೆಯನ್ನು ವಿಶ್ವದ ಎಲ್ಲೆಡೆ ಗುರುತಿಸಲಾಗಿದೆ. ಎಷ್ಟೇ ಕಾಲವಾದರೂ ಅದು ಸದಾ ಹಸಿರಾಗಿರುತ್ತದೆ ಎಂದು ಹೇಳಿದ್ದಾರೆ.
ಇನ್ನು ಎಸ್.ಜೈಶಂಕರ್ ಅವರ ಗ್ರೀಸ್ ಪ್ರವಾಸದ ವೇಳೆ ಎರಡೂ ದೇಶಗಳು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿವೆ. ಮುಖ್ಯವಾಗಿ ಪೂರ್ವ ಮೆಡಿಟರೇನಿಯನ್, ಸೈಪ್ರಸ್ ಮತ್ತು ಲಿಬಿಯಾದ ಇತ್ತೀಚೆಗಿನ ಬೆಳವಣಿಗೆ ಕುರಿತು ವ್ಯಾಪಕ ಚರ್ಚೆ ನಡೆದಿದೆ. ಗ್ರೀಕ್ನ ವಿದೇಶಾಂಗ ವ್ಯವಹಾರಗಳ ಮಂತ್ರಿ ನಿಕೋಸ್, ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಒಪ್ಪಂದಕ್ಕೆ ಸಹಿ ಹಾಕಿ ಭಾರತಕ್ಕೆ ಹಸ್ತಾಂತರಿಸಿದ್ದಾರೆ. ಹಾಗೇ, ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ಅಭಿವೃದ್ಧಿ ಬಗ್ಗೆ ಸಮಗ್ರ ಮತ್ತು ವ್ಯಾಪಕ ಚರ್ಚೆ ನಡೆದಿದೆ.
ಕಳೆದ 18ವರ್ಷಗಳಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರೊಬ್ಬರು ಗ್ರೀಸ್ ದೇಶಕ್ಕೆ ಭೇಟಿ ಕೊಡುತ್ತಿರುವುದು ಇದೇ ಮೊದಲಬಾರಿಯಾಗಿದೆ. ಇಂಡೋ ಪೆಸಿಫಿಕ್, ಭಯೋತ್ಪಾದನಾ ನಿಗ್ರಹ, ಯುಎನ್ ಸುಧಾರಣೆಗಳ ಬಗ್ಗೆ ಎರಡೂ ದೇಶಗಳ ಸಚಿವರು ಮಾತುಕತೆಯಾಡಿದ್ದಾರೆ. ಎರಡೂ ದೇಶಗಳ ನಡುವಿನ ಸ್ನೇಹವನ್ನು ಇನ್ನಷ್ಟು ವೃದ್ಧಿಸುವ ನಿಟ್ಟಿನಲ್ಲಿ ಹಲವು ವಿಚಾರಗಳ ವಿನಿಮಯ ಮಾಡಿಕೊಂಡಿದ್ದಾರೆ.
Joined FM @NikosDendias and Mayor of Athens @KBakoyannis at the unveiling of Mahatma Gandhi’s statue. The universality and timelessness of the Mahatma’s message is recognised around the world. pic.twitter.com/ze9Xlxr96O
— Dr. S. Jaishankar (@DrSJaishankar) June 26, 2021
ಇದನ್ನೂ ಓದಿ: ಆಯುರ್ವೇದದ ಪ್ರಕಾರ ಬೆಳಗ್ಗೆ ಬೇಗ ಏಳಲು ಒಳ್ಳೆಯ ಸಮಯ ಯಾವುದು?
(Minister S Jaishankar along with Greek Minister Nikos Dendias unveiled a Mahatma Gandhi statue in Athens)